Advertisement

ಉದ್ಘಾಟನೆಯಾದರೂ ಬಳಕೆಗೆ ಬಾರದ ಘಟಕ

10:55 AM Sep 22, 2019 | Team Udayavani |

ಗಜೇಂದ್ರಗಡ: ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಲಕ್ಷಾಂತರ ರುಪಾಯಿ ವ್ಯಯಿಸಿ ನಿರ್ಮಾಣ ಮಾಡಿದ ಶುದ್ಧ ನೀರಿನ ಘಟಕ ಉದ್ಘಾಟನೆಗೊಂಡು ಒಂಭತ್ತು ತಿಂಗಳು ಕಳೆದರೂ ಈವರೆಗೆ ಉಪಯೋಗಕ್ಕೆ ಬಂದಿಲ್ಲ.

Advertisement

ಪಟ್ಟಣದ 3, 15, 17 ಮತ್ತು 23ನೇ ವಾರ್ಡ್‌ನಲ್ಲಿ ಪುರಸಭೆಯ 2015-16ನೇ ಸಾಲಿನ ಎಸ್‌ಎಫ್‌ಸಿ, 2016-17ನೇ ಸಾಲಿನ 14ನೇ ಹಣಕಾಸು ಯೋಜನೆಯ ಸಾಮಾನ್ಯ ಮೂಲ ಅನುದಾನದಲ್ಲಿ ಅಂದಾಜು 20 ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿದೆ. ಜನತೆಗೆ ಪ್ಲೋರೈಡ್‌ನಿಂದ ಮುಕ್ತಿ ನೀಡಬೇಕೆನ್ನುವ ಉದ್ದೇಶದಿಂದ ವಿವಿಧ ಬಡಾವಣೆಗಳಲ್ಲಿ ಉದ್ಘಾಟಿಸಲಾಗಿದ್ದ ಘಟಕಗಳಿಗೆ ಶುರುವಾದ ದಿನದಿಂದ ಬೀಗ ಜಡಿಯಲಾಗಿದೆ. ಇರುವ ಕಿಟಕಿಗಳ ಗಾಜುಗಳು ಪುಡಿಯಾಗಿವೆ. ಪ್ರತಿ ಘಟಕಕ್ಕೆ 20 ಲಕ್ಷ ರೂ. ಖರ್ಚು ಮಾಡಿದ್ದು, ನಾಲ್ಕು ಘಟಕಕ್ಕೆ ಅಂದಾಜು 80 ಲಕ್ಷ ರೂ. ಖರ್ಚಾಗಿದೆ. ಪುರಸಭೆಯಿಂದ ಶ್ರೀ ಕಟ್ಟಿಬಸವೇಶ್ವರ ರಂಗ ಮಂದಿರ ಬಳಿ, ನೇಕಾರ ಕಾಲೋನಿಯಲ್ಲಿನ ನಾಗರಕಟ್ಟೆ, ಪುರಸಭೆ ಆವರಣದಲ್ಲಿ ಮತ್ತು ಉಣಚಗೇರಿ ಸೇರಿ ನೂತನವಾಗಿ ನಾಲ್ಕು ಘಟಕಗಳನ್ನು 25 ಡಿಸೆಂಬರ್‌ 2018ರಂದು ಶಾಸಕ ಕಳಕಪ್ಪ ಬಂಡಿ ಉದ್ಘಾಟಿಸಿದ್ದರು. ಇದಕ್ಕೂ ಒಂಭತ್ತು ತಿಂಗಳಿಂದ ಬೀಗ ಜಡಿಯಲಾಗಿದೆ.

ಇನ್ನು ಪುರಸಭೆ ಆವರಣದಲ್ಲಿಯ ಶುದ್ಧ ನೀರಿನ ಘಟಕ ಸುತ್ತಲೂ ಅಸುಚಿತ್ವ ರಾರಾಜಿಸುತ್ತಿದೆ. ಕಟ್ಟಡ ಸಂಪೂರ್ಣ ಗಬ್ಬೆದ್ದು ನಾರುತ್ತಿದೆ. ಅಲ್ಲದೇ ಶ್ರೀ ಕಟ್ಟಿಬಸವೇಶ್ವರ ರಂಗ ಮಂದಿರ ಮತ್ತು ನೇಕಾರ ಕಾಲೋನಿಯ ನಾಗರಕಟ್ಟಿ ಬಳಿಯ ಘಟಕದ ಸ್ಥಿತಿ ಹೇಳತೀರದಾಗಿದ್ದು, ಕೂಡಲೇ ಜಿಲ್ಲಾ ಧಿಕಾರಿಗಳು ಮಧ್ಯ ಪ್ರವೇಶಿಸಿ ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ  ವಹಿಸುತ್ತಿರುವ ಪುರಸಭೆ ಅ ಧಿಕಾರಿಗಳಿಗೆ ತಾಕೀತು ಮಾಡಿ, ಶುದ್ಧ ಕುಡಿಯುವ ನೀರಿನ ಘಟಕ ಆರಂಭಕ್ಕೆ ಕ್ರಮ ಜರುಗಿಸಬೇಕು ಎನ್ನುವುದು ಜನಸಾಮಾನ್ಯರ ಒತ್ತಾಯವಾಗಿದೆ.

ಉದ್ಘಾಟನೆಯಾಗಿ 9 ತಿಂಗಳಾಗಿದೆ. ಈವರೆಗೂ ನಾವು ಶುದ್ಧ ನೀರಿನ ಘಟಕದ ಬಾಗಿಲು ತೆರೆದಿದ್ದೆ ನೋಡಿಲ್ಲ. ನಮ್ಮ ಬಡಾವಣೆಯಲ್ಲಿ ಈ ಘಟಕ ಇದ್ದೂ ಇಲ್ಲದಂತಾಗಿದೆ. ಹೀಗಾಗಿ ನಿತ್ಯ ಖಾಸಗಿಯವರಿಂದ 20ರಿಂದ 30 ರೂ. ಕೊಟ್ಟು ಶುದ್ಧ ನೀರು ಪಡೆಯೋ ಸ್ಥಿತಿ ಬಂದಿದೆ.-ಸುರೇಶ ಶಿಂಧೆ, 15ನೇ ವಾರ್ಡ್‌ ನಿವಾಸಿ

 

Advertisement

-ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next