ಪುಣೆ ಮೂಲದ ಖ್ಯಾತ ಲಸಿಕೆ ತಯಾರಿಕಾ ಸಂಸ್ಥೆ ಸೇರುಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಜತೆಗೂಡಿ ಭಾರತದಲ್ಲಿ ಕೋವಿಡ್ ವೈರಸ್ ನಿಯಂತ್ರಣದ ಲಸಿಕೆ ತಯಾರಿಕೆಗೆ ಮುಂದಾಗಿದೆ. ಲಸಿಕೆಯ ಪ್ರಾಯೋಗಿಕ ವೈದ್ಯಕೀಯ ಪರೀಕ್ಷೆ ಇನ್ನಷ್ಟೇ ನಡೆಯಬೇಕಿದ್ದು ಪ್ರಯೋಗ ಯಶಸ್ವಿಯಾದರಷ್ಟೇ ಅಕ್ಟೋಬರ್‌ನಲ್ಲಿ ಭಾರತದ ಮಾರುಕಟ್ಟೆಗೆ ಲಸಿಕೆ ಪ್ರವೇಶಿಸಲಿದೆ ಎಂದು ಸೇರುಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ವಿಶ್ವಾಸ ವ್ಯಕ್ತಪಡಿಸಿದೆ. “ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಡಾ.ಹಿಲ್ ಜತೆಗೆ ನಿರಂತರ ಸಂಪರ್ಕದಲ್ಲಿದ್ದೇವೆ. 3 -4 ವಾರಗಳಲ್ಲಿ ಲಸಿಕೆ ಉತ್ಪಾದನೆ ಮಾಡಬಹುದಾಗಿದೆ, ಮೊದಲ 6 ತಿಂಗಳಲ್ಲಿ 5 ಮಿಲಿಯನ್ ಡೋಸ್ ನೀಡಬಹುದು. ಬಳಿಕ ಮತ್ತಷ್ಟು ಉತ್ಪಾದನೆಯಲ್ಲಿ ಹೆಚ್ಚಿಸಬಹುದು. ಎಲ್ಲವು ಪ್ರಾಯೋಗಿಕ ವೈದ್ಯಕೀಯ ಪರೀಕ್ಷೆಯನ್ನು ಅವಲಂಭಿಸಿದೆ’ ಎಂದು ಎಸ್‌ಐಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಡರ್ ಪೂನಾವಾಲಾ ತಿಳಿಸಿದ್ದಾರೆ.