Advertisement
ರಸ್ತೆ ಸರಿಪಡಿಸುವಂತೆ ಈ ಭಾಗದ ಜನಪ್ರತಿನಿಧಿಗಳಿಗೆ ಹಲವುಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜ ನವಾಗಿಲ್ಲ ಎನ್ನುತ್ತಾರೆ ಇಲ್ಲಿನ ಜನರು. ಮುಖ್ಯ ರಸ್ತೆಗಳು ಅಭಿವೃದ್ಧಿ ಹೊಂದುತ್ತಿದ್ದರೂ ಈ ರಸ್ತೆ ಮಾತ್ರ 15 ವರ್ಷಗಳಿಂದ ಡಾಮರು ಕಂಡಿಲ್ಲ. ಸುತ್ತಮುತ್ತಲಿನ ರಸ್ತೆಗಳು ಅಗಲೀಕರಣ, ಡಾಮರೀಕರಣಗೊಂಡು ಅಭಿ ವೃದ್ಧಿಗೊಳ್ಳುತ್ತಿದ್ದರೂ ಸುಮಾರು 7 ಕಿ.ಮೀ ಉದ್ದದ ಈ ರಸ್ತೆ ಮಾತ್ರವಿನ್ನೂ ಅಭಿವೃದ್ಧಿಗೊಂಡಿಲ್ಲ. ಜಿ.ಪಂ. ರಸ್ತೆಯಾಗಿರುವ ಈ ರಸ್ತೆ, ಅರ್ಧ ಭಾಗ ಪುತ್ತೂರು ವಿಧಾನ ಸಭಾ ಕ್ಷೇತ್ರದ ನೆಟ್ಟಣಿಗೆ ಮುಟ್ನೂರು ಕ್ಷೇತ್ರಕ್ಕೆ ಒಳಪಟ್ಟರೆ, ಅರ್ಧಭಾಗ ಸುಳ್ಯ ವಿಧಾನಸಭಾ ಕ್ಷೇತ್ರದ ಬೆಳಂದೂರು ಕ್ಷೇತ್ರಕ್ಕೆ ಒಳಪಟ್ಟಿದೆ.
Related Articles
ನಮ್ಮ ಮನವಿಗೆ ಹಲವು ವರ್ಷಗಳಿಂದ ಯಾವುದೇ ಸ್ಪಂದನೆ ದೊರಕುತ್ತಿಲ್ಲ. ಹಲವು ಸಲ ನಾವು ಶ್ರಮ ದಾನದಿಂದ ರಸ್ತೆಯ ಹೊಂಡ ಮುಚ್ಚುವ,ಪೊದರು ಕಡಿಯುವ ಕೆಲಸವನ್ನು ಶ್ರಮದಾನದ ಮೂಲಕ ಮಾಡುತ್ತಿದ್ದೆವು. ಈ ಬಾರಿ ನಾವು ಶ್ರಮದಾನ ಮಾಡದಿರಲು ತೀರ್ಮಾನಿಸಿದ್ದೇವೆ. ಹಲವು ಬಾರಿ ಗ್ರಾಮಸಭೆಗಳಲ್ಲಿ , ಸಾಮಾನ್ಯ ಸಭೆಗಳಲ್ಲಿ ಈ ಕುರಿತು ನಿರ್ಣಯ ಕೈಗೊಂಡು ಸಂಬಂಧಿಸಿದವರಿಗೆ ಕಳುಹಿಸಲಾಗಿದೆ. ಆದರೂ ಯಾವುದೇ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಇನ್ನು ನಮಗಿರುವು ಹೋರಾಟದ ಹಾದಿ ಮಾತ್ರ. ನಾವು ಇನ್ನು ರಸ್ತೆ ಡಾಮರೀಕರಣಕ್ಕಾಗಿ ಹೋರಾಟ ನಡೆಸುತ್ತೇವೆ ಎಂದು ಸವಣೂರು ಗ್ರಾ.ಪಂ. ಸದಸ್ಯ ಗಿರಿಶಂಕರ್ ಸುಲಾಯ ಅವರು ತಿಳಿಸಿದ್ದಾರೆ.
Advertisement