Advertisement

UP: ವಿವಾಹದ ಮಧ್ಯೆ ಬಾತ್‌ರೂಮ್‌ ಹೋಗಿ ಬರುವುದಾಗಿ ಹೇಳಿ ಚಿನ್ನ – ನಗದು ಜತೆ ವಧು ಪರಾರಿ

10:29 AM Jan 05, 2025 | Team Udayavani |

ಲಕ್ನೋ: ವಿವಾಹದ ಸಂಪ್ರದಾಯದ ಮಧ್ಯದಲ್ಲೇ ವಧುವೊಬ್ಬಳು ಮಂಟಪದಿಂದ ಪರಾರಿ ಆಗಿರುವ ಘಟನೆ ಉತ್ತರ ಪ್ರದೇಶದ ಗೋರಖ್‌ ಪುರ್‌ನಲ್ಲಿ ನಡೆದಿರುವುದು ವರದಿಯಾಗಿದೆ.

Advertisement

ಸೀತಾಪುರದ ಗೋವಿಂದಾಪುರ ಗ್ರಾಮದ ರೈತ ಕಮಲೇಶ್ ಎನ್ನುವವರು ಮೊದಲ ಪತ್ನಿಯನ್ನು ಕಳೆದುಕೊಂಡ ಬಳಿಕ ಇತ್ತೀಚೆಗೆ ಎರಡನೇ ಮದುವೆ ಆಗಲು ಸಿದ್ಧರಾಗಿದ್ದರು. ಕೆಲ ಸಂಬಂಧಗಳನ್ನು ನೋಡಿದ ಬಳಿಕ ದಲ್ಲಾಳಿ ಮೂಲಕ ಒಂದು ಹೆಣ್ಣನ್ನು ನೋಡಿ ಆಕೆಯ ಜತೆ ಮದುವೆ ಆಗುವುದಾಗಿ ಹೇಳಿ ದಲ್ಲಾಳಿಗೆ 30 ಸಾವಿರ ಕೊಟ್ಟು ಮದುವೆಗೆ ಸಿದ್ಧರಾಗಿದ್ದರು.

ಅದರಂತೆ 40ರ ಹರೆಯದ ಕಮಲೇಶ್‌ ಜತೆ ವಿವಾಹಕ್ಕೆ ಒಪ್ಪಿ ವಧು ಹಾಗೂ ಆಕೆಯ ತಾಯಿ ಭರೋಹಿಯಾದ ಶಿವ ದೇವಾಲಯಕ್ಕೆ ಬಂದಿದ್ದರು. ಇನ್ನೇನು ಕೆಲವೇ ನಿಮಿಷದಲ್ಲಿ ತಾಳಿ ಕಟ್ಟಿ ಮದುವೆ ಮುಗಿಯುವ ಹೊತ್ತಿನಲ್ಲೇ ವಧು ಬಾತ್‌ರೂಮ್‌ಗೆ ಹೋಗಿ ಬರುವುದಾಗಿ ಹೇಳಿದ್ದಾಳೆ.

ಬಾತ್‌ರೂಮ್‌ಗೆ ಹೋ ಗಿ ವಧು ಚಿನ್ನ ಹಾಗೂ ನಗದು ಜತೆ ಅಲ್ಲಿಂದಲೇ ಪರಾರಿ ಆಗಿದ್ದಾಳೆ. ಇದಾದ ಬಳಿಕ ಮೆಲ್ಲನೆ ವಧುವಿನ ತಾಯಿ ಕೂಡ ಪರಾರಿ ಆಗಿದ್ದಾರೆ.

ತಾನು ಮೋಸ ಹೋಗಿದ್ದೇನೆ ಎಂದು ಅರಿತ ಕಮಲೇಶ್‌ ತನಗಾದ ಅನ್ಯಾಯದ ಬಗ್ಗೆ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.

Advertisement

“ನನ್ನ ಪತ್ನಿ ಆಗಬೇಕಿದ್ದವಳಿಗೆ ಸೀರೆ, ಬ್ಯೂಟಿ ಪ್ರಾಡೆಕ್ಟ್ಸ್ ಮತ್ತು ಆಭರಣಗಳನ್ನು ನೀಡಿದ್ದೆ. ಇದರ ಜತೆ ಮದುವೆಯ ವೆಚ್ಚವನ್ನು ಭರಿಸಿದ್ದೆ. ನಾನು ನನ್ನ ಕುಟುಂಬವನ್ನು ಪುನರ್ನಿರ್ಮಿಸಲು ಬಯಸಿದ್ದೆ ಆದರೆ ಎಲ್ಲವನ್ನೂ ಕಳೆದುಕೊಂಡೆ” ಎಂದು ಕಮಲೇಶ್‌ ಹೇಳಿದ್ದಾರೆ.

ಈ ಬಗ್ಗೆ ಇದುವರೆಗೆ ದೂರು ದಾಖಲಾಗಿಲ್ಲ. ದೂರು ದಾಖಲಿಸಿದರೆ ತನಿಖೆ ನಡೆಸಲಾಗುವುದೆಂದು ದಕ್ಷಿಣ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next