Advertisement
ಧಿಶಕ್ತಿ, ಮಹಾಮಾಯೆ, ದುರ್ಗಾಪರಮೇಶ್ವರಿ ಪರಬ್ರಹ್ಮ ಸ್ವರೂಪಿಣಿ. ನಭೋಮಂಡಲದಲ್ಲಿ ಲೆಕ್ಕವಿರದಷ್ಟು ಮಾಯಾಬ್ರಹ್ಮಾಂಡಗಳನ್ನು ಸೃಜಿಸಿ ಮಾಯಾಲೀಲೆಯ ಸೃಷ್ಟಿಸಿದ ದುರ್ಗಾ ದುರ್ಗತಿ ನಾಶಿನಿ ಎಂದೇ ಪ್ರಸಿದ್ಧಿಯಾದ ದುರ್ಗಾ ದೇವಿಯ ಸ್ಮರಣೆಯೇ ನವರಾತ್ರಿ. ನವರಾತ್ರಿಯಲ್ಲಿ ಮೈಸೂರಿನಲ್ಲಿ ನೆಲೆಸಿರುವ ಬೆಟ್ಟದ ಅರಸಿ ಚಾಮುಂಡೇಶ್ವರಿಯು ಮಹಿಷಾಸುರ ಮರ್ಧಿನಿಯಾಗಿ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು.
Related Articles
Advertisement
ಅದೆಷ್ಟೇ ನೋಡಿದರು ಮತ್ತೆ ನೋಡ್ಬೇಕು ಅನ್ನುವ ಸೌಂದರ್ಯ ಸ್ವರ್ಗವೇ ಧರೆ ಅಪ್ಪಿದಂತೆ ಮೈಸೂರು. ನವರಾತ್ರಿಯಲ್ಲಿ ವಿವಿಧ ಕಾರ್ಯಕ್ರಮಗಳು ವಸ್ತು ಪ್ರದರ್ಶನ, ಪುಷ್ಪ ಪ್ರದರ್ಶನ, ಕುಸ್ತಿ ಪಂದ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಯುವ ದಸರಾ, ನೃತ್ಯ ಕವಿಗೋಷ್ಠಿ, ಟಾರ್ಚ್ ಲೈಟ್ ಶೋ ಇನ್ನಿತರ ಕಾರ್ಯಕ್ರಮ ನಡೆಯುತ್ತದೆ.
ವಿಜಯದಶಮಿಯ ದಿನದಂದು ಆಚರಿಸಲ್ಪಡುವ ದಸರಾ. ಆನೆಗಳ ದಂಡು, ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯ ಮೆರವಣಿಗೆ ವೈಭೋಗದಲ್ಲಿ ಶ್ರೀ ತಾಯಿ ಚಾಮುಂಡೇಶ್ವರಿ ಅಮ್ಮನವರು, ಮೈಸೂರ ಸುತ್ತೆಲ್ಲ ಪ್ರದಕ್ಷಿಣೆ ಜೊತೆಗೆ ಡೋಲು ಕುಣಿತ ವಿವಿಧ ಮೆರೆತಗಳು ಆನೆಗಳು, ಕುದುರೆಗಳು, ಒಂಟೆಗಳು, ಗೊಂಬೆಗಳು ವಿವಿಧ ರಾಜ್ಯಗಳಿಂದ ಬರುವ ವಿಧವಿಧ ವಿನ್ಯಾಸಗಳು ಮೈಸೂರು ದಸರಾಕ್ಕೆ ಮೆರಗು.
ಜಂಬೂ ಸವಾರಿ ನೋಡಲು ನೂಕುನುಗ್ಗಲು ಮತ್ತು ಆ ಜನರ ಗುಂಪಿನಲ್ಲಿ ಹರ ಸಾಹಸ ಮಾಡಿ ವೀಕ್ಷಿಸುವುದು ಜನರಿಗೆ ಮುದ ನೀಡುತ್ತದೆ. ಕೆಲವರು ತಳ್ಳುವ ಗಾಡಿಯ ಮೇಲೆ ನಿಂತು ದಸರಾ ವೀಕ್ಷಣೆ, ಮಹಡಿ ಮನೆಗಳ ಮೇಲೆ ನಿಂತು ನೋಡುವುದು ಅಲ್ಲಿ ಜಾಗ ಮಾಡುಕೊಂಡು ಒಟ್ಟಿನಲ್ಲಿ ಮೈಸೂರಿನಲ್ಲಿ ಜನಸಾಗರ ನೋಡುವುದೇ ಕಣ್ಣಿಗೆ ಹಬ್ಬ.
-ವಾಣಿ ಮೈಸೂರು