ಸಿಂದಗಿ: ಡಾ| ಬಿ.ಆರ್. ಅಂಬೇಡ್ಕರ್ ನೀಡಿದ ಸಂವಿಧಾನಬದ್ಧ ಹಕ್ಕು, ಮೀಸಲಾತಿ, ಸಮಾಜದಲ್ಲಿ ಅಸ್ಪೃಶ್ಯತೆ ಎಲ್ಲಿಯವರೆಗೆ ಜೀವಂತವಾಗಿರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಬೇಕೇ ಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ರಾಂಪೂರ ಪಿ.ಎ. ಗ್ರಾಮದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕು ಶಾಖೆ ಸಿಂದಗಿ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳು ಸೇರಿ ಡಾ| ಬಿ.ಆರ್. ಅಂಬೇಡ್ಕರ್‌ರವರ ಪಂಚಲೋಹದ ಪ್ರತಿಮೆ ಅನಾವರಣಗೊಳಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ರಮೇಶ ಆಸಂಗಿ, ಜಿಲ್ಲಾ ಸಂಚಾಲಕ ವೈ.ಸಿ. ಮಯೂರ ಮಾತನಾಡಿದರು. ಸಂಘಪಾಲ ಬಂತೇಜಿ, ರಾಂಪೂರ ಆರೂಢ ಮಠದ ನಿತ್ಯಾನಂದ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.
ಜಿ ಶಾಸಕ ರಮೇಶ ಭೂಸನೂರ, ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಮಾತನಾಡಿ, ತಾಲೂಕಿನ ರಾಂಪೂರ ಪಿ.ಎ. ಗ್ರಾಮದಲ್ಲಿ ಡಾ| ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿದ್ದು ಶ್ಲಾಘನೀಯ ಎಂದರು. ಜಿಪಂ ಸದಸ್ಯ ಬಿ.ಆರ್. ಸಿಸ್ಟರ್ ಅನಿತಾ ಡಿಸೋಜಾ, ಡಾ| ದಸ್ತಗೀರ ಮುಲ್ಲಾ, ಶಿವಾಜಿ ಮೆಟಗಾರ ಮಾತನಾಡಿದರು.
ಈ ವೇಳೆ ಮೈಬೂಬಸಾಬ್ ತಾಂಬೋಳಿ, ಜಿಪಂ ಮಾಜಿ ಉಪಾಧ್ಯಕ್ಷ ಸಿದ್ದರಾಮ ಪಾಟೀಲ, ವಿನಾಯಕ ಗುಣಸಾಗರ, ಶರಣು ಶಿಂಧೆ, ಅಶೋಕ ಚಲವಾದಿ, ಆರ್.ಎಂ. ಚೌರ, ಮಂಜು ಯಂಟಮಾನ, ಚಂದ್ರಕಾಂತ ಸಿಂಗೆ, ಸೋಮು ಮೇಲಿನಮನಿ, ಪ್ರಕಾಶ ಗುಡಿಮನಿ, ಶ್ರೀಕಾಂತ ಸೋಮಜಾಳ, ನೀಲಕಂಠ ಹೊಸಮನಿ, ಶರಣು ಚಲವಾದಿ, ಸೈಬಣ್ಣ ದೊಡಮನಿ, ಜೈಭೀಮ ತಳಕೇರಿ, ಸುನಂದಾ ಯಂಪೂರೆ ಇದ್ದರು.