ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ಮತ್ತೆ ಕೋವಿಡ್ 19 ಸೋಂಕಿನ ಪ್ರಕರನ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ರಾಜ್ಯ ಸರ್ಕಾರಗಳು ಮತ್ತೆ ಹೊಸ ನಿರ್ಬಂಧಗಳನ್ನು ಜಾರಿಗೊಳಿಸಲು ಮುಂದಾಗಿದೆ. ಕಳೆದ ವಾರವಷ್ಟೇ ಕೇಂದ್ರ ಸರ್ಕಾರ ಅನ್ ಲಾಕ್ 4.0 ನಿಯಮಾವಳಿಯನ್ನು ಘೋಷಿಸಿತ್ತು.
ಕೋವಿಡ್ 19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವ ರಾಜ್ಯ/ಜಿಲ್ಲೆಗಳಲ್ಲಿ ನೂತನ ನಿರ್ಬಂಧ ಹೇರಲಾಗಿದೆ ಎಂಬ ವಿವರ ಇಲ್ಲಿದೆ…
ರಾಯ್ ಪುರ್: ಸೆಪ್ಟೆಂಬರ್ 21ರ ರಾತ್ರಿ 9ಗಂಟೆಯಿಂದ ಸೆಪ್ಟೆಂಬರ್ 28ರವರೆಗೆ ಮಧ್ಯರಾತ್ರಿವರೆಗೆ ಲಾಕ್ ಡೌನ್ ಜಾರಿಗೊಳಿಸಿರುವುದಾಗಿ ಚತ್ತೀಸ್ ಗಢ್ ಜಿಲ್ಲಾಡಳಿತ ಘೋಷಿಸಿದೆ. ಅಲ್ಲದೇ ಅತೀ ಹೆಚ್ಚು ಸೋಂಕು ಪ್ರದೇಶ ಯಾವುದು ಎಂಬುದನ್ನು ತಿಳಿಸಿದೆ. ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ಮತ್ತೆ ಬಂದ್ ಎಂದು ವಿವರಿಸಿದೆ.
ಜೈಪುರ್: ರಾಜ್ಯದಲ್ಲಿನ 11 ಜಿಲ್ಲೆಗಳಲ್ಲಿ ಅಪರಾಧ ದಂಡ ಸಂಹಿತೆ ಸೆಕ್ಷನ್ 144 ಜಾರಿಗೊಳಿಸಲು ರಾಜಸ್ಥಾನ್ ಸರ್ಕಾರ ಶನಿವಾರ ನಿರ್ಧಾರ ತೆಗೆದುಕೊಂಡಿತ್ತು. ಜೈಪುರ್, ಜೋಧ್ ಪುರ್, ಕೋಟ, ಅಜ್ಮೀರ್, ಅಲ್ವಾರ್, ಭಿಲ್ವಾರಾ, ಬಿಕಾನೇರ್, ಉದಯ್ ಪುರ್ , ಸಿಕಾರ್ ಜಿಲ್ಲೆಗಳು ಸೇರಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಸಮುದ್ರ ದಂಡೆಗೆ ಬಂದು ರಾಶಿಬಿದ್ದ 270 ತಿಮಿಂಗಿಲಗಳು!
ಮುಂಬೈ: ಸೆಪ್ಟೆಂಬರ್ 30ರವರೆಗೆ ಜನ ಗುಂಪುಗೂಡುವುದನ್ನು ಮುಂಬೈ ಮಹಾನಗರ ಪಾಲಿಕೆ ನಿಷೇಧಿಸಿದೆ. ಕಳೆದ ಮಾರ್ಚ್ 25ರಿಂದ ಮುಂಬೈನಲ್ಲಿ ಸೆಕ್ಷನ್ 144 ಜಾರಿಯಲ್ಲಿತ್ತು.
ನೋಯ್ಡಾ: ಸೆಪ್ಟೆಂಬರ್ 30ರವರೆಗೆ ಸೆಕ್ಷನ್ 144 ಮುಂದುರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದು, ಯಾವುದೇ ಹೊಸ ನಿರ್ಬಂಧ ಹೇರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದಿಲ್ಲಿ: ಎಲ್ಲಾ ಶಾಲಾ ಕಾಲೇಜುಗಳು ಅಕ್ಟೋಬರ್ 5ರವರೆಗೆ ಬಂದ್ ಮುಂದುವರಿಯಲಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ತಮಿಳುನಾಡು:ತಮಿಳುನಾಡಿನಲ್ಲಿ ಭಾನುವಾರ ಲಾಕ್ ಡೌನ್ ಮುಂದುವರಿಸಲು ಚಿಂತನೆ ನಡೆಸುತ್ತಿದೆ. ಆರೋಗ್ಯ ಸೇವೆ ಮತ್ತು ಹಾಲು ಸರಬರಾಜು ಮಾಡಲು ಮಾತ್ರ ಅವಕಾಶ ನೀಡಲು ಸರ್ಕಾರ ಎದುರು ನೋಡುತ್ತಿದೆ ಎಂದು ವರದಿ ತಿಳಿಸಿದೆ.