Advertisement

ಹೆಚ್ಚಿದ ಒತ್ತಡ; ಸರಕಾರದ ಸಕಾರಾತ್ಮಕ ಸ್ಪಂದನೆ

02:05 AM Sep 29, 2021 | Team Udayavani |

ಮಂಗಳೂರು: ಮಂಗಳೂರಿನ ಮೀನುಗಾರಿಕೆ ಕಾಲೇಜನ್ನು ಕೇಂದ್ರೀಕರಿಸಿ ಪ್ರತ್ಯೇಕ ಮೀನುಗಾರಿಕೆ ವಿಶ್ವವಿದ್ಯಾನಿಲಯ ಸ್ಥಾಪನೆ ಅತೀ ಶೀಘ್ರದಲ್ಲಿಯೇ ಆಗಬೇಕೆಂಬ ಒತ್ತಡ ಹೆಚ್ಚಾಗತೊಡಗಿದೆ.

Advertisement

ವಿಧಾನಸಭೆ ಅಧಿವೇಶನ ಸಂದರ್ಭ ಮೀನುಗಾರಿಕೆ ಸಚಿವ ಎಸ್‌. ಅಂಗಾರ ಮತ್ತು ಶಾಸಕ ಡಿ. ವೇದವ್ಯಾಸ ಕಾಮತ್‌ ಅವರು ಸೆ. 16ರಂದು ಈ ವಿಚಾರ ಪ್ರಸ್ತಾ ವಿಸಿ, ಮಂಗಳೂರಿನಲ್ಲಿ ಪ್ರತ್ಯೇಕ ಮೀನುಗಾರಿಕೆ ವಿ.ವಿ.ಯ ಪ್ರಸ್ತುತತೆಯನ್ನು ಮನವರಿಕೆ ಮಾಡಿದ್ದಾರೆ.

ಎಕ್ಕೂರಿನಲ್ಲಿರುವ ಮೀನುಗಾರಿಕೆ ಕಾಲೇಜು 1969ರಲ್ಲಿ ಸ್ಥಾಪನೆಯಾಗಿದ್ದು, ಆಗ್ನೇಯ ಏಷ್ಯಾದ ಪ್ರಥಮ ಮೀನುಗಾರಿಕೆ ಕಾಲೇಜು ಎಂಬ ಹೆಗ್ಗಳಿಕೆ ಪಡೆದಿದೆ. ಪ್ರಾರಂಭ ದಲ್ಲಿ ಬೆಂಗಳೂರಿನ ಕೃಷಿ ವಿಜ್ಞಾನ ವಿ.ವಿ. ವ್ಯಾಪ್ತಿಯಲ್ಲಿದ್ದ ಇದು 2005 ರಿಂದ ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿ.ವಿ.ಗೆ ಸಂಯೋ ಜನೆ ಗೊಂಡಿದೆ. ಈ ವಿ.ವಿ. ಕೃಷಿ ಮತ್ತು ಪಶು ವೈದ್ಯಕೀಯ ವಿಜ್ಞಾನಗಳಿಗೆ ಮಾತ್ರ ಆದ್ಯತೆ ನೀಡುತ್ತಿರುವ ಕಾರಣ ಮೀನು ಗಾರಿಕೆಗೆ ಆದ್ಯತೆ ಕಡಿಮೆಯಾಗಿದೆ ಎಂಬ ಆರೋಪ ಗಳಿದ್ದವು. ಕರಾವಳಿಯಲ್ಲಿ ಮೀನು ಗಾರಿಕೆ ಪ್ರಮುಖ ವೃತ್ತಿ, ಉದ್ಯಮ ಆಗಿರು ವುದರಿಂದ ಇಲ್ಲಿರುವ ಮೀನುಗಾರಿಕೆ ಕಾಲೇಜನ್ನೇ ವಿ.ವಿ. ಸ್ಥಾನಮಾನ ನೀಡಿ ಮೇಲ್ದರ್ಜೆಗೇರಿಸಬೇಕೆಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಇದಕ್ಕೆ ನಕಾರಾತ್ಮಕ ಪ್ರತಿಕ್ರಿಯೆ ಬಂದಾಗ ಸಹಿ ಅಭಿಯಾನ ನಡೆಸಿ ಒತ್ತಾಯಿಸಿತ್ತು. ಇದಕ್ಕೆ ಮಣಿದ ಪಶು ವೈದ್ಯಕೀಯ ವಿ.ವಿ.ಯು ಸಾಂಪ್ರದಾಯಿಕ ವಿ.ವಿ. ಬದಲು ಮೀನುಗಾರಿಕೆ ಕಾಲೇಜನ್ನು ಸ್ವಾಯತ್ತ ಮೀನುಗಾರಿಕಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಯಾಗಿ ಅಭಿವೃದ್ಧಿಪಡಿಸುವ ಚಿಂತನೆ ನಡೆಸಿ ಈ ಬಗ್ಗೆ ಪ್ರಸ್ತಾವ ಮುಂದಿಟ್ಟಿತ್ತು. ಇದಕ್ಕೆ ಶಾಸಕರು ವಿರೋಧ ವ್ಯಕ್ತ ಪಡಿ ಸಿದ್ದು, ಸಾಂಪ್ರದಾಯಿಕ ವಿ.ವಿ. ಯನ್ನೇ ಸ್ಥಾಪಿಸಬೇಕೆಂದು ಆಗ್ರಹಿಸಿದ್ದಾರೆ.

ಜಿಲ್ಲಾಡಳಿತದಿಂದ ಜಾಗದ ಭರವಸೆ
ವಿ.ವಿ. ಸ್ಥಾನಮಾನಕ್ಕೆ ಕೆಲವು ಮಾನದಂಡ ಗಳಿದ್ದು, ಈ ಹಿನ್ನೆಲೆಯಲ್ಲಿ ಮೀನುಗಾರಿಕೆ ಕಾಲೇಜಿನಲ್ಲಿ ಈಗಿರುವ ಮೂಲಸೌಲಭ್ಯಗಳ ಪಟ್ಟಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ವಿ.ವಿ. ಸ್ಥಾಪನೆಗೆ ಬೇಕಾಗಿರುವ ಜಾಗ ಮತ್ತಿತರ ವ್ಯವಸ್ಥೆ ಮಾಡುವುದಾಗಿ ದ.ಕ. ಜಿಲ್ಲಾಡಳಿತ ತಿಳಿಸಿದೆ ಎಂದು ಶಾಸಕ ವೇದವ್ಯಾಸ ಕಾಮತ್‌ ಹೇಳಿದ್ದಾರೆ.

Advertisement

ಇದನ್ನೂ ಓದಿ:ಪೆಟ್ರೋಲ್‌ ಬಂಕ್‌ ಮ್ಯಾನೇಜರ್‌ಗೆ ಹಲ್ಲೆಗೈದು 4.20 ಲ.ರೂ. ಸುಲಿಗೆ

ಪ್ರತ್ಯೇಕ ವಿ.ವಿ. ಏಕೆ ಬೇಕು?
01. ರಾಜ್ಯವು 580 ಕಿ.ಮೀ. ಸಮುದ್ರ ತೀರವನ್ನು ಹೊಂದಿದ್ದು, ಈ ಕರಾವಳಿ ಪ್ರದೇಶದಲ್ಲಿ ಮೀನುಗಾರಿಕೆ ಅತ್ಯಧಿಕ ಪ್ರಮಾಣದಲ್ಲಿದೆ.
02. ಪ್ರಸ್ತುತ ಮಂಗಳೂರಿನ ಮೀನುಗಾರಿಕೆ ಕಾಲೇಜು ಸಂಯೋಜನೆ ಹೊಂದಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿ.ವಿ. ದೂರದ ಬೀದರ್‌ನಲ್ಲಿದ್ದು, ಅಲ್ಲಿ ಸಮುದ್ರವಿಲ್ಲ.
03. ದೇಶದಲ್ಲಿಯೇ ಮೊದಲ ಮೀನುಗಾರಿಕೆ ಕಾಲೇಜು ಮಂಗಳೂರಿ ನಲ್ಲಿ 1969ರಲ್ಲಿ ಆರಂಭವಾಗಿದ್ದು, ಆ ಬಳಿಕ ಇತರ ರಾಜ್ಯ ಗಳಲ್ಲಿ ಆರಂಭವಾದವು. ಆದರೆ ಈಗ ಕರ್ನಾಟಕ ಹೊರತುಪಡಿಸಿ ಮೀನುಗಾರಿಕೆ ಕಾಲೇಜುಗಳಿರುವ ಕೇರಳ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲಿ ಪ್ರತ್ಯೇಕ ಮೀನುಗಾರಿಕೆ ವಿ.ವಿ.ಗಳು ಸ್ಥಾಪನೆಯಾಗಿವೆ.
04.ಮೀನುಗಾರಿಕೆ ವಿ.ವಿ. ಸ್ಥಾಪನೆಯಾದರೆ ಹೊಸ ಮೀನುಗಾರಿಕೆ ಕಾಲೇಜು, ಡಿಪ್ಲೊಮಾ ಕೋರ್ಸು, ಸಂಶೋಧನೆ ಮತ್ತು ತರಬೇತಿ ಕೇಂದ್ರಗಳನ್ನು ಆರಂಭಿಸಲು ಅನುಕೂಲ. ಈಗಿರುವ ಕೇವಲ ಒಂದು ಕಾಲೇಜಿನಿಂದ ಅಥವಾ ಉದ್ದೇಶಿತ ಸಂಸ್ಥೆಯಿಂದ ಇವೆಲ್ಲ ಸಾಧ್ಯವಾಗದು.
05.ಈಗಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿ.ವಿ. ಪಶು ವೈದ್ಯಕೀಯಕ್ಕಷ್ಟೇ ಹೆಚ್ಚು ಪ್ರಾಮುಖ್ಯ ನೀಡುತ್ತಿದ್ದು, ಮೀನುಗಾರಿಕೆಗೆ ಪ್ರಾಶಸ್ತ್ಯ ಕಡಿಮೆಯಿದೆ.
06.ಮಂಗಳೂರಿನಲ್ಲಿ ಮೀನುಗಾರಿಕೆ ವಿ.ವಿ. ಸ್ಥಾಪನೆಯಾದರೆ ಡಿಪ್ಲೊಮಾ ಕೋರ್ಸು ಮತ್ತು ತರಬೇತಿ ಶಿಬಿರಗಳ ಮೂಲಕ ಕರಾವಳಿ ಭಾಗದ ಯುವಕರಿಗೆ ತಾಂತ್ರಿಕ ಮತ್ತು ವೈಜ್ಞಾನಿಕ ಮಾಹಿತಿ ನೀಡಿ ಸ್ವ ಉದ್ಯೋಗಕ್ಕೆ ಉತ್ತೇಜನ ನೀಡ ಬಹುದು. ಈ ಮೂಲಕ ಮೀನುಗಾರಿಕೆಯನ್ನು ಬೃಹತ್‌ ಉದ್ಯಮವಾಗಿ ಬೆಳೆಸಬಹುದು.
07.ರಾಜ್ಯ ಮತ್ತು ಕೇಂದ್ರ ಸರಕಾರಗಳು ಮೀನುಗಾರರಿಗಾಗಿ ಮತ್ಸ್ಯಾಶ್ರಯ ಮತ್ತಿತರ ಹಲವು ಯೋಜನೆಗಳನ್ನು ಹಮ್ಮಿ ಕೊಂಡಿದ್ದು, ಮೀನು ಗಾರಿಕೆ ವಿ.ವಿ. ಇದ್ದರೆ ಇವುಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯ.
08.ಒಂದು ವಿ.ವಿ. ಮಾಡುವ ಕೆಲಸವನ್ನು ಕೇವಲ ಒಂದು ಕಾಲೇಜು ಅಥವಾ ಸಂಸ್ಥೆ ಮಾಡಲು ಸಾಧ್ಯವಿಲ್ಲ. ವಿ.ವಿ.ಗೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಅಧಿಕಾರವಿರುತ್ತದೆ.

ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿ.ವಿ.ಯಿಂದ ಮೀನುಗಾರಿಕೆಯನ್ನು ಪ್ರತ್ಯೇಕಿಸಿ ಮಂಗಳೂರಿನ ಕಾಲೇಜನ್ನು ಕೇಂದ್ರೀಕರಿಸಿ ಸಾಂಪ್ರದಾಯಿಕ ವಿ.ವಿ. ಸ್ಥಾಪಿಸ ಬೇಕೆಂಬುದು ನಮ್ಮ ಬೇಡಿಕೆ; ಅದರ ಹೊರತಾಗಿ ಮೀನು ಗಾರಿಕೆ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಯನ್ನಾಗಿ ಮಾಡುವುದರಿಂದ ನಿರೀಕ್ಷಿತ ಪ್ರಯೋಜನ ಆಗಲಾರದು.
– ಸೆಂಥಿಲ್‌ ವೇಲ್‌, ಡೀನ್‌, ಮೀನುಗಾರಿಕೆ ಕಾಲೇಜು, ಮಂಗಳೂರು

ಮಂಗಳೂರಿನಲ್ಲಿ ಮೀನು ಗಾರಿಕೆ ವಿ.ವಿ. ಸ್ಥಾಪನೆ ಯಾದರೆ ಕರಾವಳಿಯಲ್ಲಿ ಮೀನು ಗಾರಿಕೆ ವೃತ್ತಿ ಮತ್ತು ಉದ್ಯಮದ ಬೆಳವಣಿಗೆಗೆ ಗಣನೀಯ ವಾಗಿಉತ್ತೇಜನ ದೊರೆಯಲಿದೆ. ವಿ.ವಿ. ಸ್ಥಾಪನೆ ಅತೀ ಶೀಘ್ರ ಆಗಬೇಕು.
– ನಿತಿನ್‌ ಕುಮಾರ್‌, ಅಧ್ಯಕ್ಷರು, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ

ಮೀನುಗಾರಿಕೆ ಕಾಲೇಜಿಗೆ ವಿ.ವಿ.
ಸ್ಥಾನಮಾನ ನೀಡುವ ಬಗ್ಗೆ ಈಗಾಗಲೇ ಪ್ರಸಾವನೆ ಸಲ್ಲಿಸಿದ್ದು, ವಿಧಾನಸಭೆಯಲ್ಲೂ ಚರ್ಚೆಯಾಗಿದೆ. ಸಚಿವ ಸಂಪುಟದ ಮುಂದೆ ಮಂಡಿಸಿ ಅನುಮೋದನೆ ಪಡೆಯಲು ಪ್ರಯತ್ನಿಸುವೆ.
– ಎಸ್‌. ಅಂಗಾರ, ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ

- ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next