Advertisement

ವೇತನ ನೀಡದ ಪ್ರಭಾರಿ ಪ್ರಾಚಾರ್ಯ; ಅತಿಥಿ ಉಪನ್ಯಾಸಕರಿಂದ ಖಾಲಿ ತಟ್ಟೆ ಹಿಡಿದು ಪ್ರತಿಭಟನೆ

08:12 PM Dec 02, 2023 | Team Udayavani |

ಗಂಗಾವತಿ: ರಾಜ್ಯ ಸರಕಾರ ಈಗಾಗಲೇ ಪದವಿ ಮಹಾವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದವವರ ವೇತನವನ್ನು ಕೆ2 ಮೂಲಕ ಮಂಜೂರು ಮಾಡಿದೆ. ಕಾಲೇಜಿನ ಅಧ್ಯಕ್ಷ ಹಾಗೂ ಶಾಸಕ ಗಾಲಿ ಜನಾರ್ದನರೆಡ್ಡಿ ಸೂಚನೆ ನೀಡಿದರೂ ಕೊಲ್ಲಿನಾಗೇಶ್ವರರಾವ್ ಸರಕಾರಿ ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯರು ವೇತನ ನೀಡಿದೇ ಹಲವು ತಿಂಗಳಿಂದ ತೊಂದರೆ ಕೊಡುತ್ತಿರುವುದನ್ನು ಖಂಡಿಸಿ ತಮ್ಮ ಚಿಕ್ಕಮಕ್ಕಳ ಸಮೇತ ಅತಿಥಿ ಉಪನ್ಯಾಸಕರು ಖಾಲಿ ತಟ್ಟೆ ಹಿಡಿದು ಪ್ರತಿಭಟನೆ ನಡೆಸಿ ಪ್ರಾಚಾರ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಸಂಘದ ಮಹಿಳಾ ಮುಖಂಡರು ಹಾಗೂ ನ್ಯಾಯವಾದಿ ಶಾಹೀನ ಕೌಸರ್ ಮಾತನಾಡಿ,ಇಡೀ ರಾಜ್ಯದಲ್ಲಿ ಅತಿಥಿ ಉಪನ್ಯಾಸಕರು ಹೋರಾಟ ನಡೆಸುತ್ತಿದ್ದಾರೆ. ಸ್ಥಳೀಯ ಕೊಲ್ಲಿ ನಾಗೇಶ್ವರರಾವ್ ಸರಕಾರಿ ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯ ಡಾ.ಜಾಜಿ ದೇವೆಂದ್ರಪ್ಪ ಈ ಹಿಂದೆ ಪ್ರಾಚಾರ್ಯರ ಹುದ್ದೆ ಇರದ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಕೆಲಸ ಕಾರ್ಯ ಹಾಗೂ ಅವರ ಕಷ್ಟಗಳ ಕುರಿತು ಸುದೀರ್ಘ ಭಾಷಣ ಮಾಡಿ ಬೆಂಬಲಿಸಿದ್ದರೂ ಇದೀಗ ಪ್ರಭಾರಿ ಪ್ರಾಚಾರ್ಯ ಹುದ್ದೆ ವಹಿಸಿಕೊಂಡ ನಂತರ ಅತಿಥಿ ಉಪನ್ಯಾಸಕ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಸರಕಾರದ ಸೂಚನೆ ಇದ್ದರೂ ಸ್ಥಳೀಯ ಶಾಸಕರೂ ಕಾಲೇಜು ಅಧ್ಯಕ್ಷ ಗಾಲಿ ಜನಾರ್ದನರೆಡ್ಡಿಯವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸೂಚನೆ ನೀಡಿದರೂ ಪ್ರಾಚಾರ್ಯ ಕ್ಯಾರೇ ಎನ್ನುತ್ತಿಲ್ಲ. ಇದರ ಪರಿಣಾಮವನ್ನು ಪ್ರಾಚಾರ್ಯರೂ ಹೆದರಿಸಬೇಕಾಗುತ್ತದೆ. ಸರಕಾರ ಹಠ ಮಾರಿ ಧೋರಣೆ ಮತ್ತು ಅತಿಥಿ ಉಪನ್ಯಾಸಕರು ವೇತನವಿಲ್ಲದೇ ಕುಟುಂಬ ನಿರ್ವಾಹಣೆ ಮಾಡಲೂ ಆಗದೇ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ವೇತನ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ ಎ.ಕೆ.ಮಹೇಶಕುಮಾರ, ಜಿ.ಪವನಕುಮಾರ, ಪಂಚಾಕ್ಷರಿ, ಪಂಢರಿನಾಥ ಅಗ್ನಿಹೋತ್ರಿ, ರಮೇಶ ಪೂಜಾರ, ತಾಯಪ್ಪ ಮರಿಚೇಡ, ಲಕ್ಷ್ಮೀದೇವಿ, ಸುನಂದಾ, ಡಾ.ಸೋಮಶೇಖರ್ ಜೇಕೀನ್, ನಾಗರತ್ನ, ಸಂಧ್ಯಾ ಸೇರಿ 20ಕ್ಕೂ ಹೆಚ್ಚು ಉಪನ್ಯಾಸಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next