Advertisement

ಕಾನೂನು ಓದದಿರುವುದು ಬುದಿಗೇಡಿತನ

09:57 AM Sep 01, 2017 | |

ಕಲಬುರಗಿ: ಜಿಲ್ಲೆಯಲ್ಲಿ ಮಹಿಳೆಯರ ಮತ್ತು ಮಕ್ಕಳ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಕುರಿತು ಗಮನ ಹರಿಸದೇ ಇರುವುದು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಸಮರ್ಪಕವಾಗಿ ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ ಮತ್ತು ಅತ್ಯಾಚಾರ
ನಿಯಂತ್ರಿಸುವ ಆಂತರಿಕ ದೂರು ಸಮಿತಿ ರಚಿಸದೇ ಇರುವುದು ಜತೆಗೆ ಈ ಕಾನೂನು ಬಗ್ಗೆ ಸರಿಯಾಗಿ ಓದದೇ ಇರುವುದು ಬುದ್ಧಿಗೇಡಿತನ ಸಂಗತಿಯಾಗಿದೆ ಎಂದು ಸದನ ಸಮಿತಿ ಅಧ್ಯಕ್ಷ ವಿ.ಎಸ್‌. ಉಗ್ರಪ್ಪ ಜಿಲ್ಲಾಧಿಕಾರಿ ಸೇರಿದಂತೆ ಇಡೀ ಜಿಲ್ಲಾಡಳಿತವನ್ನು ತರಾಟೆಗೆ ತೆಗೆದುಕೊಂಡರು.

Advertisement

ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಿತಿ ಸದಸ್ಯರೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ
ಅವರು, ಮಹತ್ವದ ಮಹಿಳಾ ಮಕ್ಕಳ ಮೇಲಿನ ಶೋಷಣೆ ತಗ್ಗಿಸುವ, ಸರ್ಕಾರಿ ಕಚೇರಿಯಗಳಲ್ಲಿನ ನೌಕರರ ಆಂತರಿಕ ದೂರು ಸಮಿತಿ ರಚಿಸದೆ ಇರುವುದು ಪ್ರಮುಖವಾಗಿ ಸುಪ್ರೀಂಕೋರ್ಟ್‌ ತೀರ್ಪನ್ನು ಜಿಲ್ಲಾಧಿಕಾರಿ ಸೇರಿದಂತೆ ಯಾವೊಬ್ಬ ಅಧಿಕಾರಿಗಳು ಓದಿ ತಿಳಿದುಕೊಳ್ಳದೇ ಇರುವುದು ನಿಜಕ್ಕೂ ಬುದ್ಧಿಗೇಡಿತನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಿ ಕಚೇರಿಗಳಲ್ಲಿ 10ಕ್ಕಿಂತ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರೆ ಅಂತಹ ಕಚೇರಿಗಳಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ ಮತ್ತು ಅತ್ಯಾಚಾರ ನಿಯಂತ್ರಿಸುವ ಆಂತರಿಕ ದೂರು ಸಮಿತಿ ರಚಿಸಿ ಪ್ರಸಕ್ತ ಸೆಪ್ಟೆಂಬರ್‌ ಮಾಸಾಂತ್ಯದೊಳಗೆ ಸಮಿತಿಗೆ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ವರದಿ ನೀಡದೆ ಇದ್ದ ಪಕ್ಷದಲ್ಲಿ ಮುಂದಿನ ಹೆಜ್ಜೆ
ಇಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಮಿತಿಯಲ್ಲಿ ಶೇ.50 ಸದಸ್ಯರು ಮಹಿಳೆಯರು ಇರಬೇಕು. ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂ ಧಿಸಿದ ಪ್ರಕರಣಗಳಿಗೆ ನೊಂದವರಿಗೆ ನ್ಯಾಯ ಮತ್ತು ಪರಿಹಾರ ನೀಡುವುದು,
ಆರೋಪಿಗಳಿಗೆ ಶಿಕ್ಷೆ ನೀಡಲು ಸಮಿತಿ ಅಗತ್ಯ ಕ್ರಮ ಕೈಗೊಳ್ಳಬೇಕು. ಸಮಿತಿ ರಚಿಸದಿದ್ದ ಅ ಧಿಕಾರಿಗಳಿಗೆ 50 ಸಾವಿರ ರೂ. ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಶಿಶು ಮರಣ ಪ್ರಮಾಣ ಇನ್ನು ತಗ್ಗಿಸಲು ಜಿಲ್ಲಾ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌, ವಾರ್ಮರ್‌, ಇನ್‌
ಕ್ಯೂಬೇಟರ್‌ ಹೆಚ್ಚಿನ ಸಂಖ್ಯೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. 500-1000 ಗ್ರಾಂ ಕಡಿಮೆ
ತೂಕದಲ್ಲಿ ಜನನವಾಗುವ ಶಿಶುಗಳ ಜೀವ ಉಳಿಸಲು ವೈದ್ಯರು ಹೆಚ್ಚು ಗಮನಹರಿಸಬೇಕು. ಲಿಂಗ ಅನುಪಾತ ಸರಿದೂಗಿಸಲು ಜಿಲ್ಲೆಯಲ್ಲಿ ವ್ಯಾಪಕ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳುವುದು ಹಾಗೂ ಲಿಂಗ ಪತ್ತೆ ಮಾಡುವ ಸ್ಕ್ಯಾನಿಂಗ್‌ ಸೆಂಟರ್‌ ಮೇಲೆ ತೀವ್ರ ನಿಗಾವಹಿಸಬೇಕು ಎಂದು ಸಮಿತಿ
ಅಧ್ಯಕ್ಷರು ಸೂಚಿಸಿದರು.

Advertisement

ಶಿಸ್ತು ಕ್ರಮ: ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸೂಕ್ತ ಪರಿಹಾರ ನೀಡದೇ ಇರುವ ದೂರುಗಳ ಬಗ್ಗೆ ಆಲಿಸಿದ ಸಮಿತಿ ಅಧ್ಯಕ್ಷರು, ಲೋಪದೋಷ ಎಸಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಸಿ.ವಿ. ರಾಮನ್‌ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ
ಉಗ್ರಪ್ಪ ಸಭೆ ಗಮನಕ್ಕೆ ತಂದರು.

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೋರ್ಲಪಾಟಿ ಮಾತನಾಡಿ, ಶಿಶು ಮರಣ ಪ್ರಮಾಣ ಹೆಚ್ಚಳಕ್ಕೆ ಗರ್ಭಿಣಿಯರಿಗೆ ಸೂಕ್ತ ಶೌಚಾಲಯದ
ಕೊರತೆ ಹಾಗೂ ಪೌಷ್ಟಿಕಾಂಶ ಆಹಾರ ಮುಖ್ಯ ಕಾರಣ ಎನ್ನುವುದನ್ನು ಗಮನಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಸಿರಿ ಮತ್ತು ಕೂಸು ಎಂಬ ಹೆಸರಿನ ನೂತನ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 60 ಸಾವಿರ ಶೌಚಾಲಯಗಳನ್ನು
ನಿರ್ಮಿಸುವ ಗುರಿ ಹೊಂದಿದ್ದು, ಇದೂವರೆಗೆ 21 ಸಾವಿರ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈ ಪೈಕಿ 11 ಸಾವಿರ ಶೌಚಾಲಯಗಳನ್ನು ಗರ್ಭಿಣಿಯರಿಗಾಗಿ ನಿರ್ಮಿಸಿರುವುದು ಮಾದರಿ ಕಾರ್ಯಕ್ರಮವಾಗಿದೆ ಎಂದು ಸಮಿತಿ ಗಮನಕ್ಕೆ ತಂದರು.

ಸಮಿತಿಯ ಸದಸ್ಯರಾಗಳಾದ ಕೆ.ಬಿ. ಶಾಣಪ್ಪ, ಶರಣಪ್ಪ ಮಟ್ಟೂರು, ವಿನೀಶ ನೀರೊ, ಪ್ರಫುಲ್ಲ ಮಧುಕರ್‌, ಡಾ| ವಸುಂಧರಾ ಭೂಪತಿ, ಹೆಚ್‌.ಆರ್‌. ರೇಣುಕಾ, ಕೆ.ಎಸ್‌. ವಿಮಲಾ, ಜ್ಯೋತಿ ಎ., ಪ್ರಭಾ ಎನ್‌, ಡಾ| ಲೀಲಾ ಸಂಪಿಗೆ, ಜಿಲ್ಲಾ ಧಿಕಾರಿ ಆರ್‌.ವೆಂಕಟೇಶ ಕುಮಾರ, ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಎನ್‌. ಶಶಿಕುಮಾರ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ
ಅಧಿಕಾರಿಗಳು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next