Advertisement

ವಿಶ್ವವಿದ್ಯಾನಿಲಯಗಳು ಜ್ಞಾನದ ಕೇಂದ್ರಗಳಾಗಲಿ’

12:27 AM Jul 04, 2019 | Team Udayavani |

ಸುರತ್ಕಲ್: ಶಿಕ್ಷಣ ನೀಡುವ ವಿಶ್ವವಿದ್ಯಾಲಯಗಳು ಜ್ಞಾನವೃದ್ಧಿಸುವ ಕೇಂದ್ರಗಳಾಗಬೇಕು. ವಿದ್ಯಾರ್ಥಿಗಳನ್ನು ಹಣ ಮಾಡುವ ವ್ಯಕ್ತಿಗಳನ್ನಾಗಿ ರೂಪಿಸದೆ ಪ್ರತಿಯೊಬ್ಬರಲ್ಲಿಯೂ ಜ್ಞಾನಭರಿತ ಕೌಶಲದ ಜತೆ ಸ್ವಂತ ಉದ್ದಿಮೆ ಸ್ಥಾಪಿಸುವ ನಾಯಕತ್ವ ಗುಣ ಬೆಳೆಸಬೇಕು. ಆ ಮೂಲಕ ನೂರಾರು ಮಂದಿಗೆ ಆಸರೆಯಾಗುವ ಸಾಮಾಜಿಕ ಜವಾಬ್ದಾರಿಯುತ ಪ್ರಜೆಗಳನ್ನು ದೇಶಕ್ಕೆ ನೀಡಬೇಕು ಎಂದು ನಾಗಾಲ್ಯಾಂಡ್‌- ಮಣಿಪುರ ರಾಜ್ಯಪಾಲ ಪಿ.ಬಿ. ಆಚಾರ್ಯ ಹೇಳಿದರು.

Advertisement

ಮುಕ್ಕದಲ್ಲಿರುವ ಶ್ರೀನಿವಾಸ ಕಾಲೇಜಿನಲ್ಲಿ ‘ಭಾರತದಲ್ಲಿ ಉನ್ನತ ಶಿಕ್ಷಣದಲ್ಲಿರುವ ಸವಾಲುಗಳುಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯ ಪಾತ್ರ’ ಕುರಿತು ಬುಧವಾರ ಅವರು ಉಪನ್ಯಾಸ ನೀಡಿದರು.

ಶಿಕ್ಷಣಕ್ಕೆ ನಿರ್ದಿಷ್ಟ ಗುರಿ ಹಾಗೂ ಸಾಧನೆಯ ಯೋಜನೆಯಿರಬೇಕು. ದೇಶಕ್ಕೆ ಗೌರವ ಕೊಡುವ ಶಿಕ್ಷಣಕೆ ಹಳ್ಳಿವರೆಗಿನ ಜೀವನ ಮಟ್ಟವನ್ನು ಸುಧಾರಿ ಸುವ ಶಕ್ತಿಯನ್ನು ನೀಡಬೇಕು. ಇಂದು ವಿದ್ಯಾಲಯಗಳಿಂದ ಡಿಗ್ರಿ ಪಡೆದವರು ಹೊರಬರುತ್ತಾರೆ. ಆದರೆ ಸಾಮಾಜಿಕ ಜವಾಬ್ದಾರಿಯ ಕೊಡುಗೆಯ ಬಗ್ಗೆ ತಿಳಿದಿರುವುದಿಲ್ಲ ಎಂದರು.

ದೇಶದಲ್ಲಿರುವ ಹಣವಂತರು ಇನ್ನಷ್ಟು ಬರಲಿ ಎಂದು ಕಾಯುತ್ತಿದ್ದರೆ ಬಿಲ್ಗೇಟ್ಸ್‌ನಂತಹ ಮೇರು ವ್ಯಕ್ತಿಗಳು ತಮ್ಮ ಸಂಪತ್ತನ್ನು ಜ್ಞಾನವೃದ್ಧಿಗೆ ದಾನ ಮಾಡುತ್ತಿದ್ದಾರೆ. ಇಂತಹ ಉತ್ತಮ ಸಂಖ್ಯೆ ದೇಶದಲ್ಲಿಯೂ ವೃದ್ಧಿಯಾಗಲಿ ಎಂದರು.

ಭಾರತದ ಚಿಕ್ಕ ಗಡಿಭಾಗದ ರಾಜ್ಯಗಳು ಮುಂದುವರಿಯುವ ಶಕ್ತಿಯನ್ನು ಪಡೆದುಕೊಂಡಿವೆ. ನಮ್ಮ ಜಿಲ್ಲೆಯ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಲಿನ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇದು ಶಿಕ್ಷಣದಿಂದ ಆಗುತ್ತಿರುವ ಬದಲಾವಣೆ. ಆಂಗ್ಲ ಭಾಷೆಯೊಂದಿಗೆ ನಮ್ಮ ಮಾತೃಭಾಷೆಯನ್ನೂ ಪ್ರೀತಿಸಿ ಅದರ ಗೌರವವನ್ನೂ ಹೆಚ್ಚಿಸಬೇಕು ಎಂದರು.

Advertisement

ಸುಮಾರು 13 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಅನುಕೂಲ ಕಲ್ಪಿಸಿರುವ ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಯನ್ನು ಶ್ಲಾಘಿಸಿದರು.

ವಿಶ್ವ ವಿದ್ಯಾಲಯದ ಚಾನ್ಸಲರ್‌ ಸಿಎ ಎ. ರಾಘವೇಂದ್ರ ರಾವ್‌ ಅಧ್ಯಕ್ಷತೆ ವಹಿಸಿದ್ದರು. ಚಾನ್ಸಲರ್‌ ಡಾ| ಎ. ಶ್ರೀನಿವಾಸ ರಾವ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಿಜಿಸ್ಟ್ರಾರ್‌ ಡಾ| ಅನಿಲ್ ಕುಮಾರ್‌, ಡಾ| ಅಜಯ್‌ ಕೆ.ಜಿ., ಡಾ| ಶ್ರೀನಿವಾಸ್‌ ಮಯ್ಯ, ಸಂಸ್ಥೆಯ ಉನ್ನತ ಅಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.

ವೈಸ್‌ ಚಾನ್ಸೆಲರ್‌ ಡಾ| ಪಿ.ಎಸ್‌. ಐತಾಳ್‌ ಸ್ವಾಗತಿಸಿದರು. ಶಾಹಿಸ್ತಾಬಾನು ನಿರೂಪಿಸಿದರು.

ಮಾತೃಭಾಷೆಯ ಮೇಲೆ ಪ್ರೀತಿ ಅಗತ್ಯ
ಭಾರತದ ಚಿಕ್ಕ ಗಡಿಭಾಗದ ರಾಜ್ಯಗಳು ಮುಂದುವರಿಯುವ ಶಕ್ತಿಯನ್ನು ಪಡೆದುಕೊಂಡಿವೆ. ನಮ್ಮ ಜಿಲ್ಲೆಯ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಲಿನ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇದು ಶಿಕ್ಷಣದಿಂದ ಆಗುತ್ತಿರುವ ಬದಲಾವಣೆ. ಆಂಗ್ಲ ಭಾಷೆಯೊಂದಿಗೆ ನಮ್ಮ ಮಾತೃಭಾಷೆಯನ್ನೂ ಪ್ರೀತಿಸಿ ಅದರ ಗೌರವವನ್ನೂ ಹೆಚ್ಚಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next