Advertisement

ಕಾಗದರಹಿತ ಟಿಕೆಟ್‌, ಆಸನಗಳು ಆಲ್‌ ಇನ್‌ ಒನ್‌ ಎಸ್ಸೆಮ್ಮೆಸ್‌…

03:34 AM Jul 24, 2020 | Hari Prasad |

ಹೊಸದಿಲ್ಲಿ: ಕಾಗದ ರಹಿತ ಟಿಕೆಟ್‌, ಆಸನದಲ್ಲಿ ಅಂತರ, ಪ್ರತ್ಯೇಕ ಇಂಟರ್ವಲ್‌ಗ‌ಳು…

Advertisement

ಮುಂದಿನ ತಿಂಗಳು 3ನೇ ಹಂತದ ಅನ್‌ಲಾಕ್‌ ಜಾರಿಯಾಗಲಿದ್ದು, ಕೇಂದ್ರ ಸರಕಾರವೇನಾದರೂ ಮಲ್ಟಿಪ್ಲೆಕ್ಸ್‌ಗಳನ್ನು ತೆರೆಯಲು ಅನುಮತಿ ನೀಡಿದರೆ, ವಿವಿಧ ಸುರಕ್ಷಾ ಕ್ರಮಗಳನ್ನು ಅನುಸರಿಸಲು ಮಲ್ಟಿಪ್ಲೆಕ್ಸ್‌ಗಳು ಸಿದ್ಧತೆ ನಡೆಸಿವೆ.

ಭಾರತೀಯ ಮಲ್ಟಿಪ್ಲೆಕ್ಸ್‌ ಸಂಘವು ಈಗಾಗಲೇ ಮಾರ್ಗಸೂಚಿಯನ್ನು ಸಿದ್ಧಪಡಿಸಿಕೊಂಡಿದ್ದು, ಅದನ್ನು ಕೇಂದ್ರದ ವಿವಿಧ ಸಚಿವಾಲಯಗಳು, ಪ್ರಧಾನಿ ಕಾರ್ಯಾಲಯ, ನೀತಿ ಆಯೋಗಕ್ಕೆ ಕಳುಹಿಸಲಾಗಿದೆ ಎಂದು ಐನಾಕ್ಸ್‌, ಪಿವಿಆರ್‌ ಪಿಕ್ಚರ್ಸ್‌ ಮತ್ತು ಸಿನೆಪೊಲಿಸ್‌ ಇಂಡಿಯಾದ ಪ್ರಮುಖರು ತಿಳಿಸಿದ್ದಾರೆ.

ಸುರಕ್ಷಾ ಕ್ರಮಗಳೇನು?
– ಕಾಗದ ರಹಿತ ಟಿಕೆಟ್‌ ವ್ಯವಸ್ಥೆ. ಮೊಬೈಲ್‌ ಫೋನ್‌ನಲ್ಲಿರುವ ಬಾರ್‌ ಕೋಡ್‌ ಸ್ಕ್ಯಾನರ್‌ ಲಿಂಕ್‌ ಸ್ಕ್ಯಾನ್‌ ಮಾಡಿ ಒಳಪ್ರವೇಶ

– ಆಲ್‌ ಇನ್‌ ಒನ್‌ ಎಸ್ಸೆಮ್ಮೆಸ್‌ ವ್ಯವಸ್ಥೆ. ಈ ಮೂಲಕ ಪ್ರವೇಶ ದ್ವಾರದಲ್ಲಿ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿಸಿಕೊಂಡು ಒಳಹೋಗುವ, ಆಸನದ ಲೊಕೇಷನ್‌ ಪತ್ತೆಹಚ್ಚುವ ಮತ್ತು ಆಹಾರವನ್ನು ಆರ್ಡರ್‌ ಮಾಡುವ ವ್ಯವಸ್ಥೆ

Advertisement

– ಆಟೋಮ್ಯಾಟಿಕ್‌ ಆಗಿ ಆಸನ ವ್ಯವಸ್ಥೆಯಲ್ಲಿ ಅಂತರ ಕಾಯ್ದುಕೊಳ್ಳುವಿಕೆ

– ಸಿನಿಮಾ ಥಿಯೇಟರ್‌ನ ಒಳಾಂಗಣ, ಹೊರಾಂಗಣ, ಬಾಗಿಲುಗಳು, ರೈಲಿಂಗ್‌ಗಳನ್ನು ನಿಯಮಿತವಾಗಿ ಸ್ಯಾನಿಟೈಸ್‌ ಮಾಡುವುದು

– ಒಳಬರುವವರ ದೇಹದ ಉಷ್ಣಾಂಶ ಪರೀಕ್ಷೆ, ಮಾಸ್ಕ್ ಕಡ್ಡಾಯ

– ಪ್ರತಿ ಶೋ ಮುಗಿದ ಕೂಡಲೇ ಸ್ವಚ್ಛಗೊಳಿಸುವ ಪ್ರಕ್ರಿಯೆ

– ಏಕಕಾಲಕ್ಕೆ ಎರಡು ಸ್ಕ್ರೀನ್‌ಗಳಲ್ಲಿ ಚಿತ್ರ ಪ್ರದರ್ಶನ ಇರುವುದಿಲ್ಲ

– ಇಂಟರ್ವಲ್‌ ಅವಧಿಯಲ್ಲಿಯೂ 15 ನಿಮಿಷಗಳಿಂದ ಅರ್ಧ ಗಂಟೆಯ ಅಂತರ

Advertisement

Udayavani is now on Telegram. Click here to join our channel and stay updated with the latest news.

Next