ಗಂಗಾವತಿ: ರಾಯಚೂರು ಕೊಪ್ಪಳ ರಸ್ತೆಯ ರಾಣಾಪ್ರತಾಪ್ ಸಿಂಗ್ ವೃತ್ತ ದಲ್ಲಿರುವ ಅವೈಜ್ಞಾನಿಕ ವೇ ಬ್ರಿಡ್ಜ್ ನಿಂದಾಗಿ ನಿತ್ಯವೂ ನೂರಾರು ಲಾರಿ ಬಸ್ಸುಗಳು ತಾಸುಗಟ್ಟಲೆ ನಿಲ್ಲುವುದರಿಂದ ಸಂಚಾರಕ್ಕೆ ವ್ಯತ್ಯಯವಾಗಿದೆ. ಇದರಿಂದ ನಿರಂತರ ಅಪಘಾತಗಳು ಜರುಗಿಸಿದ್ದರೂ ಸಂಚಾರಿ ಪೊಲೀಸ್ ಇಲಾಖೆ ನಿರ್ಲಕ್ಷ್ಯ ವಹಿಸಿದೆ.
ಇಲ್ಲಿ 2ವೇಬ್ರಿಜ್ ಗಳಿದ್ದು ಭತ್ತ ಕಟಾವು ಸಂದರ್ಭದಲ್ಲಿ ಲಾರಿಗಳು ತೂಕ ಮಾಡಿಸಲು ಆಗಮಿಸುವ ಸಂದರ್ಭದಲ್ಲಿ ನೂರಾರು ಲಾರಿಗಳು ನಿಲ್ಲುತ್ತವೆ ಅದರಿಂದ ರಾಯಚೂರು ಕೊಪ್ಪಳ ಮತ್ತು ಗಂಗಾವತಿ ನಗರ ಪ್ರವೇಶಿಸುವ ಬಸ್ ಗಳು ಕಾರ್ ಗಳು ಮತ್ತು ದ್ವಿಚಕ್ರ ವಾಹನಗಳು ತಾಸುಗಟ್ಟಲೆ ನಿಲ್ಲುವ ಪ್ರಸಂಗ ಉಂಟಾಗಿದೆ.
ಕೆಲವೊಮ್ಮೆ ಅಂಬ್ಯುಲೆನ್ಸ್ ಗಳು ಸಹ ನಿಲ್ಲುವುದರಿಂದ ರೋಗಿಗಳಿಗೆ ತೊಂದರೆಯಾಗಿದೆ. ರಾಯಚೂರು ಕೊಪ್ಪಳ ಕಂಪ್ಲಿ ಗಂಗಾವತಿ ನಗರಕ್ಕೆ ಪ್ರವೇಶ ಮಾಡುವ ವಾಹನಗಳು ಇಲ್ಲಿ ನಿಲ್ಲಬೇಕಾಗಿರುವುದರಿಂದ ಸಂಚಾರ ದಟ್ಟಣೆಯಾಗಿದೆ ಆದ್ದರಿಂದ ಎರಡೂ ವೇ ಬ್ರಿಡ್ಜ್ ಗಳನ್ನು ಸ್ಥಳಾಂತರಿಸುವಂತೆ ಸಂಘ ಸಂಸ್ಥೆಯವರು ಮನವಿ ಮಾಡಿದರೂ ಪೊಲೀಸ್ ಇಲಾಖೆ ಮತ್ತು ನಗರಸಭೆ ನಿರ್ಲಕ್ಷ್ಯ ವಹಿಸಿರುವುದು ಕಂಡು ಬರುತ್ತಿದೆ.
ದೂರದ ಊರುಗಳಿಗೆ ಹೋಗುವ ಪ್ರಯಾಣಿಕರು ಸಂಚಾರ ದಟ್ಟಣೆಯಿಂದ ತಾಸುಗಟ್ಟಲೆ ಬಸ್ ನಿಲುಗಡೆಯ ಪರಿಣಾಮ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಪ್ರವಾಸೋದ್ಯಮ ಮತ್ತು ವಾಣಿಜ್ಯವಾಗಿ ಗಳಿಸಿರುವ ಗಂಗಾವತಿ ನಗರಕ್ಕೆ ನಿತ್ಯವೂ ಸಾವಿರಾರು ವಾಹನಗಳು ಇದೇ ರಸ್ತೆಯ ಮೂಲಕ ಬರುತ್ತವೆ. ಪ್ರಮುಖವಾಗಿ ವಿದ್ಯಾನಗರದಲ್ಲಿರುವ ರೈಲ್ವೆ ನಿಲ್ದಾಣದಿಂದ ವಾಹನಗಳು ಬರುವುದರಿಂದ ಪ್ರಯಾಣಿಕರು ಸಂಚಾರ ಮಾಡುವುದರಿಂದ ಇಲ್ಲಿರುವ ಅವೈಜ್ಞಾನಿಕ ವೇ ಬ್ರಿಡ್ಜ್ ಗಳನ್ನು ಸ್ಥಳಾಂತರ ಮಾಡಿ ಸಂಚಾರ ಸುಗಮ ಮಾಡಬೇಕಿದೆ .