Advertisement

ಮಣಿಪುರದ UNLF ನಿಂದ ಕದನ ವಿರಾಮ

11:37 PM Nov 29, 2023 | Pranav MS |

ಹೊಸದಿಲ್ಲಿ: ಮಣಿಪುರದ ಹಳೆಯ ಉಗ್ರ ಸಂಘಟನೆಯಾಗಿರುವ ಯುಎನ್‌ಎಲ್‌ಎಫ್ ಕೇಂದ್ರ ಹಾಗೂ ಮಣಿಪುರ ಸರಕಾರಗಳ ಜತೆಗೆ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದೆ. ಮೈತೇಯಿ ಸಮುದಾಯದವರೇ ಯುಎನ್‌ಎಲ್‌ಎಫ್ ಸಂಘಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೇ ತಿಂಗಳಿನಿಂದ ಈಶಾನ್ಯ ರಾಜ್ಯದಲ್ಲಿ ಆರಂಭವಾಗಿದ್ದ ಹಿಂಸಾಚಾರ ಪದೇಪದೆ ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವದ್ದಾಗಿದೆ.

Advertisement

ಮಹತ್ವದ ನಿರ್ಧಾರದ ಬಗ್ಗೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿಶ್‌ ಶಾ ಟ್ವೀಟ್‌ ಮಾಡಿದ್ದಾರೆ. ಇದರಿಂದಾಗಿ ಉಗ್ರ ಸಂಘಟನೆ ಮತ್ತು ಭದ್ರತಾ ಪಡೆಗಳ ನಡುವಿನ ವೈಷಮ್ಯವನ್ನು ಮುಕ್ತಾಯಗೊಳಿಸಲು ನೆರವಾಗಲಿದೆ. ಈಶಾನ್ಯ ರಾಜ್ಯದಲ್ಲಿ ಶಾಂತಿ ಸ್ಥಾಪಿಸಲು ಮೋದಿ ಸರಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇದರಿಂದಾಗಿ ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ನೆರವಾಗಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಅಮಿತ್‌ ಶಾ ಹೇಳಿಕೆಯನ್ನು ಕಾಂಗ್ರೆಸ್‌ ಟೀಕಿಸಿದ್ದು, ಪ್ರಧಾನಿ ಮೋದಿಯವರು ಈ ಮೊದಲೇ ಭೇಟಿ ನೀಡಿದ್ದರೆ ಶಾಂತಿ ಸ್ಥಾಪನೆಯಾಗುತ್ತಿತ್ತು ಎಂದು ಹೇಳಿದೆ.

ಮಣಿಪುರದಲ್ಲಿ ಗುಡ್ಡಗಾಡು ಕಣಿವೆಗಳನ್ನು ಕೇಂದ್ರವನ್ನಾಗಿ ಇರಿಸಿಕೊಂಡು ಉಗ್ರ ಕೃತ್ಯಗಳನ್ನು ನಡೆಸುತ್ತಿದ್ದ ಕುಖ್ಯಾತಿಗೆ ಯುನೈಟೆಡ್‌ ನ್ಯಾಷನಲ್‌ ಲಿಬರೇಷನ್‌ ಫ್ರಂಟ್‌ ಪಾತ್ರವಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಅದರ ವಿರುದ್ಧ ಇದ್ದ ನಿಷೇಧವನ್ನು ಐದು ವರ್ಷಗಳ ಕಾಲ ವಿಸ್ತರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next