Advertisement

ಅಕಾಲಿಕ ಮಳೆ: ಜನಜೀವನ ಅಸ್ತವ್ಯಸ್ಥ

04:36 PM May 12, 2018 | |

ನಿಡಗುಂದಿ: ಶುಕ್ರವಾರ ಸಂಜೆ ಸುರಿದ ಮಳೆ, ಬೀಸಿದ ಭಾರಿ ಗಾಳಿಗೆ ಪಟ್ಟಣ ಸೇರಿದಂತೆ ನಾನಾ ಕಡೆ ಪತ್ರಾಸ್‌ಗಳು ಹಾರಿ, ಗಿಡಗಳು ನೆಲಕ್ಕುರುಳಿದ ಘಟನೆ ನಡೆದಿದೆ. ಪಟ್ಟಣದ ಹೊರವಲಯದ ಮುದ್ದೇಬಿಹಾಳ ಕ್ರಾಸ್‌ ಬಳಿ ಇರುವ ಅಂಗಡಿಯ ಪತ್ರಾಸ್‌ಗಳು ಹಾರಿ ಹೋಗಿವೆ. ಸುರಿದ ಮಳೆ ಕಮದಾಳ ಪುನರ್ವಸತಿ ಕೇಂದ್ರದ ಹಲವಾರು ಮನೆಗಳಿಗೆ
ಚರಂಡಿ ನೀರು ಒಮ್ಮಲೆ ನುಗ್ಗಿದೆ. ಶಂಕ್ರಯ್ಯ ಹಿರೇಮಠ ಅವರಿಗೆ ಸೇರಿದ ಮನೆಗಳು, ಅಂಗಡಿಗಳಿಗೆ ನೀರು ಹೊಕ್ಕಿದೆ. ಕೆಲ ಗಿಡಗಳು ಕೂಡಾ ನೆಲಕ್ಕುರುಳಿವೆ. ಇನ್ನೂ ಆಲಮಟ್ಟಿ, ಬೇನಾಳ, ವಂದಾಲ, ಗೊಳಸಂಗಿ ಭಾಗದಲ್ಲಿಯೂ ಭಾರಿ
ಪ್ರಮಾಣದಲ್ಲಿ ಗಾಳಿ ಬೀಸಿದ್ದು, ಮಳೆ ಕೂಡಾ ಸುರಿದಿದೆ. ಸಂಜೆಯವರೆಗೂ ಜಿಟಿ ಜಿಟಿ ಮಳೆಯ ಅಬ್ಬರ ಮುಂದುವರಿದಿತ್ತು. ನಿಡಗುಂದಿ ಪಟ್ಟಣದಲ್ಲಿ ಹಲವೆಡೆ ವಿದ್ಯುತ್‌ ತಂತಿಗಳು ಹರಿದು ಬಿದ್ದಿವೆ. ಹೀಗಾಗಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿ¨ 

Advertisement

ಅಪಾರ ಹಾನಿ
ಆಲಮಟ್ಟಿ: ಪಟ್ಟಣವೂ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುಡುಗು, ಮಿಂಚು ಮಿಶ್ರಿತ ಬಿರುಗಾಳಿ ಸಮೇತ ಸುರಿದ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಶುಕ್ರವಾರ ಸಂಜೆ ಸುರಿದ ಮಳೆಗೆ ಆಲಮಟ್ಟಿ, ಅರಳದಿನ್ನಿ, ಬೇನಾಳ, ಚಿಮ್ಮಲಗಿ, ವಂದಾಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿರುಗಾಳಿಗೆ ಗಿಡ, ಮರ, ವಿದ್ಯುತ್‌ ಕಂಬಗಳು
ಧರೆಗುರುಳಿದ್ದಲ್ಲದೇ ಶೆಡ್ಡುಗಳಿಗೆ ಹಾಕಲಾಗಿದ್ದ ತಗಡು ಹಾರಿ ಎಲ್ಲೆಂದರಲ್ಲಿ ಬಿದ್ದಿರುವ ಬಗ್ಗೆ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next