Advertisement

“ಒಗ್ಗಟ್ಟು ಮುರಿದರೆ ಒಕ್ಕಲೆಬ್ಬಿಸುತ್ತಾರೆ’

11:29 AM Oct 29, 2021 | Team Udayavani |

ಸೈದಾಪುರ: ರೈತರ ಬೇಡಿಕೆಗಳಿಗೆ ಸ್ಪಂದಿಸದ ಸರಕಾರದ ವಿರುದ್ಧ ಒಕ್ಕೊರಲಿನ ಕೂಗು ಗಟ್ಟಿಯಾಗಿರಬೇಕು. ಒಗ್ಗಟ್ಟು ಮುರಿದರೆ ಒಕ್ಕಲೆಬ್ಬಿಸುತ್ತಾರೆ ಎಂದು ಕಿಲ್ಲೆ ಬ್ರಹನ್ಮಮಠದ ಶಾಂತಮಲ್ಲ ಶಿವಾಚಾರ್ಯ ಶ್ರೀಗಳು ಎಚ್ಚರಿಸಿದರು.

Advertisement

ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಕಡೇಚೂರು, ಶಟ್ಟಿಹಳ್ಳಿ, ರಾಚನಹಳ್ಳಿ, ದದ್ದಲ್‌, ಬಾಲಚೇಡ, ಸೌರಾಷ್ಟ್ರಹಳ್ಳಿ ಗ್ರಾಮಗಳ ರೈತರ ಅನಿರ್ದಿಷ್ಟಾವಧಿ ಪ್ರತಿಭಟನೆ ಬೆಂಬಲಿಸಿ ಮಾತನಾಡಿದ ಶ್ರೀಗಳು, ಯಾವುದೇ ಕಾರಣಕ್ಕೂ ರೈತರು ಎದೆಗುಂದುವ ಅಗತ್ಯವಿಲ್ಲ. ನಾವು ನಿಮ್ಮೊಂದಿಗಿದ್ದೇವೆ. ಪ್ರತಿಭಟನೆಯ ಧ್ವನಿ ಜೋರಾಗುತ್ತಿದ್ದಂತೆ ಸರಕಾರವೇ ತಮ್ಮ ಮನೆ ಬಾಗಿಲಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಂಚಮ ಸಿದ್ಧಲಿಂಗ ಸ್ವಾಮಿಗಳು, ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು, ಗುರುಮೂರ್ತಿ ಶಿವಾಚಾರ್ಯರು, ಚೇಗುಂಟಾದ ಕ್ಷೀರಲಿಂಗ ಸ್ವಾಮಿಗಳನ್ನು ಒಳಗೊಂಡು ಪಂಚ ಶ್ರೀಗಳು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.

ಶಾಸಕ ನಾಗನಗೌಡ ಕಂದಕೂರ, ಜಿಪಂ ಮಾಜಿ ಅಧ್ಯಕ್ಷ ಬಸರೆಡ್ಡಿ ಅನಪುರ, ಭೀಮುನಾಯಕ, ಮಲ್ಲಿಕಾರ್ಜುನ ಜಲ್ಲಪ್ಪನೋರ ಸೇರಿದಂತೆ ಮುಂತಾದವರು ಇದ್ದರು.

ಇದನ್ನೂ ಓದಿ: ಡ್ರಗ್ಸ್ ವಿರುದ್ಧ ನಾನು ಯುದ್ಧ ಸಾರಿದ್ದೇನೆ: ಸಿಎಂ ಬಸವರಾಜ ಬೊಮ್ಮಾಯಿ
ಗಡಿ ಭಾಗದ ರೈತರ ಕುರಿತು ಸರಕಾರ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ನಡೆದುಕೊಳ್ಳುತ್ತಿದೆ. ವಿಷಗಾಳಿ ಉಣ್ಣಿಸುತ್ತಿರುವ ಸರಕಾರ ಇದೀಗ ಮತ್ತೆ ಹೆಚ್ಚುವರಿ ಭೂ ಸ್ವಾಧೀನಕ್ಕೆ ಮುಂದಾಗುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ. -ಸಿದ್ದಣ್ಣಗೌಡ ಪಾಟೀಲ್‌, ರೈತ ಮುಖಂಡ, ಕಡೇಚೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next