ವಾಷಿಂಗ್ಟನ್: 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು ಕಂಡಿದ್ದರಿಂದ ಆಘಾತಗೊಂಡಿದ್ದ ಆಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚುನಾವಣೆಯಲ್ಲಿ ಬಳಸಲಾಗಿದ್ದ ಮತಯಂತ್ರಗಳನ್ನು ಜಪ್ತಿ ಮಾಡುವಂತೆ ಸರ್ಕಾರಿ ಆದೇಶವೊಂದನ್ನು ಸಿದ್ಧಪಡಿಸಿದ್ದರಂತೆ!
ಆಗ, ಸಂಸತ್ತು ತರಾತುರಿಯಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೋ ಬೈಡೆನ್ ಅವರ ಜಯಕ್ಕೆ ಅಧಿಕೃತ ಮೊಹರು ಒತ್ತಿತು. ಹಾಗಾಗಿ, ಟ್ರಂಪ್ ಸಿದ್ಧಪಡಿಸಿದ್ದ ಆದೇಶವಾಗಿ ಹೊರಬೀಳಲಿಲ್ಲ ಎಂದು “ಪೊಲಿಟಿಕೊ’ ಎಂಬ ಆಂಗ್ಲ ವೆಬ್‌ಸೈಟ್ ವರದಿ ಮಾಡಿದೆ.
ಅಮೆರಿಕದ ನ್ಯಾಷನಲ್ ಆಕೈìವ್ಸ್‌ನಿಂದ ಪಡೆದ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಈ ವರದಿಯನ್ನು ಸಿದ್ಧಪಡಿಸಲಾಗಿದ್ದು, ಅದರಲ್ಲಿ ಟ್ರಂಪ್ ಅವರ ಈ ಅಸಾಧಾರಣ ನಡೆಯನ್ನು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ರಾತ್ರಿ ಕರ್ಫ್ಯೂನಿಂದ ವಿನಾಯಿತಿ ನೀಡಲು ರಂಗಭೂಮಿ ಕಲಾವಿದರ ವೇದಿಕೆಯಿಂದ ಸಚಿವರಿಗೆ ಮನವಿ
2020ರ ಡಿ. 16ರಂದು ಆದೇಶದ ಕರಡು ಪ್ರತಿ ಸಿದ್ಧವಾಗಿತ್ತು. ಅದರಲ್ಲಿ ರಕ್ಷಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಮತಯಂತ್ರಗಳನ್ನು ಜಪ್ತಿ ಮಾಡುವಂತೆ ಆದೇಶಿಸಲಾಗಿತ್ತು. ಇಡೀ ಚುನಾವಣಾ ಪ್ರಕ್ರಿಯೆಯನ್ನು ಪುನರಾವಲೋಕನ ಮಾಡುವಂತೆ ರಾಷ್ಟ್ರೀಯ ಗುಪ್ತಚರ ಇಲಾಖೆಯ ನಿರ್ದೇಶಕರಿಗೆ ಸೂಚಿಸಲಾಗಿತ್ತು. ಇದರ ಬೆನ್ನಲ್ಲೇ ಅಮೆರಿಕ ಸಂಸತ್ತಿನ ಮೇಲೆ ಟ್ರಂಪ್ ಅಭಿಮಾನಿಗಳು ದಾಳಿ ನಡೆಸಿದರು. ಎಂದು ವರದಿ ಹೇಳಿದೆ.