Advertisement
ಮಾಜಿ ಸಚಿವ ಸೊಗಡು ಶಿವಣ್ಣ ಅವರ ತುಮಕೂರು ನಿವಾಸದಲ್ಲಿ ವಿಧಾನ ಪರಿಷತ್ ಸದಸ್ಯರಾದ ಭಾನುಪ್ರಕಾಶ್, ರಘುನಾಥ್ ಮಲ್ಕಾಪುರೆ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಸುಮಾರು 50 ಮಂದಿ ಸೇರಲಿದ್ದಾರೆ.
ಶಾಸಕರನ್ನು ಒಳಗೊಂಡಂತೆ 24ಮುಖಂಡರು ತೀಕ್ಷ್ಣವಾಗಿ ಪತ್ರ ಬರೆದಿದ್ದರು. ಪದಾಧಿಕಾರಿಗಳ ಆಯ್ಕೆಯಲ್ಲಿ ಆಗಿರುವ ಲೋಪ, ಪಕ್ಷದಲ್ಲಿ ಉದ್ಭವಿಸಿರುವ ಗೊಂದಲಗಳನ್ನು ಪ್ರಸ್ತಾಪಿಸಿ, ಪಕ್ಷದಲ್ಲಿ ಸಂಘ ಪರಿವಾರದ ಹಿನ್ನೆಲೆಯುಳ್ಳವರನ್ನು ನಿರ್ಲಕ್ಷಿಸುತ್ತಿರುವುದನ್ನು ಪ್ರಶ್ನಿಸಿದ್ದರು. ಪತ್ರ ಬರೆದಿರುವ ಎಲ್ಲರೂ ಪಕ್ಷದ ನಿಷ್ಠಾವಂತರಾಗಿರುವುದರಿಂದ ಅವರನ್ನು
ಯಡಿಯೂರಪ್ಪ ಮಾತುಕತೆಗೆ ಆಹ್ವಾನಿಸಿದ್ದಾರೆ. ಜ.21 ಮತ್ತು 22ರಂದು ಕಲಬುರಗಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಡೆಯಲಿದ್ದು, ಅದರ ಪೂರ್ವಸಿದ್ಧತಾ ಸಭೆ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಜ. 19ರಂದು ಬೆಂಗಳೂರಿನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆಯಲಿದೆ. ಈ ವೇಳೆ, ತಮ್ಮ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪತ್ರ ಬರೆದಿರುವ ಶಾಸಕರು, ಮಾಜಿ ಶಾಸಕರು ಮತ್ತು ಮುಖಂಡರ ಪೈಕಿ ಆಯ್ದ ಕೆಲವರನ್ನು ಮಾತುಕತೆಗೆ ಬರುವಂತೆ ಯಡಿಯೂರಪ್ಪ ಆಹ್ವಾನಿಸಿದ್ದಾರೆ. ಹೀಗಾಗಿ, ಯಡಿಯೂರಪ್ಪ ಅವರೊಂದಿಗೆ ನಡೆಸಬೇಕಾದ ಮಾತುಕತೆ ಬಗ್ಗೆ ತೀರ್ಮಾನ ಕೈಗೊಳ್ಳಲು ಸೊಗಡು ಶಿವಣ್ಣ ಅವರ
ನಿವಾಸದಲ್ಲಿ ಈ ಸಭೆ ಕರೆಯಲಾಗಿದೆ. ಸಭೆಯಲ್ಲಿ ಕೈಗೊಳ್ಳುವ ನಿರ್ಧಾರದಂತೆ ಜ.19ರಂದು ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಲಾಗುವುದು. ಅದಕ್ಕಾಗಿ ಯಡಿಯೂರಪ್ಪ ಅವರ ಕಾರ್ಯವೈಖರಿ ಬಗ್ಗೆ ಎಲ್ಲರಲ್ಲೂ ಇರುವ ಆಕ್ಷೇಪಗಳನ್ನು ತಿಳಿದುಕೊಂಡು ಅದನ್ನು ಗಮನಕ್ಕೆ ತರುವ ಉದ್ದೇಶದಿಂದ ಬುಧವಾರದ ಸಭೆ ಕರೆಯಲಾಗಿದೆ ಎಂದು ಮೂಲಗಳು ಹೇಳಿವೆ.