Advertisement

ರಾತ್ರಿ ಕರ್ಫ್ಯೂ, ರವಿವಾರದ ಲಾಕ್‌ಡೌನ್‌ ರದ್ದು

01:30 AM Jul 31, 2020 | Hari Prasad |

ಬೆಂಗಳೂರು: ರಾಜ್ಯದಲ್ಲಿ ಆ.1ರಿಂದ 31ರವರೆಗೆ ಮೂರನೇ ಹಂತದ ಅನ್‌ಲಾಕ್‌ 3.0 ಜಾರಿಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಶುಕ್ರವಾರಕ್ಕೆ ರಾತ್ರಿ ಕರ್ಫ್ಯೂ ಮುಕ್ತಾಯವಾಗಲಿದೆ.

Advertisement

ಆ. 2ರ ರವಿವಾರದ ಲಾಕ್‌ಡೌನ್‌ ಕೂಡ ರದ್ದಾಗಿದ್ದು, ಕಂಟೈನ್‌ಮೆಂಟ್‌ ವಲಯದಲ್ಲಿ ಲಾಕ್‌ಡೌನ್‌ ಆ. 31ರ ವರೆಗೆ ಮುಂದುವರಿಯಲಿದೆ.

ನಾಲ್ಕು ತಿಂಗಳ ಬಳಿಕ ರಾಜ್ಯದಲ್ಲಿ ಜಿಮ್‌ ಮತ್ತು ಯೋಗ ಕೇಂದ್ರಗಳು ಆ. 5ರಿಂದ ತೆರೆಯಲು ಅನುಮತಿ ನೀಡಲಾಗಿದ್ದು, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.

ಜತೆಗೆ ರಾಜ್ಯದೊಳಗೆ ಮತ್ತು ಅಂತಾರಾಜ್ಯ ಜನಸಂಚಾರ ಹಾಗೂ ಸರಕು ಸಾಗಣೆಗೆ ಯಾವುದೇ ನಿರ್ಬಂಧ ಇಲ್ಲ. ಸ್ವಾತಂತ್ರ್ಯೋತ್ಸವ ಆಚರಣೆಗೆ ಸಂಬಂಧಪಟ್ಟಂತೆ ಕೇಂದ್ರ ಗೃಹ ಇಲಾಖೆ ಹೊರಡಿಸಿರುವ ಮಾರ್ಗ ಸೂಚಿಗಳನ್ನು ಪಾಲಿಸುವಂತೆ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ಶುಕ್ರವಾರ ಹೊರಡಿಸಿರುವ ಆದೇಶದಲ್ಲಿ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next