Advertisement
ಲಾಕ್‌ಡೌನ್ ಸಂಬಂಧಿಸಿದಂತೆ ರಾಜ್ಯ ದಲ್ಲಿ ಕೆಲವು ಸಡಿಲಿಕೆ ಮಾಡಲಾಗಿದೆ. ಅಲ್ಲದೆ ಹಸಿರು ವಲಯದ ಜಿಲ್ಲೆಯಲ್ಲಿ ಸಾರ್ವಜನಿಕ ಓಡಾಟವೂ ವ್ಯಾಪಕ ವಾಗಿದೆ. ಈ ಹಿನ್ನೆಲೆಯಲ್ಲಿ ವಿ.ವಿ.ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸ್ನಾತಕೋತ್ತರ ತರಗತಿ ಆರಂಭಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.
Related Articles
ತರಗತಿ, ಪರೀಕ್ಷೆ ಮತ್ತು ಮೌಲ್ಯ ಮಾಪನಕ್ಕೆ ಸಂಬಂಧಿಸಿ ಸಮಿತಿ ರಚಿಸಲಾಗಿದೆ. ಸೋಮವಾರದೊಳಗೆ ವರದಿ ಒಪ್ಪಿಸಲು ನಿರ್ದೇಶನ ನೀಡಲಾಗಿದೆ. ಈ ಸಂಬಂಧ ರಾಜ್ಯದ ಹಲವು ವಿ.ವಿ .ಗಳ ಉಪಕುಲ ಪತಿ, ಕುಲಸಚಿವರಿಗೆ ಉನ್ನತ ಶಿಕ್ಷಣ ಪರಿಷತ್‌ನಿಂದ ಸೂಚನೆ ಹೋಗಿದೆ ಎಂದು ಮೂಲ ಗಳು ಖಚಿತ ಪಡಿಸಿವೆ.
Advertisement
ತರಗತಿ ನಡೆಸುವುದು ಕಷ್ಟ?ತರಗತಿ ಆರಂಭಿಸಿದರೆ ಹಾಸ್ಟೆಲ್ ತೆರೆಯಬೇಕಾಗುತ್ತದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಸಂಚಾರ ವ್ಯವಸ್ಥೆ ಸಮಸ್ಯೆಯಾಗಲಿದೆ. ಹೀಗಾಗಿ ಕನಿಷ್ಠ ಮೇ 3ರ ವರೆಗೆ ತರಗತಿ ಆರಂಭಿಸುವುದು ಕಷ್ಟ ಎಂಬ ವಿಷಯವನ್ನು ಸರಕಾರದ ಗಮನಕ್ಕೆ ತರಲಾಗಿದೆ ಎಂದು ಉಪಕುಲ ಪತಿಯೊಬ್ಬರು ಮಾಹಿತಿ ನೀಡಿದ್ದಾರೆ. ಜೂನ್ 2ನೇ
ವಾರದಲ್ಲಿ ಪರೀಕ್ಷೆ?
ಲಾಕ್‌ಡೌನ್ ಅವಧಿಯಲ್ಲಿ ಬಹುತೇಕ ಎಂಜಿನಿಯರಿಂಗ್ ಕಾಲೇಜುಗಳು ಆನ್‌ಲೈನ್‌ನಲ್ಲಿ ತರಗತಿಗಳನ್ನು ನಡೆಸುತ್ತಿವೆ. ಹೀಗಾಗಿ ಅಂತಿಮ ಸೆಮಿಸ್ಟರ್ ಪರೀಕ್ಷೆಗಳು ಜೂ.2ನೇ ವಾರ ಮತ್ತು 2, 4 ಮತ್ತು 6ನೇ ಸೆಮಿಸ್ಟರ್ ಪರೀಕ್ಷೆಗಳು ಜುಲೈ ಕೊನೆಯ ವಾರ ಅಥವಾ ಆಗಸ್ಟ್ ಮೊದಲ ವಾರವಷ್ಟೇ ನಡೆಯಬಹುದು ಎನ್ನಲಾಗುತ್ತಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ನಡೆಸುವ ಪರೀಕ್ಷೆ ಆಧಾರದಲ್ಲಿ ಇಂಟರ್ನಲ್ ಅಸೆಸೆ¾ಂಟ್ ಅಂಕ ನೀಡುವ ಬಗ್ಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ ಗಂಭೀರ ಚಿಂತನೆ ನಡೆಸಿದೆ. ಆನ್‌ಲೈನ್ ತರಗತಿ,ಪರೀಕ್ಷೆ ನಡೆಸಬಹುದು.ಬೆಂಗಳೂರು ವಿ.ವಿ. ಪರಿಣಾಮಕಾರಿಯಾಗಿ ಆನ್‌ಲೈನ್ ತರಗತಿ ನಡೆಸುತ್ತಿದೆ.
-ಪ್ರೊ| ಕೆ.ಆರ್. ವೇಣುಗೋಪಾಲ್,
ಬೆಂ. ವಿ.ವಿ. ಉಪಕುಲಪತಿ -ರಾಜು ಖಾರ್ವಿ ಕೊಡೇರಿ