ಮೆಲ್ಬರ್ನ್: ಭಾರತದ ಅಂಡರ್-19 ವಿಶ್ವಕಪ್ ಕೂಟದ ಯಶಸ್ವಿ ನಾಯಕ ಉನ್ಮುಕ್ತ್ ಚಂದ್ ಹೊಸ ಇತಿಹಾಸ ಬರೆದಿದ್ದಾರೆ.
ಆಸ್ಟ್ರೇಲಿಯದ ಪ್ರತಿಷ್ಠಿತ ಬಿಗ್ ಬಾಶ್ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಕ್ರಿಕೆಟಿಗ ಎನಿಸಿದ್ದಾ ರೆ.
ಮಂಗಳವಾರ ಮೆಲ್ಬರ್ನ್ ರೆನೆಗೇಡ್ಸ್ ತಂಡದ ಪರ ಕಣಕ್ಕಿಳಿಯುವ ಮೂಲಕ ಅವರು ಈ ಹಿರಿಮೆಗೆ ಪಾತ್ರರಾದರು.
ಈಗಾಗಲೇ ಮಹಿಳಾ ಬಿಗ್ ಬಾಶ್ ಲೀಗ್‌ನಲ್ಲಿ ಭಾರತದ ಬಹಳಷ್ಟು ಆಟಗಾರ್ತಿಯರು ಈ ವರ್ಷ ಆಡಿದ್ದರು.
ಟೀಮ್ ಇಂಡಿಯಾ ಕಿರಿಯರ ವಿಶ್ವಕಪ್ ವಿಜೇತ ತಂಡದ ನಾಯಕನಾಗಿದ್ದ ಉನ್ಮುಕ್ತ್ ಚಂದ್ ಭಾರತ ತೊರೆದು ಅಮೆರಿಕನ್ ಕ್ರಿಕೆಟಿಗರಾಗಿದ್ದಾರೆ. ಅವಕಾಶ ವಂಚಿತರಾಗಿ ವರ್ಷದ ಹಿಂದೆ ಅಮೆರಿಕಕ್ಕೆ ವಲಸೆ ಹೋದ ಅವರು ಅಲ್ಲಿ ಕ್ರಿಕೆಟ್ ವೃತ್ತಿಜೀವನ ಮುಂದುವರಿಸಿದ್ದಾರೆ.