Advertisement
ಕನ್ಯಾಕುಮಾರಿಯಲಿರುವ ಕೈಗಳನ್ನು ಕೆಳಗಿಳಿಸಿಕೊಂಡು ನೇರನೋಟ ನೋಡುತ್ತಿರುವ ವಿವೇಕಾನಂದರ ಪ್ರಸಿದ್ಧ ಭಂಗಿಯಲ್ಲೇ ಈ ಶಿಲ್ಪವನ್ನು ರಚಿಸಲಾಗಿದ್ದು, ಮುರ್ಡೇಶ್ವರದಲ್ಲಿನ ಅತೀ ಎತ್ತರದ ಶಿವನ ಪ್ರತಿಮೆ ನಿರ್ಮಿಸಿದ ಬೆಂಗಳೂರಿನ ಶ್ರೀಧರಮೂರ್ತಿ ಅವರ ೪೦ಮಂದಿಯ ತಂಡ ಸತತ ೬ತಿಂಗಳು ಕೆಲಸ ನಿರ್ವಹಿಸಿ ಮೂರ್ತಿ ನಿರ್ಮಿಸಿದೆ. ಈ ಪ್ರತಿಮೆ ಇದೀಗ ಗಿನ್ನೆಸ್ ದಾಖಲೆಗಾಗಿ ನೋಂದಣಿಯಾಗಿದ್ದು ಈಗಾಗಲೇ ಸಾಕಷ್ಟು ಮಂದಿಯ ಗಮನ ಸೆಳೆಯ್ತುತಿದೆ.