Advertisement

ವರದಕ್ಷಿಣೆಗಾಗಿ ಪತ್ನಿ ನೇತುಹಾಕಿದ!

10:20 AM Apr 17, 2018 | Karthik A |

ಶಹಜಹಾನ್ಪುರ: ವರದಕ್ಷಿಣೆಗಾಗಿ ಪತ್ನಿಯನ್ನು ಪೀಡಿಸುತ್ತಿದ್ದ ವ್ಯಕ್ತಿಯೊಬ್ಬ ಆಕೆಯನ್ನು ಬೆಲ್ಟಿನಿಂದ ಮನಬಂದಂತೆ ಥಳಿಸಿ, ಸೀಲಿಂಗ್‌ ಫ್ಯಾನ್‌ಗೆ ನೇತುಹಾಕಿದ ಮನಕಲಕುವ ಘಟನೆ ಉತ್ತರಪ್ರದೇಶದ ಶಹಜಹಾನ್ಪುರದಲ್ಲಿ ನಡೆದಿದೆ. ಈ ಹಿಂಸಾಚಾರದ ಸಂಪೂರ್ಣ ದೃಶ್ಯಾವಳಿಯನ್ನು ಆತ ಪತ್ನಿಯ ಕುಟುಂಬದವರಿಗೆ ಕಳುಹಿಸಿ, ವರದಕ್ಷಿಣೆ ನೀಡದಿದ್ದರೆ ಮತ್ತಷ್ಟು ಹಿಂಸೆ ನೀಡುವ ಬೆದರಿಕೆ ಒಡ್ಡಿದ್ದಾನೆ.

Advertisement

ಆತ ಮಹಿಳೆಗೆ ತವರಿನಿಂದ 50,000 ರೂ. ವರದಕ್ಷಿಣೆ  ತರಲು ಹೇಳಿದ್ದ. ಮಹಿಳೆ ನಿರಾಕರಿಸಿದಾಗ ಈ ಹಿಂಸಾಚಾರ ನಡೆಸಿದ್ದಾನೆ. ‘ನನ್ನ ಗಂಡ ನನ್ನನ್ನು ಸತತವಾಗಿ ನಾಲ್ಕು ಗಂಟೆಗಳ ಕಾಲ ಥಳಿಸಿದ. ನಾನು ಪ್ರಜ್ಞಾಹೀನಳಾದೆ. ನನಗೆ ಪ್ರಜ್ಞೆ ಬರುತ್ತಲೇ ಆತ ನನ್ನ ಕೈಗಳನ್ನು ಫ್ಯಾನಿಗೆ ಕಟ್ಟಿ ನೇತುಹಾಕಿದ್ದ ಎಂದು ಮಹಿಳೆ ಹೇಳಿದ್ದಾರೆ. ವರದಕ್ಷಿಣೆ ನಿಗ್ರಹ ಕಾಯ್ದೆ ಅಡಿ ವ್ಯಕ್ತಿ ಮತ್ತು ಆತನ ಕುಟುಂಬದ ಇತರ ನಾಲ್ವರ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next