Advertisement

ಅನುಮತಿ ರಹಿತ ಧಜ, ಬ್ಯಾನರ್‌, ಜಾಹೀರಾತು ಫಲಕಗಳ ತೆರವು

05:21 PM Dec 03, 2017 | Team Udayavani |

ನಗರ: ಕಲ್ಲಾರೆ- ದರ್ಬೆ ನಡುವಿನ ಡಿವೈಡರ್‌ನಲ್ಲಿ ಅಳವಡಿಸಿದ್ದ ಬ್ಯಾನರ್‌, ಫಲಕ, ಧ್ವಜವನ್ನು ತೆರವು ಮಾಡುವ ಕಾರ್ಯಾಚರಣೆ ಶನಿವಾರ ನಗರ ಸಭೆ ವತಿಯಿಂದ ನಡೆಯಿತು.

Advertisement

ಪುತ್ತೂರಿನ ಕಲ್ಲಾರೆಯಿಂದ ಫಾ| ಪತ್ರಾವೋ ವೃತ್ತದವರೆಗೆ, ದರ್ಬೆಯಿಂದ ಲಿಟ್ಲ ಫ್ಲವರ್ ಶಾಲೆವರೆಗೆ ಡಿವೈಡರ್‌ ಹಾಕಲಾಗಿದೆ. ಈ ಡಿವೈಡ ರ್‌ನಲ್ಲಿ ಇತ್ತೀಚೆಗಿನ ದಿನಗಳಲ್ಲಿ ಫ್ಲೆಕ್ಸ್‌, ಬ್ಯಾನರ್‌ ಅಳವ ಡಿಸಲಾಗಿತ್ತು. ಅಂದಹಾಗೇ, ಇದಕ್ಕೆ ನಗರಸಭೆಯಿಂದ ಅನುಮತಿ ನೀಡುತ್ತಿಲ್ಲ. ಡಿವೈಡರ್‌ನ ವಿದ್ಯುತ್‌ ಕಂಬಗಳಿಗೆ ಯಾವುದೇ ಕಾರಣಕ್ಕೂ ಬ್ಯಾನರ್‌ ಹಾಕು ವಂತಿಲ್ಲ. ಹಾಗಿದ್ದರೂ ಪಕ್ಷದ, ಸಂಸ್ಥೆಗಳ ಬ್ಯಾನರ್‌ ಡಿವೈಡರ್‌ ವಿದ್ಯುತ್‌ ಕಂಬದಲ್ಲಿ ನೇತಾಡುತ್ತಿರುತ್ತವೆ.

ಯಾಕೆ ಈ ಕಾರ್ಯಾಚರಣೆ?
ಡಿವೈಡರ್‌ ಆರಂಭ, ಅಂತ್ಯದಲ್ಲಿ ವಿದ್ಯುತ್‌ ಕಂಬದ ನಡುವೆ ಜಾಹೀರಾತು ಫಲಕ ಹಾಕುವುದಕ್ಕೆ ನಗರಸಭೆ ಅನುಮತಿ ನೀಡುತ್ತದೆ. ಸೂಕ್ತ ರೀತಿಯಲ್ಲಿ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿ ಫಲಕ ಹಾಕಿಕೊಳ್ಳಬಹುದು. ಆದರೆ ವಾಹನ ಸವಾರರಿಗೆ ತೊಂದರೆಯಾಗದಂತೆ ಎಚ್ಚರ ತೆಗೆದುಕೊಳ್ಳಬೇಕು. ಇದರ ಜವಾಬ್ದಾರಿ ಪೊಲೀಸ್‌ ಇಲಾಖೆ, ನಗರಸಭೆಯದ್ದು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದೆ. ಈ ಸಂದರ್ಭ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್‌ ಉಪಸ್ಥಿತರಿದ್ದರು.

ಸಮಸ್ಯೆ ಯಾಕೆ?
ಡಿವೈಡರ್‌ನಲ್ಲಿ ದಾರಿದೀಪಗಳನ್ನು ಅಳವಡಿಸಲಾಗಿದೆ. ಎರಡೂ ಬದಿಗೂ ಬೆಳಕು ನೀಡುವ ವ್ಯವಸ್ಥೆ ಇದರಲ್ಲಿದೆ. ಈ ವಿದ್ಯುತ್‌ ದೀಪದ ಕಂಬಗಳೇ ಜಾಹೀರಾತು ಫಲಕಗಳಿಗೆ ಆಸರೆ. ಕಂಬಗಳಿಗೆ ಫಲಕಗಳನ್ನು ಕಟ್ಟಲಾಗುತ್ತದೆ. ಆದರೆ ಫಲಕದ ಮೇಲ್ಭಾಗಕ್ಕೆ ಮಾತ್ರ ಹಗ್ಗದಲ್ಲಿ ಕಟ್ಟುವುದರಿಂದ, ಜೋತಾಡುತ್ತವೆ. ಇದು ವಾಹನ ಸವಾರರ ಮುಖಕ್ಕೆ ಬಡಿಯುತ್ತಿವೆ. ಹೆಚ್ಚು ಗಾಳಿ ಬೀಸಿದ ಸಂದರ್ಭ ಅಥವಾ ಎದುರು ಭಾಗದಿಂದ ಘನ ವಾಹನ ಸಂಚರಿಸುವಾಗ ಫಲಕ ಜೋರಾಗಿ ಓಲಾಡುತ್ತವೆ. ಇದರಿಂದ ರಿಕ್ಷಾ, ಕಾರು, ಘನ ವಾಹನಗಳಿಗೆ ಸಮಸ್ಯೆ ಏನು ಇಲ್ಲ. ಆದರೆ ಬೈಕ್‌, ಸ್ಕೂಟರ್‌ ಸವಾರರಿಗೆ ಸಮಸ್ಯೆಯಾಗಿದೆ. ಅನಿರೀಕ್ಷಿತ ಆಘಾತದಿಂದ ಬೈಕ್‌ ಮಗುಚಿ ಬೀಳಬಹುದು. ಜನದಟ್ಟಣೆ ಸಂದರ್ಭ, ಹಿಂದಿನಿಂದ ಬಂದ ವಾಹನವೂ ಅಪಘಾತಕ್ಕೆ ಒಳಗಾಗಬಹುದು. ಇದರಿಂದ ಸಂಚಾರ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಇಕ್ಕಟ್ಟು ರಸ್ತೆ
ಕಲ್ಲಾರೆಯಿಂದ ದರ್ಬೆ ನಡುವಿನ ಹಾದಿ ತುಂಬಾ ಇಕ್ಕಟ್ಟಾಗಿದೆ. ಡಿವೈಡರ್‌ ಹಾಕಿದ ಕಾರಣ ಇಲ್ಲಿ ಏಕಮುಖೀ ರಸ್ತೆ. ಹಾಗೆಂದು ಇದು ಸಮಸ್ಯೆಯೇ ಅಲ್ಲ. ರಸ್ತೆಯ ಬದಿಯಲ್ಲಿ ವಾಹನ ಪಾರ್ಕಿಂಗ್‌ ಮಾಡುವುದರಿಂದ ನೈಜ ಸಮಸ್ಯೆ ಸೃಷ್ಟಿಯಾಗಿದೆ. ಘನ ವಾಹನ ಹೋಗುವ ಸಂದರ್ಭ ಹಿಂದಿನ ವಾಹನಕ್ಕೆ
ಅಡ್ಡಿಯಾಗುತ್ತದೆ. ಈ ಸಂದರ್ಭ ದ್ವಿಚಕ್ರ ಸವಾರರು ಡಿವೈಡರ್‌ ಬದಿಗೆ ಹೋದರೆ, ಮುಖಕ್ಕೆ ಫ್ಲೆಕ್ಸ್‌, ಬ್ಯಾನರ್‌ ರಾಚುತ್ತವೆ. ಇದು ಅಪಘಾತಕ್ಕೆ ಕಾರಣ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿತ್ತು.

Advertisement

ಕಾಮಗಾರಿಗೆ ಅಡ್ಡಿ
ಡಿವೈಡರ್‌ನ ವಿದ್ಯುತ್‌ ಲೈಟ್‌ಗಳು ಆಗಾಗ ಕೈಕೊಡುತ್ತವೆ. ಅಂತಹ ಸಂದರ್ಭ ತುರ್ತು ಕಾಮಗಾರಿ ನಡೆಸಬೇಕಾದ ಅನಿವಾರ್ಯತೆ ಇದೆ. ಹೀಗೆ ಕಾಮಗಾರಿ ನಡೆಸಲು ಬ್ಯಾನರ್‌, ಫ್ಲೆಕ್ಸ್‌ಗಳು ಅಡ್ಡಿ. ಮೇಲ್ಸೆತುವೆಯಲ್ಲೂ ಬ್ಯಾನರ್‌ ಅಳವ ಡಿಸುಂತಿಲ್ಲ. ಇದನ್ನು ಮೀರಿ ಬ್ಯಾನರ್‌ ಕಟ್ಟಿದರೆ, ಕಿತ್ತು ಹಾಕುವ ಕ್ರಮವನ್ನು ನಗರಸಭೆ ಕೈಗೊಳ್ಳುತ್ತದೆ.

ಯಾರೂ ಹೊರತಲ್ಲ
ಡಿವೈಡರ್‌ ಕಂಬಕ್ಕೆ ಬ್ಯಾನರ್‌, ಬಂಟಿಂಗ್ಸ್‌ ಹಾಕಬಾರದೆಂಬ ನಿಯಮ ನಗರಸಭೆ ಬೈಲಾದಲ್ಲಿದೆ. ಈ ಹಿನ್ನೆಲೆಯಲ್ಲಿ ಕೆಲ ದಿನಗಳಿಂದಲೇ ಬ್ಯಾನರ್‌ ತೆಗೆಯುವಂತೆ ಎಚ್ಚರಿಕೆ ನೀಡಲಾಗುತ್ತಿದೆ. ಕಾರ್ಯಕ್ರಮದ ಬ್ಯಾನರ್‌ ಹಾಕಿದರೆ, ತಿಂಗಳುಗಟ್ಟಲೆ ತೆಗೆಯುವುದೇ ಇಲ್ಲ. ಬ್ಯಾನರ್‌ನ ಹಗ್ಗ ತುಂಡಾಗಿ ವಾಹನದ ಮೇಲೆ ಬಿದ್ದರೆ, ಉತ್ತರ ಹೇಳಬೇಕಾದ ಜವಾಬ್ದಾರಿ ನಗರಸಭೆ ಮೇಲಿದೆ. ಆದ್ದರಿಂದ ಯಾರಿಗೂ ಡಿವೈಡರ್‌ನಲ್ಲಿ ಬ್ಯಾನರ್‌, ಫ್ಲೆಕ್ಸ್‌ ಹಾಕಲು ಅವಕಾಶವಿಲ್ಲ. ಇದಕ್ಕೆ ರಾಜಕೀಯ ಪಕ್ಷಗಳು ಹೊರತಾಗಿಲ್ಲ
ಜಯಂತಿ ಬಲ್ನಾಡ್‌
  ಅಧ್ಯಕ್ಷೆ, ನಗರಸಭೆ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next