Advertisement

Holalkere: ನಾಟಕಗಳಿಂದ ಮನುಷ್ಯನ ಭಾವನೆಗಳ ಅನಾವರಣ: ಡಾ. ಮಧುಸೂದನ್

12:30 PM Jan 12, 2024 | Team Udayavani |

ಹೊಳಲ್ಕೆರೆ: ನಾಟಕಗಳಿಂದ ಮನುಷ್ಯನ ಭಾವನೆಗಳ ಅನಾವರಣವಾಗುತ್ತದೆ ಎಂದು ಚಿತ್ರದುರ್ಗದ ಆಂಗ್ಲಭಾಷಾ ಪ್ರಾಧ್ಯಾಪಕ ಡಾ.ಪಿ.ಎನ್.ಮಧುಸೂದನ್ ತಿಳಿಸಿದರು.

Advertisement

ಅವರು ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ತಿರುಕನೂರಿನಲ್ಲಿ ರಂಗದಾಸೋಹ ಮೂರು ನಾಟಕಗಳ ಉತ್ಸವದ 2ನೇ ದಿನದ ಗುರುವಾರ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಟಕಗಳು ಪುರಾಣಗಳ ಅಂಶಗಳನ್ನೊಳಗೊಂಡ, ಅಲ್ಲಿ ಪುರಾಣಗಳಲ್ಲಿ ಬರುವ ಅನೇಕ ಕಲ್ಪನಾ ವಿಷಯಗಳನ್ನು ತೆರೆಯ ಮೇಲೆ ತರುವ ಕಾರ್ಯ ಮಾಡುತ್ತವೆ ಎಂದರು.

ಒಬ್ಬ ನಟ ಕರುಣೆ ಮತ್ತು ಭಯವನ್ನುಂಟು ಮಾಡುವಂತಿರಬೇಕು. ನಟನ ಭಾವನೆಗಳ ಅನಾವರಣವನ್ನುಂಟು ಮಾಡುವನು ಎಂದು ಖ್ಯಾತ ತತ್ವಜ್ಞಾನಿ ಅರಿಸ್ಟಾಟಲ್ ಹೇಳಿದ್ದನ್ನು ನೆನಪಿಸಿ, ನಾಟಕಗಳು ಭಾಷೆಯ ಸ್ವರೂಪನವನ್ನು ಮೀರುವಂತಿರಬಾರದು ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಎಂ.ಶ್ರೀಕಂಠಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಜಾಗೃತ ಮನಸ್ಸನ್ನು ಎಚ್ಚರಿಸಿಕೊಂಡು ಅಭ್ಯಾಸ ಮಾಡಿದಾಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ ಎಂದರು.

Advertisement

ಮಲ್ಲಾಡಿಹಳ್ಳಿ ಅಮೃತ್ ಆರ್ಗ್ಯಾನಿಕ್ಸ್ ಮಾಲೀಕ ಕೆ.ನಾಗರಾಜ್ ಮಾತನಾಡಿ, ಸ್ವಾಮೀಜಿದ್ವಯರ ಸೇವಾ ಕಾರ್ಯಗಳನ್ನು ಪುನರ್ ಸ್ಥಾಪಿಸುವ ಮೂಲಕ ಸಂಸ್ಥೆಯನ್ನು ಉತ್ತುಂಗ ಶಿಖರಕ್ಕೆ ತೆಗೆದುಕೊಂಡು ಹೋಗೋಣ ಅದಕ್ಕೆ ನಮ್ಮ ಅಮೃತ್ ಗ್ರೂಪ್ಸ್ ನ ಮೂಲಕ ಧನ ಸಹಾಯ ಮಾಡಲಾಗುವುದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಹರಿಹರದ ಖ್ಯಾತ ವೈದ್ಯ ಪ್ರವೀಣ್ ಹೆಗ್ಡೆ ಮಾತನಾಡಿ, ವಿದ್ಯಾರ್ಥಿಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಎಲ್ಲಾ ಚಟುವಟಕೆಗಳು ಪಾಲ್ಗೊಳಬೇಕು. ನಾಟಕ, ಓದು, ಆಟ ಮುಂತಾದವುಗಳು ಮಾನಸಿಕ ವಿಕಾಸಕ್ಕೆ ಸಹಾಯಕವಾಗುತ್ತವೆ ಎಂದು ಸಲಹೆ ನೀಡಿದರು.

ಸಂಸ್ಥೆಯ ಉಪಾಧ್ಯಕ್ಷ ರಾಘವೇಂದ್ರ ಪಾಟೀಲ, ಕಾರ್ಯದರ್ಶಿ ಎಸ್.ಕೆ.ಬಸವರಾಜನ್, ವಿಶ್ವಸ್ತರಾದ ಕೆ.ಡಿ.ಬಡಿಗೇರ, ಎಲ್.ಎಸ್.ಶಿವರಾಮಯ್ಯ, ವ್ಯವಸ್ಥಾಪಕ ಡಿ.ಕೆ.ಚಂದ್ರಪ್ಪ ಹಾಗೂ ಎಲ್ಲಾ ಶಾಲಾ ಕಾಲೇಜುಗಳ ಮುಖ್ಯಸ್ಥರು ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next