ಲಕ್ನೋ: ಹಾವು ಹಿಡಿಯುವುದರಲ್ಲಿ ಜನಪ್ರಿಯರಾಗಿದ್ದ ವ್ಯಕ್ತಿಯೊಬ್ಬ ವಿಷಪೂರಿತ ಹಾವನ್ನು ಹಿಡಿದ ಬಳಿಕ ಆ ಹಾವು ಕಚ್ಚಿದ ಪರಿಣಾಮ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಷಹಜಹಾನ್ ಪುರ್ ನಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಟಿಪ್ಪು ಬಂದಾಗಲೇ ಹೆದರಲಿಲ್ಲ,ಸಿದ್ದು ಸುಲ್ತಾನ್ ಗೆ ಹೆದರುತ್ತೇವಾ?: ಪ್ರತಾಪ್ ಸಿಂಹ
ಹಾವು ಕಡಿತದಿಂದ ಸಾವನ್ನಪ್ಪಿರುವ ವ್ಯಕ್ತಿಯನ್ನು ದೇವೇಂದ್ರ ಮಿಶ್ರಾ ಎಂದು ಗುರುತಿಸಲಾಗಿದೆ. ತನ್ನ ಗ್ರಾಮದಲ್ಲಿನ ನೆರೆಯ ಮನೆಯೊಂದರಲ್ಲಿದ್ದ ಹಾವನ್ನು ಮಿಶ್ರಾ ಅವರು ಹಿಡಿದಿದ್ದರು. ಇದು ಅತೀ ವಿಷಕಾರಿ ಹಾವುಗಳ ಪ್ರಬೇಧಗಳಲ್ಲಿ ಒಂದಾಗಿತ್ತು.
ನಂತರ ಮಿಶ್ರಾ ಹಾವನ್ನು ತನ್ನ ಕೊರಳಿಗೆ ಸುತ್ತಿಕೊಂಡು ಊರಿನಲ್ಲಿ ಸುತ್ತಾಡಿದ್ದ. ಕೋಲಿನ ಸಹಾಯದಿಂದ ಹಾವನ್ನು ಹಿಡಿಯುತ್ತಿರುವ ಮಿಶ್ರಾ ವಿಡಿಯೋ ವೈರಲ್ ಆಗಿದೆ. ಮತ್ತೊಂದು ವಿಡಿಯೋದಲ್ಲಿ ಮಗುವಿನ ಕೊರಳಿಗ ಹಾವನ್ನು ಸುತ್ತಿರುವುದು ಸೆರೆಯಾಗಿತ್ತು ಎಂದು ವರದಿ ವಿವರಿಸಿದೆ.
ಹಾವನ್ನು ಹಿಡಿದ ಸುಮಾರು ಎರಡು ಗಂಟೆಗಳ ನಂತರ ಮಿಶ್ರಾಗೆ ಹಾವು ಕಚ್ಚಿತ್ತು. ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಹಲವಾರು ಗಿಡಮೂಲಿಕೆಗಳ ಔಷಧ ನೀಡಲಾಗಿತ್ತು. ಆದರೆ ಅತಿ ವಿಷದ ಪರಿಣಾಮ ಮಿಶ್ರಾ ಮನೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.