Advertisement
ಮಂಗಳೂರಿನ ಬಂದರು ಇಲಾಖೆಯ ಈ ಪ್ರಸ್ತಾವನೆಯನ್ನು ರಾಜ್ಯ ಸರಕಾರವು ಕೇಂದ್ರಕ್ಕೆ ಸಲ್ಲಿಸಿದ್ದು, ಒಪ್ಪಿಗೆ ದೊರಕಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಸಹ ಭಾಗಿತ್ವದಲ್ಲಿ ಈ ಯೋಜನೆ ಕೈಗೂಡಲಿದ್ದು, ಇದಕ್ಕಾಗಿ ಕೇಂದ್ರ ಸರಕಾರ 14.5 ಕೋಟಿ ರೂ. ನೆರವು ನೀಡಲಿದೆ. ರಾಜ್ಯವೂ ಇಷ್ಟೇ ಪಾಲನ್ನು ಭರಿಸಲಿದೆ. ಎರಡೂ ಸರಕಾರಗಳಿಂದ ಅನುದಾನಕ್ಕೆ ಒಪ್ಪಿಗೆ ದೊರೆತ ಬಳಿಕ ಟೆಂಡರ್ ಆಹ್ವಾನಿಸಿ, ಡ್ರೆಜ್ಜಿಂಗ್ ಸಂಬಂಧಿತ ಕಂಪೆನಿಯವರು ಹೂಳೆತ್ತುವ ಕಾಮಗಾರಿ ಕೈಗೊಳ್ಳಲಿದ್ದಾರೆ.
ಬಾಗಿಲಿನಿಂದ 2ನೇ ಹಂತದ ವಾಣಿಜ್ಯ ದಕ್ಕೆ ಇರುವ 3.2 ಕಿ.ಮೀ. ವ್ಯಾಪ್ತಿಯಲ್ಲಿ ಹೂಳೆತ್ತುವ ಕಾಮಗಾರಿ ನಡೆಯಲಿದೆ.
ಇದು ನೆರವೇರಿದರೆ, ಮೀನುಗಾರಿಕೆ ದೋಣಿಗಳ ಸಂಚಾರ ಹಾಗೂ ಲಕ್ಷದ್ವೀಪಕ್ಕೆ ಮಿನಿ ಹಡಗುಗಳ (ಮಂಜಿ) ಸಂಚಾರಕ್ಕೆ ಯಾವುದೇ ಸಮಸ್ಯೆ ಆಗಲಾರದು. ಮುಂಬಯಿ ಅಥವಾ ಗುಜರಾತ್ ಭಾಗದ ಡ್ರೆಜ್ಜಿಂಗ್ ಯಂತ್ರೋಪಕರಣ ಗಳನ್ನು ಹೂಳೆತ್ತಲು ಬಳಸುವ ಸಾಧ್ಯತೆ ಇದೆ. ಪ್ರಸ್ತುತ ಮಂಗಳೂರಿನಲ್ಲಿ ಗ್ರ್ಯಾ ಬ್ ಡ್ರೆಜ್ಜರ್‌ಗಳಿದ್ದು, ಮುಂದೆ ಬೃಹತ್ ಪ್ರಮಾಣದ ಕಟ್ಟರ್ ಸಕ್ಷನ್ ಮಾದರಿಯ ಡ್ರೆಜ್ಜಿಂಗ್ ಯಂತ್ರೋಪಕರಣಗಳು ಬರಬೇಕಿವೆ. ಲಕ್ಷದ್ವೀಪ ಹಾಗೂ ಮಂಗಳೂರು ಮಧ್ಯೆ ಪ್ರಸ್ತುತ ವಾರ್ಷಿಕವಾಗಿ 1.2 ಲಕ್ಷ ಮೆಟ್ರಿಕ್ ಟನ್ ವಹಿವಾಟನ್ನು ರಪ್ತು ಹಾಗೂ ಆಮದು ಮೂಲಕ ನಿರ್ವಹಿಸುತ್ತಿದೆ.
Related Articles
ಮೀನುಗಾರಿಕೆ ದೋಣಿಗಳು ಹಾಗೂ ಲಕ್ಷದ್ವೀಪಕ್ಕೆ ಮಿನಿ ಹಡಗುಗಳ ಸಂಚಾರಕ್ಕೆ ಮಂಗಳೂರು ಬಂದರಿನ ಅಳಿವೆ ಬಾಗಿಲಿನಲ್ಲಿ ತುಂಬಿರುವ ಬೃಹತ್ ಪ್ರಮಾಣದ ಹೂಳು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಇದರಿಂದಾಗಿ ಇಲ್ಲಿ ಹಲವು ಅವಘಡಗಳು ಸಂಭವಿಸಿದ್ದುಂಟು. ಮೇ 25ರಂದು ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಗಿಲ್ನೆಟ್ ಟೊಂದು ಅಳಿವೆ ಬಾಗಿಲು ಸಮೀಪ ಅವಘಡಕ್ಕೀಡಾಗಿದ್ದು, ಅದರ ತೆರವು ಕಾರ್ಯ ಇನ್ನೂ ನಡೆಯದ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಇಳಿಯುತ್ತಿರುವ ಮೀನುಗಾರಿಕೆ ದೋಣಿಗಳು ನಿತ್ಯ ಅಪಾಯ ಎದುರಿಸುತ್ತಿದೆ. ಅಳಿವೆ ಬಾಗಿಲಿನಲ್ಲಿ ಹೂಳು ತುಂಬಿರುವುದರಿಂದ ಬೋಟುಗಳ ಸುಗಮ ಸಂಚಾರಕ್ಕೆ ಸಮಸ್ಯೆ ಆಗುತ್ತಿತ್ತು. ಮುಳುಗಡೆಯಾದ ಗಿಲ್ನೆಟ್ ಬೋಟ್ ಕೂಡ ಮೀನುಗಾರ ದೋಣಿಗಳಿಗೆ ಇನ್ನಷ್ಟು ಸಂಚಕಾರ ಸೃಷ್ಟಿಸುತ್ತಿವೆ. ಬೋಟು ಪಲ್ಟಿಯಾದ ಪ್ರದೇಶದಲ್ಲಿ ನಾಡದೋಣಿ ಮೀನುಗಾರರು ಮೀನುಗಾರಿಕೆಗೆ ತೆರಳುವಂತಿಲ್ಲ. ಗೊತ್ತಾಗದೆ ತೆರಳಿದರೆ ಮತ್ತೂಂದು ಅವಘಡವಾಗುವ ಸಾಧ್ಯತೆ ಇದೆ!
Advertisement
2000 ಬೋಟುಗಳ ಸಂಚಾರಮಂಗಳೂರು ಮೀನುಗಾರಿಕೆ ಬಂದರು ವ್ಯಾಪ್ತಿಯಲ್ಲಿ ಸುಮಾರು 2000 ಬೋಟುಗಳಿವೆ. 35,875 ಮಂದಿ ನೇರವಾಗಿ ಮತ್ತು 70,000 ಕ್ಕಿಂತಲೂ ಅಧಿಕ ಮಂದಿ ಪರೋಕ್ಷವಾಗಿ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. 2016-17ರ ಸಾಲಿನಲ್ಲಿ 16,603 ಮೆಟ್ರಿಕ್ ಟನ್‌ಗಳಷ್ಟು ಮೀನುಗಳು ದೊರೆತಿವೆ. ಆಳದ ಹೂಳು ಸಮಸ್ಯೆ
ಮೀನುಗಾರಿಕೆ ಬೋಟ್‌ಗಳಿಗೆ ಅಳಿವೆ ಬಾಗಿಲಿನಲ್ಲಿ -3 ಮೀಟರ್ ಆಳಕ್ಕೆ ಡ್ರೆಜ್ಜಿಂಗ್ ಮಾಡಿದರೆ ಸಾಕಾಗುತ್ತದೆ.
ಆದರೆ, ಲಕ್ಷದ್ವೀಪಕ್ಕೆ ತೆರಳುವ (ಗೂಡ್ಸ್) ವಾಣಿಜ್ಯ ಬೋಟು, ಮಂಜಿಗಳಿಗೆ -4 ಮೀಟರ್ ಆಳ ಡ್ರೆಜ್ಜಿಂಗ್ ಮಾಡಬೇಕು.
ಇಲ್ಲವಾದರೆ, ಬೋಟ್ ಸಂಚಾರಕ್ಕೆ ಅಪಾಯ ಎದುರಾಗುತ್ತದೆ. ಹೀಗಾಗಿ ಪ್ರತಿ ವರ್ಷ -4 ಮೀಟರ್‌ನಷ್ಟು ಡ್ರೆಜ್ಜಿಂಗ್ ಮಾಡಲಾಗುತ್ತದೆ. ಆದರೆ, ನೀರು ಹರಿಯುವ ವೇಗಕ್ಕೆ ಮರಳು ತುಂಬುವುದರಿಂದ ಪ್ರತಿ ವರ್ಷ ಮೀನುಗಾರಿಕೆ ಹಾಗೂ ವಾಣಿಜ್ಯ ಬೋಟುಗಳ ಸಂಚಾರಕ್ಕೆ ಅಪಾಯ ಆಗುತ್ತಿತ್ತು. ಹೀಗಾಗಿ ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ಉದ್ದೇಶದಿಂದ ಇನ್ನಷ್ಟು ಆಳದಿಂದ ಹೂಳೆತ್ತುವ ಕೆಲಸವನ್ನು ಈ ಬಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. 7 ಮೀಟರ್‌ನಷ್ಟು ಆಳದಿಂದ ಹೂಳೆತ್ತುವ ಕಾಮಗಾರಿ ಈ ಮೂಲಕ ನಡೆಯಲಿವೆ. ದಿನೇಶ್ ಇರಾ