Advertisement

“ಬಡ ಮಕ್ಕಳಿಗೆ ಮಣಿಪಾಲ ವಿವಿ ವಾರ್ಷಿಕ 15 ಕೋ.ರೂ.ವ್ಯಯ’

03:32 PM Mar 09, 2017 | |

ಉಡುಪಿ: ಬಡಮಕ್ಕಳಿಗೆ ಉಚಿತ ಶಿಕ್ಷಣ, ಪ್ರತಿಭಾನ್ವಿತರ ವಿದ್ಯಾರ್ಥಿವೇತನಕ್ಕೆ ವಾರ್ಷಿಕ 15 ಕೋ.ರೂ. ಮೊತ್ತವನ್ನು ಮಣಿಪಾಲ ವಿವಿ ವ್ಯಯ ಮಾಡುತ್ತಿದೆ. ಈ ಮೂಲಕ ಅಶಕ್ತರೂ ಕೂಡ ಎಂಜಿನಿಯರಿಂಗ್‌, ವೈದ್ಯಕೀಯ ಇನ್ನಿತರ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿದೆ ಎಂದು ಸಹಕುಲಾಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಅವರು ಹೇಳಿದರು.

Advertisement

ಅಂಬಲಪಾಡಿಯ ಶ್ರೀ ಜನಾರ್ದನ ಶ್ರೀ ಮಹಾಕಾಳಿ ದೇವಸ್ಥಾನ, ವಿದ್ಯಾಪೋಷಕ್‌ ಯಕ್ಷಗಾನ ಕಲಾರಂಗದ ವತಿಯಿಂದ ಪ್ರಥಮ ಪಿಯುಸಿ ಮುಗಿಸಿದ ವಿದ್ಯಾಪೋಷಕ್‌ ವಿದ್ಯಾರ್ಥಿಗಳಿಗೆ ಅಂಬಲಪಾಡಿಯಲ್ಲಿ ನಡೆದ ಸನಿವಾಸ ಶಿಬಿರದ ಸಮಾರೋಪ ಸಮಾರಂಭದಲ್ಲಿ ಬುಧವಾರ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.

“ಎಲ್ಲ ಕ್ಷೇತ್ರಗಳಲ್ಲೂ ನೈತಿಕತೆ ಕುಸಿತ’
ಪ್ರೈಮ್‌ ಸಂಸ್ಥೆಯ ಸ್ಥಾಪಕರಾದ ರತ್ನಕುಮಾರ್‌ ಅವರು ಮಾತನಾಡಿ, ಯಾವುದೇ ಒಂದು ವಿಷಯ ಅರ್ಥೈಸಿಕೊಳ್ಳುವುದರಲ್ಲಿ ನಕಾರಾತ್ಮಕವನ್ನು ವಿಷಯಗಳ ಚಿಂತನೆಯನ್ನು ಬದಿಗೊತ್ತಿ ಸಕಾರಾತ್ಮಕವಾಗಿ ಚಿಂತನೆ ಮಾಡಬೇಕು. ರಾಜಕೀಯದಿಂದ ಹಿಡಿದು ಎಲ್ಲ ಕ್ಷೇತ್ರಗಳಲ್ಲಿಯೂ ಇಂದು ನೈತಿಕತೆ ಎನ್ನುವುದು ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಇಂತಹ ಸಂದರ್ಭ ಉತ್ತಮ ಸಮಾಜ ನಿರ್ಮಾಣ ಯುವಜನಾಂಗದಿಂದ ಮಾತ್ರ ಸಾಧ್ಯ ಎಂದರು.

ಅಂಬಲಪಾಡಿಯ ಶ್ರೀ ಜನಾರ್ದನ ಶ್ರೀ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್‌ ಅಧ್ಯಕ್ಷತೆ ವಹಿಸಿದ್ದರು. ಸಿಂಡಿಕೇಟ್‌ ಬ್ಯಾಂಕಿನ ನಿವೃತ್ತ ಅಧಿಕಾರಿ ಕೆ. ದೇವಾನಂದ ಉಪಾಧ್ಯಾಯ, ಸಮಾಜ ಸೇವಕ ಎಸ್‌.ಟಿ. ಕರ್ಕೇರ, ಕಾಪು ವಿನೋದಾ ಚಂದ್ರಶೇಖರ ಶೆಟ್ಟಿ ಟ್ರಸ್ಟ್‌ನ ಟ್ರಸ್ಟಿ ಸೀಮಾ ಎಚ್‌. ರೈ, ಕಲಾರಂಗದ ಉಪಾಧ್ಯಕ್ಷ ಎಂ. ಗಂಗಾಧರ ರಾವ್‌, ಶಿಬಿರದ ನಿರ್ದೇಶಕ ಪ್ರವೀಣ್‌ ಗುಡಿ ಉಪಸ್ಥಿತರಿದ್ದರು.

ಕಲಾರಂಗದ ಅಧ್ಯಕ್ಷ ಗಣೇಶ್‌ ರಾವ್‌ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್‌ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next