ಮೆಲ್ಬರ್ನ್: ಬ್ರಿಟನ್‌ನ ಆ್ಯಂಡಿ ಮರ್ರೆ ಅವರು ಐದು ಸೆಟ್‌ಗಳ ಸುದೀರ್ಘ ಹೋರಾಟದಲ್ಲಿ ಇಟೆಲಿಯ ಮಾಟೆಯೊ ಬರೆಟಿನಿ ಅವರನ್ನು ಸೋಲಿಸಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಕೂಟದಲ್ಲಿ ದ್ವಿತೀಯ ಸುತ್ತು ತಲುಪಿದ್ದಾರೆ.
Advertisement
ಇಲ್ಲಿ ಐದು ಬಾರಿ ರನ್ನರ್ ಅಪ್ ಸ್ಥಾನ ಪಡೆದಿದ್ದ ಮರ್ರೆ ಅವರು 6-3, 6-3, 4-6, 6-7 (7), 7-6 (10-6) ಸೆಟ್‌ಗಳಿಂದ ಬರೆಟಿನಿ ಅವರನ್ನು ಸೋಲಿಸಿ ಮುನ್ನಡೆದರು.
ಐದನೇ ಶ್ರೇಯಾಂಕದ ಆಂದ್ರೆ ರುಬ್ಲೆವ್ ಅವರು ಮಾಚಿ ಚಾಂಪಿಯನ್ ಡೊಮಿನಿಕ್ ಥೀಮ್ ಅವರನ್ನು ನೇರ ಸೆಟ್‌ಗಳಿಂದ ಕೆಡಹಿ ದ್ವಿತೀಯ ಸುತ್ತಿಗೇರಿದ್ದಾರೆ.