Advertisement
ರವಿವಾರ ರಾತ್ರಿ ನಡೆದ ತೀವ್ರ ಪೈಪೋಟಿಯ ಪ್ರಶಸ್ತಿ ಸಮರದಲ್ಲಿ ಲಕ್ಷ್ಯ ಸೇನ್ ಬ್ರಝಿಲ್‌ನ ಎದುರಾಳಿ ವೈಗರ್ ಕೆಲೊ ಅವರನ್ನು 18-21, 21-18, 21-19 ಅಂತರ ದಿಂದ ಮಣಿಸುವಲ್ಲಿ ಯಶಸ್ವಿಯಾದರು.
18ರ ಹರೆಯದ, ಉತ್ತರಾಖಂಡ್‌ನ ಪ್ರತಿಭೆಯಾಗಿರುವ ಲಕ್ಷ್ಯ ಸೇನ್ ಕಳೆದ ಸೆಪ್ಟಂಬರ್ ತಿಂಗಳಿಂದೀಚೆ ಗೆದ್ದ 4ನೇ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಪ್ರಶಸ್ತಿ ಇದಾಗಿದೆ.
ಇದಕ್ಕೂ ಮುನ್ನ ಸಾರ್ಲೋರ್‌ಲಕ್ಸ್ ಓಪನ್, ಡಚ್ ಓಪನ್ ಮತ್ತು ಬೆಲ್ಜಿಯನ್ ಓಪನ್ ಕೂಟಗಳಲ್ಲೂ ಸೇನ್ ಕಿರೀಟ ಏರಿಸಿಕೊಂಡಿದ್ದರು. ಆದರೆ ಸ್ಕಾಟಿಷ್ ಓಪನ್ ಟೂರ್ನಿಗೂ ಮೊದಲು ನಡೆದ ಐರಿಷ್ ಓಪನ್ ಕೂಟದಲ್ಲಿ ದ್ವಿತೀಯ ಸುತ್ತಿನಲ್ಲೇ ಸೋಲನುಭವಿಸಿದ್ದರು. “ಸ್ಕಾಟಿಷ್ ಓಪನ್ ಪ್ರಶಸ್ತಿ ಜಯಿಸಿದ್ದಕ್ಕೆ ವಿಪ ರೀತ ಖುಷಿಯಾಗಿದೆ. ಗೆಳೆಯನೆದುರಿನ ಈ ಪಂದ್ಯ ಭಾರೀ ಪೈಪೋಟಿಯಿಂದ ಕೂಡಿತ್ತು. ಡೆನ್ಮಾರ್ಕ್ ನಲ್ಲಿ ಅಭ್ಯಾಸ ನಡೆಸಿದ್ದು ಫಲ ಕೊಟ್ಟಿತು’ ಎಂದು ಲಕ್ಷ್ಯ ಸೇನ್ ಪ್ರತಿಕ್ರಿಯಿಸಿದ್ದಾರೆ.
Related Articles
Advertisement
ಭಾರತಕ್ಕೆ 5ನೇ ಪ್ರಶಸ್ತಿಇದು ಭಾರತೀಯರಿಗೆ ಒಲಿದ 5ನೇ ಸ್ಕಾಟಿಷ್ ಓಪನ್ ಪ್ರಶಸ್ತಿ. ಆನಂದ್ ಪವಾರ್ 2 ಸಲ ಚಾಂಪಿಯನ್ ಆಗಿರುವುದು ದಾಖಲೆ(2010 ಮತ್ತು 2012). ಉಳಿದಿಬ್ಬರೆಂದರೆ ಅರವಿಂದ್ ಭಟ್ (2004) ಮತ್ತು ಪುಲ್ಲೇಲ ಗೋಪಿಚಂದ್ (1999).