Advertisement

ವಿವಿಧತೆಯಲ್ಲಿ ಏಕತೆ ಸಾಧಿಸಿದ ಏಕೈಕ ದೇಶ ಭಾರತ: ಸಕಲೇಶ್ವರಿ

05:11 PM Mar 11, 2022 | Team Udayavani |

ಕಂಪ್ಲಿ: ವೈವಿಧ್ಯಮಯ ಸಂಸ್ಕಾರ, ಸಂಸ್ಕೃತಿ ಹೊಂದಿದ ಅನೇಕತೆಯಲ್ಲಿ ಏಕತೆಯನ್ನು ಸಾಧಿಸಿದ ಜಗತ್ತಿನ ಏಕೈಕ ಶ್ರೇಷ್ಠ ದೇಶ ಭಾರತವಾಗಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿ ಸಂಚಾಲಕಿ ಸಕಲೇಶ್ವರಿ ಅಕ್ಕ ಹೇಳಿದರು.

Advertisement

ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿಯಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವದಿಂದ ಸ್ವರ್ಣಿಮ ಭಾರತದ ಕಡೆಗೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಹಾಗೂ ಪುರಸಭೆ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನರ ನಾರಾಯಣ, ನಾರಿ ಲಕ್ಷ್ಮೀಯಂತಾಗುವ ಶ್ರೇಷ್ಠ ಕರ್ಮವನ್ನು ಮಾಡಬೇಕು. ಸ್ವರ್ಣಿಮ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಮನುಷ್ಯಾತ್ಮರು ದೈವೀಗುಣಗಳಾದ ಶಾಂತಿ, ಸಮೃದ್ಧಿ, ಜ್ಞಾನ, ಶಕ್ತಿ, ಆನಂದ, ಪ್ರೀತಿ, ವಿಶ್ವಾಸಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಜಿಪಂ ಸಹಾಯಕ ಕಾರ್ಯದರ್ಶಿ ಶ್ರೀಕುಮಾರ್‌, ಪುರಸಭೆ ಅಧ್ಯಕ್ಷೆ ಶಾಂತಲಾ ವಿದ್ಯಾಧರ್‌ ಮಾತನಾಡಿದರು. ರಾಜಯೋಗ ಸಾಧಕರಾದ ರತ್ನಕ್ಕ, ಅಚ್ಚಪ್ಪ ಶರಣಪ್ಪ, ತಿಪ್ಪೇಸ್ವಾಮಿ ರೆಡ್ಡಿ, ರವೀಗೌಡ, ರಾಮಣ್ಣ, ಪ್ರಕಾಶಣ್ಣ, ಸರಸ್ವತಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next