Advertisement

Bareilly ಮಂಗನಿಗೆ ಬೆದರಿ ಟೆರೇಸ್‌ನಿಂದ ಬಿದ್ದು ಸಾವು

08:27 PM Aug 21, 2023 | Team Udayavani |

ಬರೇಲಿ:ಮಂಗಗಳ ಗುಂಪಿಗೆ ಹೆದರಿ ಓಡಿದ ವ್ಯಕ್ತಿ ಕಟ್ಟಡ ತಾರಸಿಯಿಂದ ಬಿದ್ದು ಅಸುನೀಗಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

Advertisement

ರೂಪ್‌ಚಂದ್‌ ಎಂಬುವರು ಕಟ್ಟಡ ತಾರಸಿಯಲ್ಲಿ ಇದ್ದಾಗ ಮಂಗಗಳ ಗುಂಪು ಅಲ್ಲಿಗೆ ಬಂದಿತ್ತು. ಅದನ್ನು ನೋಡಿ ರೂಪ್‌ಚಂದ್‌ ಓಡಲು ಪ್ರಯತ್ನ ಮಾಡಿದ್ದಾರೆ.

ಹೆದರಿಕೆಯಿಂದಾಗಿ ಯಾವ ದಾರಿಯಲ್ಲಿ ತಪ್ಪಿಸಿಕೊಳ್ಳಬೇಕು ಎಂಬ ವಿಚಾರ ಗಮನಕ್ಕೆ ಬಾರದೆ ಕಟ್ಟಡದಿಂದ ಕೆಳಗೆ ಬಿದ್ದು ಅಸುನೀಗಿದರು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೇಳಿದ್ದಾರೆ. ಅವರು ಮೂಲತಃ ಪಶ್ಚಿಮ ಬಂಗಾಳದವರು.

Advertisement

Udayavani is now on Telegram. Click here to join our channel and stay updated with the latest news.

Next