ಚರ್ಚಿಸಿರುವುದಾಗಿ ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.
Advertisement
ಶಿಂಷಾ ನದಿಗೆ ನಿರ್ಮಿಸಿರುವ ಮೇಲ್ಸೇತುವೆ ಬದಿ ಸರ್ವಿಸ್ ರಸ್ತೆ ನಿರ್ಮಾಣ ಕೈಬಿಟ್ಟಿರುವ ಕುರಿತಾಗಿ ತಾಲೂಕಿನ ಕೆ.ಕೋಡಿಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ನಡೆಸುತ್ತಿರುವ ಪ್ರತಿಭಟನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಅವರು, ಸ್ಥಳೀಯರಿಂದ ಅಹವಾಲು ಸ್ವೀಕರಿಸಿದರು.ಬಳಿಕ ಮಾತನಾಡಿ, ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿಯು ವೈಜ್ಞಾನಿಕ ರೀತಿಯಲ್ಲಿ ಸಾಗುತ್ತಿಲ್ಲ. ಕೆಲವೆಡೆ ಸರ್ವಿಸ್ ರಸ್ತೆಗಳೂ ಸೇರಿದಂತೆ ಗ್ರಾಮಗಳನ್ನು ಸಂಪರ್ಕಿಸುವ ಒಳ ಪ್ರವೇಶ ಮತ್ತು ಹೊರ ಹೋಗುವ ಅಂಡರ್ ಪಾಸ್‌ಗಳ ಸಂಪರ್ಕ ವ್ಯವಸ್ಥೆಯನ್ನು
ಕೈಬಿಟ್ಟಿರುವುದಾಗಿ ದೂರಿದರು.
Related Articles
Advertisement
ಸರ್ವಿಸ್ ರಸ್ತೆ ಕೈಬಿಟ್ಟಲ್ಲಿ ಆತ್ಮಹತ್ಯೆ: ಕೆ.ಕೋಡಿಹಳ್ಳಿ, ಅಗರಲಿಂಗನದೊಡ್ಡಿ, ಹುಣಸೇಮರದದೊಡ್ಡಿ, ತೈಲೂರು, ಮಾದನಾಯಕನಹಳ್ಳಿ ಒಳಗೊಂಡಂತೆ ಎಂಟತ್ತು ಹಳ್ಳಿಗಳ ಸಾರ್ವಜನಿಕರು ಶಿಂಷಾ ನದಿಗೆ ಸರ್ವಿಸ್ ರಸ್ತೆ ನಿರ್ಮಿಸಿದ ಹೊರತಾಗಿ 6 ಕಿ.ಮೀ. ಹೆಚ್ಚು ದೂರವನ್ನು ಸೋಮನಹಳ್ಳಿ ಮಾರ್ಗವಾಗಿ ಕ್ರಮಿಸಬೇಕಾದ ಆತಂಕ ತೋಡಿಕೊಂಡ ರೈತರ ಗುಂಪಿನಲ್ಲಿದ್ದ ನೀಲೇಗೌಡ, ಸರ್ವಿಸ್ ರಸ್ತೆ ಕೈಬಿಟ್ಟಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದೆ ಸುಮಲತಾ, ಸಂಬಂಧಿಸಿದ ಅಧಿಕಾರಿಗಳನ್ನು ಸ್ಥಳಕ್ಕೆಕರೆಯಿಸಿ ಶಿಂಷಾನದಿಗೆ ಸರ್ವಿಸ್ ರಸ್ತೆ ನಿರ್ಮಾಣ ಸಂಬಂಧ ಕ್ರಮವಹಿಸುವ ಭರವಸೆ ನೀಡಿದರು. ಮನ್‌ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ. ಅಮರ್‌ಬಾಬು, ಗ್ರಾಪಂ ಸದಸ್ಯರಾದ ಸುಜಾತ, ಸರಸ್ವತಿ, ಮುಖಂಡರಾದ ಧರಣಿ, ಮಹದೇವಯ್ಯ, ಅಪ್ಪೇಗೌಡ , ಮರೀಗೌಡ, ಶಂಕರ್, ಶಿವರಾಜು, ಸುರೇಂದ್ರ, ಶಿವಣ್ಣ, ಪ್ರದೀಪ್, ವೆಂಕಟೇಶ್ ಇತರರಿದ್ದರು.