Advertisement
ಮಣಿಪಾಲ ಯೂನಿವರ್ಸಿಟಿ ವಿದ್ಯಾರ್ಥಿ ಗಳಿಗಾಗಿಯೇ ಶುರುವಾಗಿರುವ ಆನ್‌ಲೈನ್ ಧೋಬಿ ಅಂಗಡಿ ಇದು. ಈ ಡಿಜಿಟಲ್ ಧೋಬಿ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡರೆ ತಮ್ಮ ಧಿರಿಸಿನ ಬಗೆಗೆ ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇರುವುದಿಲ್ಲ.
Related Articles
Advertisement
ಈ ಸಮಸ್ಯೆ ಮಣಿಪಾಲ ಯೂನಿವರ್ಸಿಟಿ ವಿದ್ಯಾರ್ಥಿ ಅಶುತೋಷ್ ಮಿಶ್ರಾಗೂ ಕಾಡಿತ್ತು. ಅವರು ತಮ್ಮ ಸೀನಿಯರ್ ಚಂದನ್ ಸಿಂಗ್ ಜೊತೆ ಚರ್ಚಿಸಿದಾಗ ಹಾಸ್ಟೆಲ್‌ನಲ್ಲಿರೋ ಬಹುತೇಕರಿಗೆ ಈ ಸಮಸ್ಯೆ ಇರುವುದು ಗೊತ್ತಾಯಿತು. ತಕ್ಷಣ ಅವರಿಗೆ ತಾವು ಯಾಕೆ ಸ್ಟಾರ್ಟಪ್ ಆರಂಭಿಸಬಾರದು ಅನ್ನುವುದು ಹೊಳೆದಿದ್ದೇ ತಡ “ಡಿಜಿಟಲ್ ಧೋಬಿ’ ಕೆಲಸ ಆರಂಭವಾಯಿತು. ಮುಂದಿನ ಹಂತದಲ್ಲಿ ಇವರಿಬ್ಬರ ಜೊತೆ ಸ್ನಿಗಾœ ಮಿಶ್ರಾ ಸೇರಿಕೊಂಡರು. ಹೀಗೆ ಮೂವರು ಸೇರಿ ಸೃಷ್ಟಿಸಿದ ಆ್ಯಪ್ “ಡಿಜಿಟಲ್ ಧೋಬಿ’.
ಹೇಗೆ ಕಾರ್ಯ ನಿರ್ವಹಿಸುತ್ತದೆ?: ಮೊದಲು ಆ್ಯಪ್ ಮೂಲಕ್ ಆರ್ಡರ್ ಬರುತ್ತದೆ. ನಂತರ “ಡಿಜಿಟಲ್ ಧೋಬಿ’ ತಂಡ ಆರ್ಡರ್ ನೀಡಿದವರ ಮನೆಗೋ, ಹಾಸ್ಟೆಲ್‌ಗೋ ಹೋಗಿ ಬಟ್ಟೆಗಳನ್ನು ಪಿಕಪ್ ಮಾಡುತ್ತಾರೆ. ನಂತರ “ಡಿಜಿಟಲ್ ಧೋಬಿ’ ಪಾರ್ಟನರ್‌ಗಳಾಗಿರುವ ಧೋಬಿ ಅಂಗಡಿಗೆ ಬಟ್ಟೆ ಹೋಗುತ್ತದೆ. ಅಲ್ಲಿ ಡ್ರೈವಾಶ್ ಅಥವಾ ಇಸಿ ಹಾಕಿಸಿ ಮತ್ತೆ ಬಟ್ಟೆಗಳನ್ನು ವಾಪಸ್ ಕೊಡಲಾಗುತ್ತದೆ.
ಒಂದು ಬಟ್ಟೆಗೆ 14 ರೂ. ಚಾರ್ಜ್ ಮಾಡುತ್ತಾರೆ. ಸಾಕ್ಸ್ ನಿಂದ ಹಿಡಿದು ಸೂಟ್‌ಗಳವರೆಗೂ ಈ ಸೇವೆ ಲಭ್ಯವಿದೆ. ನಿಯಮಿತವಾಗಿ ಈ ಸೇವೆ ಬಳಸಿಕೊಳ್ಳುವವರಿಗೆ ರಿಯಾಯಿತಿ ನೀಡಲಾಗುತ್ತದೆ. “ನಾವು ಮೊದಲು ಇಲ್ಲಿನ ಲೋಕಲ್ ಧೋಬಿ ಅಂಗಡಿಗಳ ಜೊತೆ ಮಾತಾಡಿಕೊಂಡ್ವಿ. ಅವರು ನಮಗೆ ಕೆಲಸ ಮಾಡಿಕೊಡುತ್ತಾರೆ.
ಆ್ಯಪ್‌ನಲ್ಲಿ ಆರ್ಡರ್ ಬಂದ ತಕ್ಷಣ ಕೆಲಸ ಶುರುವಾಗುತ್ತದೆ. ಸದ್ಯಕ್ಕೆ ಈ ಸೇವೆ ಮಣಿಪಾಲದ ವಿದಾರ್ಥಿಗಳಿಗೆ ಮಾತ್ರ ಲಭ್ಯವಿರುತ್ತದೆ. ಮುಂದಿನ ಹಂತದಲ್ಲಿ ಪುಣೆಯಲ್ಲಿ ಈ ಸೇವೆ ಒದಗಿಸುವ ಯೋಚನೆ ಇದೆ. ಅನಂತರ ಬೇರೆ ನಗರಗಳಲ್ಲಿ ಈ ಸೇವೆ ಒದಗಿಸಬೇಕು ಅನ್ನುವುದು ನಮ್ಮ ಕನಸು’ ಎನ್ನುತ್ತಾರೆ ಡಿಜಿಟಲ್ ಧೋಬಿ ಸ್ಥಾಪಕರಲ್ಲೊಬ್ಬರಾದ ಚಂದನ್ ಸಿಂಗ್.
ಡಿಜಿಟಲ್ ಧೋಬಿ ಲಿಂಕ್: //digitaldhobi.com/