Advertisement
ಎಷ್ಟು ಮರಳು
Related Articles
Advertisement
ಕಣ್ಗಾವಲು
ಮರಳು ತೆಗೆಯುವಲ್ಲಿ ಗ್ರಾ.ಪಂ. ಸಿಬಂದಿ ಕಣ್ಗಾವಲು ಹಾಕಬೇಕು. ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಮಾತ್ರ ಮರಳು ತೆಗೆಯುವಿಕೆ ಮತ್ತು ಸಾಗಾಣಿಕೆ ಮಾಡಬೇಕು. ಟನ್ ಅಳತೆಗೆ ಲಾರಿ ಹಾಗೂ ಅದರಲ್ಲಿ ಹಿಡಿಯುವ ಮರಳಿನ ಪ್ರಮಾಣವನ್ನು ಅಂದಾಜಿಸಿ ನಿಗದಿಪಡಿಸಲಾಗಿದೆ. ಆದ್ದರಿಂದ ಮರಳು ಗಣಿಯಲ್ಲಿ ತೂಗುಯಂತ್ರಗಳು ಇರುವುದಿಲ್ಲ. ಕಣ್ಣಂದಾಜಿನ ತೂಕವೇ ಅಳತೆ!
ಟ್ರಿಪ್‌ಶೀಪ್
ಇಂಟಿಗ್ರೇಟೆಡ್ ಲೀಸ್ ಮ್ಯಾನೇಜ್‌ಮೆಂಟ್ ಸಾಫ್ಟ್ವೇರ್ ಮೂಲಕ ಟ್ರಿಪ್‌ಶೀಟ್ ತೆಗೆದು ಪಂಚಾಯತ್‌ಗೆ ನೀಡಲಾಗುತ್ತದೆ. ಇದರ ಆಧಾರದಲ್ಲಿ ಇಂತಿಷ್ಟು ಲೋಡ್, ಇಂತಿಷ್ಟು ಟನ್ ಎಂದು ಸರಕಾರಕ್ಕೆ ಮರಳಿನ ಲೆಕ್ಕ ಸಿಗುತ್ತದೆ.
ಕೊರತೆ
ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧವಿದ್ದು, ಅಕ್ಟೋಬರ್‌ವರೆಗೆ ಮರಳುಗಾರಿಕೆಗೆ ಅವಕಾಶವಿಲ್ಲ. ಮುಖ್ಯವಾಗಿ ನಗರ ಭಾಗದಲ್ಲಿ ಶೇ.50ರಷ್ಟು ಕಟ್ಟಡ ನಿರ್ಮಾಣ ಕಾರ್ಯ ಮರಳಿನ ಕೊರತೆಯಿಂದ ಸ್ಥಗಿತಗೊಂಡಿದೆ. ಪರಿಸರ ಇಲಾಖೆ ಮಾರ್ಗಸೂಚಿಯಂತೆ ನಾನ್ ಸಿಆರ್‌ಝಡ್‌ನಲ್ಲಿ ಮರಳುಗಾರಿಕೆ ನಿಷೇಧ ಅವಧಿ ಅ.15ರವರೆಗೂ ಇರುವುದರಿಂದ ಮರಳು ಕೊರತೆಗೆ ಕಾರಣವಾಗಿದೆ. 1 ಲೋಡ್ ಅಥವಾ 3 ಯುನಿಟ್ ಮರಳಿಗೆ 8 ಸಾವಿರದಿಂದ 8,500 ರೂ. ಇದೆ. ಆದರೆ ಬ್ಲ್ಯಾಕ್ ನಿಂದ ಖರೀದಿ ಮಾಡಿದಲ್ಲಿ ದುಪ್ಪಟ್ಟು ದರ. ಈ ವರ್ಷ ಬ್ಲ್ಯಾಕ್‌ನಲ್ಲಿಯೂ ಮರಳು ಸಿಗುತ್ತಿಲ್ಲ.
ನಾನ್‌ಸಿಆರ್‌ಝಡ್
ನಾನ್ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಕುಂದಾಪುರ ತಾಲೂಕಿನ ಬಳ್ಕೂರು, ಹಳ್ನಾಡಿನಲ್ಲಿ ಲೀಸ್ ನೀಡಲಾಗಿದೆ. ಇದರಲ್ಲಿ 75 ಸಾವಿರ ಮೆಟ್ರಿಕ್ ಟನ್ ವರೆಗೂ ಲಭ್ಯವಿದ್ದು, ಸರಕಾರಿ ಕಾಮಗಾರಿಗಳಿಗೆ, ಸಾರ್ವಜನಿಕ ಮತ್ತು ಖಾಸಗಿ ಉದ್ದೇಶಕ್ಕೆ ನೀಡಲಾಗುತ್ತದೆ. ಆದರೆ ಆರಂಭ ಮಾತ್ರ ಆಗಿಲ್ಲ.
ಮಳೆ, ಬೆಳೆ
ಅ.5ರಿಂದ ಹಳ್ಳಿ ಹಳ್ಳದ ಮರಳು ತೆಗೆಯಲು ಪ್ರಾರಂಭಿಸಬಹುದು ಎಂದು ಅನುಮತಿ ನೀಡ ಲಾಗಿದ್ದರೂ ಅಕಾಲಿಕ ಮಳೆಯಿಂದಾಗಿ ಹಳ್ಳದ ನೀರು ಇಳಿದಿಲ್ಲ. ಹರಿವು ಕಡಿಮೆಯಾಗಿಲ್ಲ. ಜತೆಗೆ ಹಳ್ಳದ ಪಕ್ಕದಲ್ಲಿನ ಭತ್ತದ ಬೇಸಾಯ ಮುಗಿದಿಲ್ಲ. ಕಟಾವು ಆಗಿಲ್ಲ. ಮರಳು ತೆಗೆದು ಹಾಕಲು, ಲಾರಿ ಓಡಾಟ ನಡೆಸಲು ಸ್ಥಳವಿಲ್ಲ ಎಂದಾಗಿದೆ. ಇದೆಲ್ಲದರಿಂದಾಗಿ ಗ್ರಾ.ಪಂ.ಗಳ ಮರಳು ಲಭ್ಯವಾಗಲು ಇನ್ನೂ ಕಾಲಾವಕಾಶ ಅಗತ್ಯವಿದೆ.
ಬರೀ 300 ರೂ.
1 ಟನ್‌ಗೆ 80 ರೂ. ರಾಯಧನ, 40 ರೂ. ಎಎಪಿಪಿ ಶುಲ್ಕ, 2 ರೂ. ಐಟಿ-ಟಿಸಿಎಸ್ ಶುಲ್ಕ, 8 ರೂ. ಡಿಎಂಎಫ್ಟಿ ಶುಲ್ಕ ಎಂದು 130 ರೂ.ಗಳು, 170 ರೂ. ಪಂಚಾಯತ್ ಗೆಂದು ಒಟ್ಟು 300 ರೂ. ಪಡೆಯಲಾಗುತ್ತದೆ. ಉಳಿದಂತೆ ಸಾಗಾಟ ವೆಚ್ಚ, ಕೂಲಿ. ಸಾಗಾಟದ ಲಾರಿ ಗಣಿ ಇಲಾಖೆಯಲ್ಲಿ ನೋಂದಣಿಯಾಗಿರಬೇಕು.
ಆರಂಭ ಆಗಿಲ್ಲ: ಮಳೆ ನೀರು ಹರಿವಿನ ಪ್ರಮಾಣ ಇನ್ನೂ ನದಿಗಳಲ್ಲಿ ತಗ್ಗಿಲ್ಲದ ಕಾರಣ ಗ್ರಾ.ಪಂ.ಗಳಲ್ಲಿ ಮರಳುಗಾರಿಕೆ ಆರಂಭವಾಗಿಲ್ಲ. –ಮಹೇಶ್ ಕುಮಾರ್ ಹೊಳ್ಳ ಕಾರ್ಯನಿರ್ವಹಣಾಧಿಕಾರಿ, ತಾ.ಪಂ. ಕುಂದಾಪುರ
ಲಕ್ಷ್ಮೀ ಮಚ್ಚಿನ