Advertisement

ಗುರುದಾಸ್‌ಪುರದಲ್ಲಿ ಸನ್ನಿ ದೇವಲ್‌ ಭರ್ಜರಿ ಪ್ರಚಾರ

11:25 AM May 04, 2019 | Vishnu Das |

ಗುರುದಾಸ್‌ಪುರ (ಪಂಜಾಬ್‌ ): ಬಿಜೆಪಿ ಅಭ್ಯರ್ಥಿಯಾಗಿ ಅದೃಷ್ಟಪರೀಕ್ಷೆಗೆ ಇಳಿದಿರುವ ಬಾಲಿವುಡ್‌ನ‌ ಖ್ಯಾ ತ ನಟ ಸನ್ನಿ ದೇವಲ್‌ ಅವರು ಭರ್ಜರಿ ಪ್ರಚಾರನಡೆಸುತ್ತಿದ್ದಾರೆ.

Advertisement

ಬಿಜೆಪಿಯ ತಾರಾ ಪ್ರಚಾರಕರಾಗಿರುವ ಸನ್ನಿ ದೇವಲ್‌ ಹೋದಲ್ಲೆಲ್ಲಾ ಭಾರೀ ಸಂಖ್ಯೆಯ ಜನರು ಸೇರುತ್ತಿದ್ದಾರೆ. ಗುರುದಾಸ್‌ಪುರದಲ್ಲಿ ಭರ್ಜರಿ ರೋಡ್‌ ಶೋ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

ಹಾಲಿ ಕಾಂಗ್ರೆಸ್‌ ಸಂಸದ ಸುನಿಲ್‌ ಜಖರ್‌ ಮತ್ತು ಸನ್ನಿ ದೇವಲ್‌ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿರುವ ಗುರುದಾಸ್‌ಪುರ ದೇಶದ ಗಮನ ಸೆಳೆದಿದೆ.

ಕೇಂದ್ರದ ಹಲವು ಸಚಿವರರು ಈಗಾಗಲೇ ಸನ್ನಿ ಪರ ಭರ್ಜರಿ ಪ್ರಚಾರದಲ್ಲಿ ನಿರತರಾಗಿದ್ದಾರೆ.

ಬಾಲಿವುಡ್‌ ನ ದಿಗ್ಗಜ ವಿನೋದ್‌ ಖನ್ನಾ ಅವರು ಗುರುದಾಸ್‌ ಪುರ ಕ್ಷೇತ್ರವನ್ನು 1998, 1999, 2004 ಮತ್ತು 2014 ರಲ್ಲಿ ಗೆದ್ದುಕೊಂಡಿದ್ದರು. ಖನ್ನಾ ಅವರ ನಿಧನದ ನಂತರ (2017) ಎದುರಾದ ಉಪಚುನಾವಣೆಯಲ್ಲಿ ಕ್ಷೇತ್ರವನ್ನು ಕಾಂಗ್ರೆಸ್‌ ಕಸಿದುಕೊಂಡಿತ್ತು.

Advertisement

ಮೇ 19 ರಂದು ಪಂಜಾಬ್‌ನಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next