Advertisement

ಅವೈಜ್ಞಾನಿಕ ಡಾಂಬರೀಕರಣ: ಗ್ರಾಮಸ್ಥರ ಪ್ರತಿಭಟನೆ

01:51 PM Dec 28, 2022 | Team Udayavani |

ಚನ್ನಪಟ್ಟಣ: ಪಟ್ಟಣದಿಂದ ದಶವಾರ ಹಾಗೂ ಮಾಕಳಿ ಮೂಲಕ ಕುಣಿಗಲ್‌ಗೆ ಸೇರುವ ರಾಜ್ಯ ಹೆದ್ದಾರಿಯಲ್ಲಿ ಅವೈಜ್ಞಾ ನಿಕ ಡಾಂಬರೀಕರಣ ಆರೋಪ ಕೇಳಿ ಬಂದಿದ್ದು, ಅಕ್ಕ ಪಕ್ಕದ ಗ್ರಾಮಸ್ಥರು ಸೇರಿ ಡಾಂಬರೀಕರಣವನ್ನು ತಡೆದು ಪ್ರತಿಭಟನೆಗೆ ಮುಂದಾದ ಘಟನೆ ನಡೆದಿದೆ.

Advertisement

ತಾಲೂಕಿನ ಚಿಕ್ಕೇನಹಳ್ಳಿ ಕ್ರಾಸ್‌ನ ಸುಂಕದಕಟ್ಟೆ ಹಾಗೂ ದಶವಾರ ಗ್ರಾಮದ ಮಧ್ಯೆ ಹಾದು ಹೋಗಿರುವಂತಹ ಚನ್ನಪಟ್ಟಣ ಕುಣಿಗಲ್‌ ರಾಜ್ಯ ಹೆದ್ದಾರಿಯಲ್ಲಿ ತುಂಡು ಗುತ್ತಿಗೆ ಕಾಮಗಾರಿ ನಡೆಯುತ್ತಿದ್ದು, ಕಾಮ ಗಾರಿಯನ್ನು ಪ್ರಥಮ ದರ್ಜೆ ಗುತ್ತಿಗೆದಾರ ಗೋವಿಂದಹಳ್ಳಿ ನಾಗರಾಜುರವರು ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಮಗಾರಿ ಅನುಮೋದನೆ ಅನುಸಾರ ಎರಡು ಇಂಚು ಡಾಂಬರೀಕರಣ ಹಾಕಬೇಕು ಎಂದು ಹೇಳಲಾಗುತ್ತಿದ್ದರು. ಒಂದಿಂಚು, ಒಂದೂವರೆ ಇಂಚು ಮಾತ್ರ ಡಾಂಬರೀಕರಣ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆ, ಅಕ್ಕಪಕ್ಕದ ಗ್ರಾಮಸ್ಥರು ಕಾಮಗಾರಿಯನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಮುಂದಾಗಿದ್ದರು. ಕಾಮಗಾರಿಯ ವಿವರದ ಬೋರ್ಡ್‌ ನೆಟ್ಟು ಗುಣಮಟ್ಟದ ಕಾಮಗಾರಿಯನ್ನು ಮಾಡುವಂತೆ ಆಗ್ರಹಿಸಿದರು.

ಮಾತಿನ ಚಕಮಕಿ: ಈ ವೇಳೆಗೆ ಸ್ಥಳಕ್ಕೆ ಬಂದ ಲೋಕೋಪಯೋಗಿ ಇಲಾಖೆಯ ಎಇಇ ರಾಜಣ್ಣ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಡಾಂಬರೀಕರಣದ ಇಂಚಿನ ಅಳತೆಗೆ ಮುಂದಾದಾಗ ಗ್ರಾಮಸ್ಥರ ಆರೋಪದಂತೆ ಹಲವು ಕಡೆ ಒಂದು ಇಂಚು ಒಂದೂವರೆ ಇಂಚು ಡಾಂಬರೀಕರಣ ನಡೆದಿರುವುದು ಬೆಳಕಿಗೆ ಬಂದಿರುವುದರಿಂದ ಇನ್ನಷ್ಟು ಆಕ್ರೋಶಗೊಂಡ ಸ್ಥಳೀಯರು, ಹಲವಾರು ವರ್ಷಗಳಿಂದ ರಸ್ತೆಗೆ ಡಾಂಬರೀಕರಣ ನಡೆಯದ ಗುಂಡಿಬಿದ್ದ ರಸ್ತೆಯಲ್ಲಿ ತಿರುಗಾಡುವಂತಾಗಿ ಹಲವಾರು ವಾಹನ ಸವಾರರು ಅಪಘಾತಕ್ಕೆ ಈಡಾಗಿದ್ದಾರೆ. ಈಗ ಈ ಕಳಪೆ ಕಾಮಗಾರಿ ಮಾಡಿ ಬಿಲ್‌ ಮಾಡಿಕೊಂಡು ಇನ್ನಷ್ಟು ವಾಹನ ಸವಾ ರರ ಅಪಘಾತಕ್ಕೆ ಕಾರಣರಾ ಗುತ್ತೀರಿ ಎಂದು ಪ್ರಶ್ನಿಸಿ ಕಾಮಗಾರಿಯನ್ನು ನಿಲ್ಲಿಸುವಂತೆ ಒತ್ತಾಯಿಸಿದರು.

ಎಇಇ ರಾಜಣ್ಣ ರವರು ಗ್ರಾಮಸ್ಥರ ಜೊತೆ ಮಾತನಾಡಿ, ಆಗಿರೋ ತಪ್ಪನ್ನು ಸರಿಪಡಿ ಸುತ್ತೇವೆ ಎಂದು ಭರವಸೆ ನೀಡಿ ಗ್ರಾಮಸ್ಥರ ಮನವೊಲಿಸಿ ಕಾಮಗಾರಿಯನ್ನು ಶುರು ಮಾಡಿದ್ದಾರೆ. ಸ್ಥಳೀಯರಾದ ದಶವಾರ ಚಂದ್ರ ಶೇಖರ್‌, ಬಾಲಾಜಿ, ಕೃಷ್ಣಮೂರ್ತಿ, ಶಿವು, ಮೋಹನ್‌, ಯೋಗೇಶ್‌, ಪ್ರಮೋದ್‌, ಪ್ರದೀಪ್‌, ನವೀನ್‌, ಶ್ರೀನಿವಾಸಗೌಡ, ಕುಮಾರ್‌, ಮಾಕಳಿ ಸಚಿನ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next