Advertisement

50 ಕೋಟಿ ದುರಾಸೆ; ನಿಗೂಢ ವಾಮಾಚಾರಕ್ಕೆ ತಲೆಬುರುಡೆಗಾಗಿ ವ್ಯಕ್ತಿಯ ಹ*ತ್ಯೆ!!

02:17 PM Dec 08, 2024 | Team Udayavani |

ಗಾಜಿಯಾಬಾದ್ : ಧಾರ್ಮಿಕ ವಿಧಿ ವಿಧಾನಗಳ ನಂತರ ಕನಿಷ್ಠ 50 ರಿಂದ 60 ಕೋಟಿ ರೂಪಾಯಿಗಳು ಸಿಗಬಹುದೆಂಬ ದುರಾಸೆಯಲ್ಲಿ ಇಬ್ಬರು ತಾಂತ್ರಿಕರ ಸೂಚನೆಯ ವ್ಯಕ್ತಿಯೊಬ್ಬನನ್ನು ಹ*ತ್ಯೆಗೈದು ಆತನ ತಲೆಬುರುಡೆಯನ್ನು ಅತೀಂದ್ರಿಯ ಅಭ್ಯಾಸಗಳಿಗೆ ಬಳಸಿದ ನಾಲ್ವರು ಆರೋಪಿಗಳನ್ನು   ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.

Advertisement

ಪೊಲೀಸರ ಪ್ರಕಾರ,ಬಂಧಿತ ಆರೋಪಿಗಳು ಮೂಲತಃ ಬಿಹಾರ ಮೂಲದವರಾಗಿದ್ದು, ದೆಹಲಿಯಲ್ಲಿ ಇ-ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅವರಲ್ಲಿ ಇಬ್ಬರು ತಮ್ಮ ಸ್ನೇಹಿತರೊಬ್ಬರಿಗೆ ತಾವು ಯೂಟ್ಯೂಬ್‌ನಲ್ಲಿ ಬ್ಲ್ಯಾಕ್ ಮ್ಯಾಜಿಕ್ ಆಚರಣೆಗಳನ್ನು ಕಲಿತಿದ್ದೇವೆ, ಮಾನವ ತಲೆಬುರುಡೆ ಬಳಸಿ ವಾಮಾಚಾರ ಮಾಡಿದರೆ ಬಹಳ ಬೇಗನೆ ಶ್ರೀಮಂತರಾಗಬಹುದು ಎಂದು ಹೇಳಿ ನಂಬಿಸಿದ್ದರು.

ಬಂಧಿತ ಆರೋಪಿಗಳನ್ನು ವಿಕಾಸ್ (28) ಅಲಿಯಾಸ್ ಪರಮಾತ್ಮ, ನರೇಂದ್ರ, ಪವನ್ ಕುಮಾರ್ ಮತ್ತು ಪಂಕಜ್ ಎಂದು ಗುರುತಿಸಲಾಗಿದೆ. ಮೃತನ ತಲೆಬುರುಡೆ ಮತ್ತು ವ್ಯಕ್ತಿಯ ಹತ್ಯೆಗೆ ಬಳಸಿದ ಹರಿತವಾದ ಆಯುಧಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಪರಾಧ 2024 ರ ಜೂನ್ ನಲ್ಲಿ ನಡೆದಿದ್ದು, ಪೊಲೀಸರು ಗಾಜಿಯಾಬಾದ್‌ನ ಚರಂಡಿಯಿಂದ ತಲೆಯಿಲ್ಲದ ಮೃತ ದೇಹವನ್ನು ವಶಪಡಿಸಿಕೊಂಡಿದ್ದರು.ಪ್ರಕರಣ ದಾಖಲಿಸಿ ತನಿಖೆಯನ್ನು ಪ್ರಾರಂಭಿಸಿ ಆಗಸ್ಟ್‌ನಲ್ಲಿ ಇಬ್ಬರು ಆರೋಪಿಗಳಾದ ವಿಕಾಸ್ ಗುಪ್ತಾ (24) ಅಲಿಯಾಸ್ ಮೋಟಾ ಮತ್ತು ಧನಂಜಯ್ (25) ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೃತ್ಯದ ಹಿಂದಿನ ಉದ್ದೇಶ ಬಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next