Advertisement
ಎಕ್ಸ್‌ಪ್ರೆಸ್ ಹೈವೇಗೆ ಪ್ರವೇಶ ಪಡೆಯಲು ಹಾಗೂ ನಿರ್ಗಮ ಮಾಡಲು ಸದ್ಯಕ್ಕೆ ತಾತ್ಕಾಲಿಕವಾಗಿ ಎಂಟ್ರಿ ಮತ್ತು ಎಕ್ಸ್ಟಿಟ್ ಗಳನ್ನು ನೀಡಲಾಗಿದೆ. ಈ ಎಂಟ್ರಿ ಮತ್ತು ಎಕ್ಸ್ಟಿಟ್ ಗಳ ಜಾಗಗಳನ್ನು ವೈಜ್ಞಾನಿಕವಾಗಿ ಪ್ಲಾನಿಂಗ್ ಮಾಡದೆ, ಬೇಕಾಬಿಟ್ಟಿ ಎಂಟ್ರಿ ಮತ್ತು ಎಕ್ಸ್ಟಿಟ್ ಗಳನ್ನು ನೀಡಿರುವುದು ಸಾಕಷ್ಟು ಅವ್ಯವಸ್ಥೆಗೆ ಎಡೆಮಾಡಿ ಕೊಟ್ಟಿದೆ. ಬೆಂಗಳೂರು-ಮೈಸೂರು ನಡುವೆ 6 ಪ್ರಮುಖ ನಗರಗಳು ಬರಲಿದ್ದು, ಈ ನಗರ ಗಳ ಎಂಟ್ರಿ ಮತ್ತು ಎಕ್ಸ್ಟಿಟ್ ಗೆ ಯೋಜನೆ ತಯಾರಿ ಸುವ ಆರಂಭದಲ್ಲೇ ನೀಲನಕ್ಷೆ ಸಿದ್ಧಪಡಿಸಬೇಕಿತ್ತು. ಆದರೆ, ಇದಕ್ಕೆ ಎನ್‌ಎಚ್‌ಎಐ ಗಮನ ನೀಡ ದೆ ಕೇವಲ ರಸ್ತೆಯನ್ನು ಮಾಡಿಕೊಂಡು ಹೋಗಿದ್ದು ಇದೀಗ ಎಂಟ್ರಿ ಎಕ್ಸ್ಟಿಟ್ ಸಮಸ್ಯೆ ಸೃಷ್ಟಿಸಿದೆ.
Related Articles
Advertisement
ಟೋಲ್: ಪ್ರಯಾಣಿಸಿದಷ್ಟು ಮಾತ್ರ ಶುಲ್ಕ ಪಾವತಿ: ಎಂಟ್ರಿ ಮತ್ತು ಎಕ್ಸಿ$rಟ್‌ಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿದ ಬಳಿಕ ಕ್ಲೋಸ್ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ. ಪ್ರತಿ ಎಂಟ್ರಿ-ಎಕ್ಸಿ$rಟ್‌ನಲ್ಲಿ ಟೋಲ್‌ಬೂತ್‌ಗಳನ್ನು ನಿರ್ಮಿಸಲಾಗುತ್ತದೆ. ವಾಹನಗಳು ಎಲ್ಲಿಂದ ಎಂಟ್ರಿ ಪಡೆಯುತ್ತವೆಯೋ, ಅಲ್ಲಿಂದ ಟೋಲ್ ಶುಲ್ಕ ಗಣನೆಗೆ ಬರುತ್ತದೆ. ಹಾಗೂ ಎಕ್ಸ್ಟಿಟ್ ನಲ್ಲಿ ಟೋಲ್ ಮೊತ್ತ ಫಾಸ್ಟ್‌ಟ್ಯಾಗ್ ಮೂಲಕ ಜಮೆಯಾಗುತ್ತದೆ. ಕ್ಲೋಸ್ ಟೋಲ್‌ಗಳನ್ನು ನಿರ್ಮಿಸುವುದರಿಂದ ಪ್ರಯಾಣಿಸಿದಷ್ಟು ದೂರಕ್ಕೆ ಮಾತ್ರ ಟೋಲ್ ಶುಲ್ಕ ಪಾವತಿಸ ಬೇಕಾಗುತ್ತದೆ. ಇದೀಗ ಚಾಲ್ತಿಯಲ್ಲಿರುವಂತೆ ಎಷ್ಟೇ ದೂರು ಪ್ರಯಾಣಿಸಿದರೂ ಒಂದೇ ಟೋಲ್ ಶುಲ್ಕ ಕಟ್ಟುವಂತಿಲ್ಲ.
ಎಂಟ್ರಿ-ಎಕ್ಸ್ಟಿಟ್ ಕಾಮಗಾರಿಗೆ ಸಿಗದ ಅನುಮೋದನೆ: ಬೆಂಗಳೂರು-ಮೈಸೂರು ನಡುವಿನ ಆಕ್ಸೆಸ್ ಕಂಟ್ರೋಲ್ ಎಕ್ಸ್‌ಪ್ರೆಸ್ ಹೈವೇಗೆ 6 ಕಡೆ ಎಂಟ್ರಿ ಮತ್ತು ಎಕ್ಸ್ಟಿಟ್ ಗಳನ್ನು ನಿರ್ಮಿಸುವ ಮೂಲಕ, ಕ್ಲೋಸ್ಡ್ ಟೋಲ್ ರಸ್ತೆಯಾಗಿ ಅಭಿವೃದ್ಧಿ ಪಡಿಸಬೇಕು ಎಂಬ ಉದ್ದೇಶದಿಂದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು 118 ಕಿ.ಮೀ. ಉದ್ದದ ರಸ್ತೆಯ ಮಾರ್ಗ ಮಧ್ಯೆ ಸಿಗುವ 6 ಪಟ್ಟಣಗಳಿಗೆ ಎಂಟ್ರಿ ಮತ್ತು ಎಕ್ಸ್ಟಿಟ್ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು, ರೌಂಡ್ ಎಲಿವೇಟರ್ ಮಾದರಿಯಲ್ಲಿ ಎಂಟ್ರಿ-ಎಕ್ಸ್ಟಿಟ್ ನಿರ್ಮಾಣಕ್ಕೆ ನೀಲನಕ್ಷೆಯನ್ನು ಸಿದ್ಧಪಡಿಸಿದ್ದರು. ಈ ಸಂಬಂಧ ಭೂಸ್ವಾಧೀನಕ್ಕೆ ಅಧೀಸೂಚನೆಯನ್ನು ಹೊರಡಿಸಿದ್ದರಾದರೂ, ಇದುವರೆಗೆ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಇನ್ನು ಎಂಟ್ರಿ-ಎಕ್ಸ್ಟಿಟ್ ನಿರ್ಮಾಣ ಕಾಮಗಾರಿಗೆ ಕೇಂದ್ರದಿಂದ ಅನುಮೋದನೆ ಸಿಕ್ಕಿಲ್ಲ ಎಂದು ಹೆದ್ದಾರಿ ಪ್ರಾಧಿಕಾರದ ಮೂಲಗಳು ಹೇಳುತ್ತಿದ್ದು, ಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ಇನ್ನೂ ಹಣ ಬಿಡುಗಡೆಯಾಗಿಲ್ಲದ ಕಾರಣ ಎಂಟ್ರಿ-ಎಕ್ಸ್ಟಿಟ್ ಕಾಮಗಾರಿ ಆರಂಭಗೊಳ್ಳುವುದಕ್ಕೆ ಇನ್ನೆಷ್ಟು ದಿನ ಕಾಯಬೇಕು ಎಂಬ ಪ್ರಶ್ನೆ ಜನತೆಯದ್ದಾಗಿದೆ.
ಹೆದ್ದಾರಿ ಪ್ರಾಧಿಕಾರ ಎಂಟ್ರಿ ಮತ್ತು ಎಕ್ಸ್ಟಿಟ್ ಗಳನ್ನು ಸರಿಯಾಗಿ ನೀಡಿಲ್ಲದ ಕಾರಣ ಇಲ್ಲಿ ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಇನ್ನು ಸರ್ವೀಸ್ ರಸ್ತೆ ಎಂಟ್ರಿ ಮತ್ತು ಎಕ್ಸ್ಟಿಟ್ ಬಳಿ ಕಿರಿದಾಗಿದ್ದು, ಇದು ಸಹ ಅಪಘಾತಕ್ಕೆ ಎಡೆಮಾಡಿ ಕೊಡುತ್ತದೆ. ಎಂಟ್ರಿ-ಎಕ್ಸ್ಟಿಟ್ ಎಲ್ಲಿದೆ ಎಂಬ ಮಾಹಿತಿ ಫಲಕ ಸಹ ಎಕ್ಸ್‌ಪ್ರೆಸ್ ವೇನಲ್ಲಿ ಇಲ್ಲದಿರುವುದು ಅಪಘಾತಕ್ಕೆ ಕಾರಣವಾಗಿದೆ. – ಸಂತೋಷ್ , ಬೈರಾಪಟ್ಟಣ
-ಸು.ನಾ.ನಂದಕುಮಾರ್