Advertisement

ಉ.ಪ್ರ.ದಲ್ಲಿ ಮಾತಿನ ಯುದ್ಧ; ಮೋದಿ ಆರೋಪಕ್ಕೆ ಅಖಿಲೇಶ್ ಆಕ್ರೋಶ

03:45 AM Feb 21, 2017 | Team Udayavani |

ಲಕ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣಾ ಕಣದಲ್ಲೀಗ ಮಾತಿನ ಯುದ್ಧ. ಎಲ್ಲ ಪಕ್ಷದ ನಾಯಕರ ಪ್ರಚೋದನಕಾರಿ ಭಾಷಣಕ್ಕೆ ಮತದಾರ ತಬ್ಬಿಬ್ಟಾಗಿದ್ದಾನೆ! ಅಲ್ಲಿ ಕರೆಂಟ್‌ ಶಾಕ್‌ ಹೊಡೆದಿದೆ, ಕತ್ತೆಯೂ ಕಿವಿ ಅಗಲಿಸಿದೆ, ಬಚ್ಚನ್‌ ಬೆಪ್ಪಗಾಗಿದ್ದಾರೆ, ಗಂಗೆ ಬಿಸಿ ಆಗಿದ್ದಾಳೆ! ಹೀಗೆ “ಡಾಂಕಿ’ ಬಾತ್‌ಗಳನ್ನು ಕೇಳಿದ ಮತದಾರ ಮಾತ್ರ ಫ‌ುಲ್‌ ಸುಸ್ತೋ ಸುಸ್ತು.

Advertisement

“ರಂಜಾನ್‌ಗೆ ಕರೆಂಟ್‌ ಕೊಡುವ ನೀವು ದೀಪಾವಳಿಗೂ ಕೂಡಿ’ ಎನ್ನುವ ಪ್ರಧಾನಿ ಮೋದಿ ಹೇಳಿಕೆಗೆ ಸಿಎಂ ಅಖೀಲೇಶ್‌ ಯಾದವ್‌ ಸೋಮವಾರ ಗರಂ ಆಗಿದ್ದಾರೆ.  “ನಾನು ಯಾರಿಗೂ ತಾರತಮ್ಯ ಮಾಡಿಲ್ಲ. ರಂಜಾನ್‌ಗೂ ವಿದ್ಯುತ್‌ ನೀಡಿದ್ದೇನೆ, ದೀಪಾವಳಿಗೂ ಕತ್ತಲಾಗದಂತೆ ನೋಡಿಕೊಂಡಿದ್ದೇನೆ. ಹೋಳಿಯಲ್ಲೂ ಬೆಳಕು ಹರಿಸಿದ್ದೇನೆ. ವಾರಾಣಸಿಯಲ್ಲಿ 24 ಗಂಟೆ ವಿದ್ಯುತ್‌ ನೀಡಿಲ್ಲ ಎಂದಾದರೆ ಮೋದಿ ಅವರು ಪವಿತ್ರ ಗಂಗೆಯ ಮೇಲೇಕೆ ಪ್ರಮಾಣ ಮಾಡಬಾರದು?’ ಎಂದು ಪ್ರಧಾನಿಗೆ ಸವಾಲು ಹಾಕಿದ್ದಾರೆ.

ಕತ್ತೆ ಪರ ಪ್ರಚಾರ ಬೇಡ!: ಬಾಲಿವುಡ್‌ನ‌ ಹಿರಿಯ ನಟ ಅಮಿತಾಭ್‌ ಬಚ್ಚನ್‌ರನ್ನೂ ಅಖೀಲೇಶ್‌ ಬಿಟ್ಟಿಲ್ಲ. “ಗುಜರಾತಿನ ಕತ್ತೆಗಳ ಬಗ್ಗೆ ಅಮಿತಾಭ್‌ ಬಚ್ಚನ್‌ ಜಾಹೀರಾತಿನಲ್ಲಿ ಪ್ರಚಾರ ನೀಡುವುದನ್ನು ಟಿವಿಯಲ್ಲಿ ನೋಡಿದೆ. ದಯವಿಟ್ಟು ನೀವು ಅಲ್ಲಿನ ಕತ್ತೆಗಳ ಪಕ್ಕ ನಿಂತು, ಪ್ರಚಾರ ಮಾಡಬೇಡಿ. ಕತ್ತೆಗಳ ಮೇಲೆ ಹೀಗೆ ಪ್ರಚಾರ ಮಾಡುವುದನ್ನು ನಾನೆಲ್ಲೂ ಕಂಡಿಲ್ಲ’ ಎಂದು ಹೇಳಿದ್ದಾರೆ. ಅಪರೂಪದ “ಗುಡ್ಕರ್‌’ ಎಂಬ ಕತ್ತೆಯ ರಕ್ಷಣೆಗೆ ಗುಜರಾತಿನಲ್ಲಿ ಜೈವಿಕ ಅಭಯಾರಣ್ಯ ಸ್ಥಾಪನೆಯಾಗಿದ್ದು, ಅದರ ಪರ ಪ್ರವಾಸೋದ್ಯಮ ರಾಯಭಾರಿ ಬಚ್ಚನ್‌ ಪ್ರಚಾರ ನಡೆಸಿದ್ದರು.

ಬೆಹನ್‌ಜಿ ಸಂಪತ್ತಿ ಪಾರ್ಟಿ!: ಇನ್ನೊಂದೆಡೆ ಪ್ರಧಾನಿ ಮೋದಿ, ಬಿಎಸ್ಪಿ ನಾಯಕಿ ವಿರುದ್ಧ ಟೀಕಾಪ್ರಹಾರ ಮುಂದುವರಿಸಿದ್ದಾರೆ. ಬಿಎಸ್ಪಿಯನ್ನು “ಬೆಹನ್‌ಜಿ ಸಂಪತ್ತಿ ಪಾರ್ಟಿ’ ಎಂದು ವ್ಯಂಗ್ಯವಾಗಿ ಅರ್ಥೈಸಿದ್ದಾರೆ. “ನೋಟು ನಿಷೇಧ ಮಾಡಿದಾಗ ಬಿಎಸ್ಪಿ- ಎಸ್ಪಿ ಮುಖಂಡರಿಗೆ ಆಘಾತವಾಗಿತ್ತು. ಈ ವಿಚಾರ ಒಂದು ವಾರ ಮುಂಚೆಯೇ ತಿಳಿಸಬೇಕಿತ್ತು. ಸರ್ಕಾರ ಸಿದ್ಧತೆ ಮಾಡಿಕೊಳ್ಳದೆ ಈ ನೀತಿ ಜಾರಿಗೆ ತಂದಿದೆ ಎಂದು ಕಾಂಗ್ರೆಸ್‌ ಜೊತೆ ಸೇರಿಕೊಂಡು ವಾದಿಸಿದ್ದರು. ಚುನಾವಣೆ ವೇಳೆ ಹೀಗೆ ಮಾಡಿದ್ದು ಸರಿಯಲ್ಲ ಎಂದು ಮಾಯಾವತಿಯೂ ಹೇಳಿದ್ದರು. ಬಿಎಸ್ಪಿ ಇಂದು ಬೆಹನ್‌ಜಿ ಸಂಪತ್ತಿ ಪಾರ್ಟಿಯೇ ಆಗಿಬಿಟ್ಟಿದೆ. ನೋಟು ಅಮಾನ್ಯದ ವೇಳೆ ಅವರ ಸಹೋದರನ ಖಾತೆಗೆ 100 ಕೋಟಿ ರೂ. ಹಣ ಹಾಕಿರುವುದನ್ನು ನಾನು ಬಹಿರಂಗ ಪಡಿಸುತ್ತೇನೆ’ ಎಂದು ಹೇಳಿದ್ದಾರೆ.

“20 ವರ್ಷಗಳ ಹಿಂದೆ ಗುಜರಾತಿನ ಕಚ್‌ಗೆ ಯಾವ ಸರ್ಕಾರಿ ಅಧಿಕಾರಿಯೂ ವರ್ಗಾವಣೆ ಬಯಸುತ್ತಿರಲಿಲ್ಲ. ಆದರೆ, ಭೂಕಂಪದ ನಂತರ ಅಲ್ಲಿನ ಅಭಿವೃದ್ಧಿ ನೋಡಿದ ಮೇಲೆ ಅದರ ಮೇಲಿನ ಅಭಿಪ್ರಾಯವೇ ಬದಲಾಗಿದೆ. ಎಲ್ಲ ಸಂಪತ್ತು ಇರುವ ಬುಂದೇಲ್‌ಖಂಡ್‌ ಪ್ರದೇಶವನ್ನೂ ಅಭಿವೃದ್ಧಿಯಲ್ಲಿ ನಂ.1 ಪಟ್ಟಣವಾಗಿ ಪರಿವರ್ತಿಸುತ್ತೇನೆ’ ಎಂದು ಆಸ್ವಾಸನೆ ನೀಡಿದ್ದಾರೆ.

Advertisement

ಮಾಯಾವತಿ ತಿರುಗೇಟು: ಬಿಎಸ್ಪಿಯನ್ನು “ಬೆಹನ್‌ಜಿ ಸಂಪತ್ತಿ ಪಾರ್ಟಿ’ ಎಂದು ವ್ಯಾಖ್ಯಾನಿಸಿದ್ದಕ್ಕೆ ಪಕ್ಷದ ಮುಖ್ಯಸ್ಥೆ ಮಾಯಾವತಿ ಖಾರವಾಗಿ ತಿರುಗೇಟು ನೀಡಿದ್ದು, ಮೋದಿ ಅವರನ್ನು “ಮಿ. ನೆಗೆಟಿವ್‌ ದಲಿತ್‌ ಮ್ಯಾನ್‌’ ಎಂದು ಜರಿದಿದ್ದಾರೆ. “ಬಿಎಸ್ಪಿಯನ್ನು ಮೋದಿ ತಪ್ಪಾಗಿ ಅರ್ಥೈಸಿದ್ದಾರೆ. ಬಿಎಸ್ಪಿ ಸಂಪತ್ತಿನ ಪಕ್ಷ ಅಲ್ಲವೇ ಅಲ್ಲ. ರಾಜ್ಯದ ಎಲ್ಲ ದಲಿತರು ನನ್ನನ್ನೇ ಸಂಪತ್ತಿನಂತೆ ನೋಡುತ್ತಿದ್ದಾರೆ. ನಾನು ಮದ್ವೆ ಆದವಳಲ್ಲ. ಮೋದಿ ರೀತಿ ಮದ್ವೆಯ ನಂತರ ಬೇರೊಬ್ಬರಿಗೆ ಆಸ್ತಿಯನ್ನೂ ಮಾಡಿಟ್ಟವಳಲ್ಲ. ನಾನು ನನ್ನ ಬದುಕನ್ನು ದಲಿತರು, ಮುಸ್ಲಿಮರಿಗಾಗಿಯೇ ಮೀಸಲಿಟ್ಟಿದ್ದೇನೆ’ ಎಂದು ಹೇಳಿದ್ದಾರೆ.

ಖನಿಜ ಸಂಪತ್ತು ಯಥೇತ್ಛವಾಗಿರುವ ಬುಂದೇಲ್‌ಖಂಡ್‌ 70 ವರ್ಷದಿಂದ ಅಭಿವೃದ್ಧಿಯನ್ನೇ ಮಾಡಿಲ್ಲ. ಬಿಜೆಪಿಗೆ ಅಧಿಕಾರ ಸಿಕ್ಕರೆ 5 ವರ್ಷಗಳಲ್ಲಿ ಕಚ್‌ನಂತೆ ಅಭಿವೃದ್ಧಿ ಮಾಡುತ್ತದೆ.
– ನರೇಂದ್ರ ಮೋದಿ, ಪ್ರಧಾನಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next