Advertisement

UP; 60,000 ಕಾನ್‌ಸ್ಟೆಬಲ್‌ ಹುದ್ದೆಗೆ 48 ಲಕ್ಷ ಮಂದಿ ಆಕಾಂಕ್ಷಿಗಳು!!

01:49 AM Aug 25, 2024 | Team Udayavani |

ಲಕ್ನೋ: ಉತ್ತರ ಪ್ರದೇಶದಲ್ಲಿ ಆರಂಭವಾಗಿರುವ ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆಗೆ ದಾಖಲೆಯ ಪ್ರಮಾಣದಲ್ಲಿ ಆಕಾಂಕ್ಷಿಗಳಿದ್ದು, ರಾಜ್ಯದಲ್ಲಿ ನಡೆಯು ತ್ತಿರುವ ಬೃಹತ್‌ ಪರೀಕ್ಷೆ ಎನಿಸಿಕೊಂಡಿದೆ. 60,244 ಹುದ್ದೆಗಳಿಗೆ ಬರೋಬ್ಬರಿ 46 ಲಕ್ಷ ಮಂದಿ ಆಕಾಂಕ್ಷಿ ಗಳು ಪರೀಕ್ಷೆ ಬರೆಯುತ್ತಿದ್ದಾರೆ. ಶುಕ್ರವಾರ ಮೊದಲ ಹಂತದ ಪರೀಕ್ಷೆ ಯಾವುದೇ ದೊಡ್ಡ ಸಮಸ್ಯೆಗಳಿಲ್ಲದೆ ಮುಕ್ತಾಯವಾಗಿದೆ. ಶನಿವಾರ 2ನೇ ಹಂತದ ಪರೀಕ್ಷೆ ಮುಕ್ತಾಯವಾಗಿದೆ. ಆ.25, 30 ಮತ್ತು 31ರಂದು ಮುಂದಿನ ಹಂತದ ಪರೀಕ್ಷೆಗಳು ನಡೆಯಲಿವೆ. ಶುಕ್ರವಾರ ನಡೆದ ಪರೀಕ್ಷೆಯನ್ನು ಶೇ.21ರಷ್ಟು ಮಂದಿ ತಪ್ಪಿಸಿಕೊಂಡಿದ್ದು, ಅಕ್ರಮ ಎಸಗಲು ಪ್ರಯತ್ನಿಸಿದ 61 ಮಂದಿಯನ್ನು ಬಂಧಿಸಲಾಗಿದೆ. ಶುಕ್ರವಾರದ ಪರೀಕ್ಷೆಗಾಗಿ 6.5 ಲಕ್ಷ ಮಂದಿ ಅಡ್ಮಿಟ್‌ ಕಾರ್ಡ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next