ಲಕ್ನೋ: ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲೇಬೇಕು. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ನಾವು ಮಂದಿರ ಕಟ್ಟುತ್ತೇವೆ’ ಎಂದು ಪ್ರತಿಜ್ಞೆ ಮಾಡಿರುವ ಉ.ಪ್ರ ಹೋಮ್ ಗಾರ್ಡ್ಸ್ ಡಿ.ಜಿ. ಸೂರ್ಯ ಕುಮಾರ್ ಶುಕ್ಲಾ, ವಿವಾದಕ್ಕೆ ನಾಂದಿ ಹಾಡಿದ್ದಾರೆ. ಶುಕ್ರವಾರ, ಆಯೋಜಿಸಲಾಗಿದ್ದ ‘ರಾಮ ಮಂದಿರ’ ಕುರಿತಾದ ಕಾರ್ಯಕ್ರಮವೊಂದರಲ್ಲಿ ರಾಮ ಮಂದಿರ ಕಟ್ಟುವ ಪ್ರತಿಜ್ಞೆ ಸ್ವೀಕರಿಸುತ್ತಿರುವ ಅವರ ವಿಡಿಯೋ ಕ್ಲಿಪ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರತಿಜ್ಞೆಯ ಜತೆಗೆ, ಇತ್ತೀಚೆಗೆ, ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಬಲಪಂಥೀಯ ಸಂಘಟನೆಗಳೇ ಕಾರಣ ಎಂದು ಹೇಳಿರುವುದೂ ಎಲ್ಲೆಡೆ ಸಂಚಲನ ಉಂಟು ಮಾಡಿದೆ. ಆಗಸ್ಟ್ ಅನಂತರ ನಿವೃತ್ತಿಯಾಗಲಿರುವ 1982ರ ಬ್ಯಾಚ್ ಐಪಿಎಸ್ ಅಧಿಕಾರಿ ಶುಕ್ಲಾ, ತಮ್ಮ ಈ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕಾಸ್‌ಗಂಜ್‌ಕೋಮು ಗಲಭೆಯಲ್ಲಿ ಬಲಪಂಥೀಯರ ಕೈವಾಡವಿದೆ ಎಂದು ಜಾಲತಾಣದಲ್ಲಿ ಹಾಕಿಕೊಂಡಿದ್ದ ಬರೇಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಘವೇಂದ್ರ ವಿಕ್ರಮ್ ಸಿಂಗ್, ಆನಂತರ, ತಮ್ಮ ಹೇಳಿಕೆಯನ್ನು ಡಿಲೀಟ್ ಮಾಡಿದ್ದರು.