Advertisement

ಹುಬ್ಬಳ್ಳಿ ಉದ್ಯಮಿಯ ಮನೆಯಲ್ಲಿ ದಾಖಲೆಯಿಲ್ಲದ ಮೂರು ಕೋಟಿ ರೂ ಪತ್ತೆ

04:21 PM Mar 04, 2023 | Team Udayavani |

ಹುಬ್ಬಳ್ಳಿ: ನಗರದ ಕೈಗಾರಿಕೋದ್ಯಮಿಯೊಬ್ಬರ ಮನೆಯಲ್ಲಿ ದಾಖಲಾತಿಗಳಿಲ್ಲದ ಮೂರು ಕೋಟಿ ರೂ. ಅಕ್ರಮ ಹಣ ದೊರೆತಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.

Advertisement

ಇಲ್ಲಿನ ಭವಾನಿ ನಗರದ ಕೀಟನಾಶಕಗಳ ಕೈಗಾರಿಕೋದ್ಯಮಿ ರಮೇಶ ಎಂಬುವರ ಮನೆಯಲ್ಲಿ ದಾಖಲಾತಿಗಳಿಲ್ಲದ ಹಣ ದೊರೆತಿದೆ.

ಇದನ್ನೂ ಓದಿ:10 ರಿಂದ 81 ಕಿಮೀ ಬೃಹತ್‌ ಪಾದಯಾತ್ರೆ:ವಿಶ್ವಕರ್ಮ ಸಮಾಜ ಎಸ್‌ಟಿ ಮೀಸಲಾತಿಗೆ ಸೇರಿಸಲು ಒತ್ತಾಯ

ಸಿಸಿಬಿ ಎಸಿಪಿ ನಾರಾಯಣ ಭರಮನಿ ಹಾಗೂ ಅಶೋಕ ನಗರ ಠಾಣೆ ಇನ್ಸಪೆಕ್ಟರ್ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ಉದ್ಯಮಿ ಮನೆ ಮೇಲೆ ದಾಳಿ ಮಾಡಿ ಹಣ ಪತ್ತೆ ಮಾಡಿದ್ದಾರೆ. ಈ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ತನಿಖೆ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ.

ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next