Advertisement
ಭೀಮಾನಾಯ್ಕ, ಮಹೇಶ್ ಕುಮಟಳ್ಳಿ, ಅಮರೇಗೌಡ ಬಯ್ನಾಪುರ, ಬಿ.ಸಿ.ಪಾಟೀಲ್ ಸೇರಿ ಕಾಂಗ್ರೆಸ್‌ನ ಅತೃಪ್ತ ಶಾಸಕರನ್ನು ಸಂಪರ್ಕಿಸಿದ ಕುಮಾರಸ್ವಾಮಿ, ಅಮೆರಿಕದಿಂದ ಬರುವವರೆಗೂ ಸುಮ್ಮನಿರಿ ಎಂದು ಮನವಿ ಮಾಡಿದರು.
Related Articles
Advertisement
ಆದರೆ, ಕಾಂಗ್ರೆಸ್ ನಾಯಕರು ಮಾತುಕತೆಗೆ ಕರೆದರು. ಆಶ್ಚರ್ಯಕರ ರೀತಿಯಲ್ಲಿ ಎರಡನೇ ಬಾರಿ ಮುಖ್ಯಮಂತ್ರಿಯಾದೆ. ಕಾಲಭೈರವೇಶ್ವರನ ಕೃಪೆಯಿಂದಲೇ ಮುಖ್ಯಮಂತ್ರಿ ಸ್ಥಾನ ದೊರೆಯಿತು ಎಂದು ತಿಳಿಸಿದ್ದಾರೆ.
ವೇಣುಗೋಪಾಲ್ ಜತೆ ಗೌಡರ ಚರ್ಚೆ: ರಾಜ್ಯ ರಾಜಕೀಯದಲ್ಲಿ ದಿಢೀರ್ ಉಂಟಾದ ಬೆಳವಣಿಗೆಗಳ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜತೆ ಚರ್ಚಿಸಿದರು.
ಬೆಳಗ್ಗೆ ಪಕ್ಷದ ಕಚೇರಿಗೆ ಆಗಮಿಸಿ ಮುಖಂಡರ ಜತೆ ಸಮಾಲೋಚನೆ ನಡೆಸಿ ಪದ್ಮನಾಭನಗರ ನಿವಾಸಕ್ಕೆ ತೆರಳಿದ ಗೌಡರು ಇಬ್ಬರು ಶಾಸಕರ ರಾಜೀನಾಮೆಯಿಂದ ಉಂಟಾದ ಬೆಳವಣಿಗೆ ಬಗ್ಗೆ ಹಲವು ನಾಯಕರ ಜತೆ ಚರ್ಚಿಸಿ ಮನೆಯಲ್ಲೇ ಕುಳಿತು ಗಮನಿಸುತ್ತಿದ್ದರು.
ನಂತರ ಅಮೆರಿಕದಲ್ಲಿರುವ ಸಿಎಂ ಕುಮಾರಸ್ವಾಮಿ ಜತೆ ದೂರವಾಣಿ ಮೂಲಕ ಚರ್ಚಿಸಿದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಜತೆಯೂ ಸಮಾಲೋಚನೆ ನಡೆಸಿ ವಿದ್ಯಮಾನಗಳ ಮಾಹಿತಿ ನೀಡಿದರು.
ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸಂಬಂಧ ಸಚಿವ ಎಚ್.ಡಿ.ರೇವಣ್ಣ ಜತೆ ಮಾತನಾಡಿದರು. ಅಗತ್ಯವಾದರೆ ಮಂಗಳವಾರ ಅಥವಾ ಬುಧವಾರ ಶಾಸಕಾಂಗ ಪಕ್ಷದ ಸಭೆ ಕರೆಯಲು ನಿರ್ಧರಿಸಿದರು.