ಶ್ರೀನಗರ: ಜೂ. 30ರಿಂದ ಅಮರನಾಥ ಯಾತ್ರೆ ಆರಂಭವಾಗಲಿದ್ದು, ಆ ಸಂಬಂಧ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.
ಪ್ರತೀ ಬಾರಿಗಿಂತ ಈ ಬಾರಿ ಹೆಚ್ಚು ಯಾತ್ರಿಗಳು ಬರುವ ನಿರೀಕ್ಷೆಯಿದೆ. ಹಾಗಾಗಿ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಭದ್ರತಾ ಸಿಬಂದಿ ನಿಯೋಜಿಸಲಾಗಿದೆ ಎಂದು ಸೇನೆಯ ಅಧಿಕಾರಿಗಳೊಬ್ಬರು ಶನಿವಾರ ತಿಳಿಸಿದ್ದಾರೆ.
ಹಾಗೆಯೇ ಭದ್ರತಾ ದೃಷ್ಟಿಯಿಂದ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಶನಿವಾರ ಯೋಧರು ಪರಿಶೀಲನೆ ನಡೆಸಿದ್ದಾರೆ. ಭಾರತಕ್ಕೆ ನುಸು ಳಲು ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶ ದಲ್ಲಿರುವ ಲಾಂಚ್‌ಪ್ಯಾಡ್‌ಗಳಲ್ಲಿ 150 ಉಗ್ರರು ಸಿದ್ಧರಿದ್ದಾರೆ ಎಂದು ಅಧಿಕಾರಿ ಗಳು ತಿಳಿಸಿದ್ದಾರೆ.
ಹಾಗೆಯೇ ಗಡಿ ನಿಯಂತ್ರಣ ರೇಖೆಯ ಬಳಿಯ 11 ಉಗ್ರ ತರಬೇತಿ ಕೇಂದ್ರಗಳಲ್ಲಿ ಒಟ್ಟು 500ರಿಂದ 700 ಉಗ್ರರು ತರಬೇತಿ ಪಡೆಯುತ್ತಿದ್ದಾರೆ ಎಂದೂ ಅವರು ತಿಳಿಸಿದ್ದಾರೆ. ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದೊಳಗೆ ನುಸುಳುವಿಕೆ ಯತ್ನಗಳನ್ನು ಭಾರತೀಯ ಸೇನೆ ಯಶಸ್ವಿಯಾಗಿ ವಿಫಲಗೊಳಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ನಮ್ಮ ಸನಾತನ ಧರ್ಮ ಎಲ್ಲರನ್ನೂ ಪ್ರೀತಿಸುವು ದನ್ನು ಹೇಳಿಕೊಡುತ್ತದೆ. ನಾವಿಲ್ಲಿ ನಮ್ಮ ದೇವರ ದರ್ಶನ ಮಾಡಲು ಬಂದಿದ್ದೇವೆ. ರಾಜಕೀಯ, ಉಗ್ರ ಬೆದರಿಕೆ ಅಥವಾ ಬೇರೆ ಯಾವುದೇ ವಿಚಾರದೊಂದಿಗೆ ನಮಗೇನೂ ಮಾಡಬೇಕಾಗಿದ್ದಿಲ್ಲ.
-ಶ್ರೀ ರಾಜಗಿರಿ, ಯಾತ್ರೆಗೆ ಸಿದ್ಧವಾಗಿರುವ ಅಸ್ಸಾಂ ಮೂಲದ ಸಾಧು