Advertisement

ಭಾರತೀಯ ಸೇನೆಯ ಬತ್ತಳಿಕೆಗೆ ಅಮೆರಿಕ, ಇಸ್ರೇಲ್‌ನಿಂದ ಹೊಸ ಶಸ್ತ್ರಾಸ್ತ್ರ

03:37 AM Jul 14, 2020 | Hari Prasad |

ಹೊಸದಿಲ್ಲಿ: ಚೀನ ಜತೆಗಿನ ಗಡಿ ತಂಟೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸೇನೆಯನ್ನು ಮತ್ತಷ್ಟು ಆಧುನೀಕರಿಸಲು ನಿರ್ಧರಿಸಿದೆ.

Advertisement

ಅಮೆರಿಕದ ಸೈನಿಕರು ಬಳಸುವ ಮಾನವ ರಹಿತ ಪರಿವೀಕ್ಷಣಾ ಪುಟಾಣಿ ವೈಮಾನಿಕ ಸಾಮಗ್ರಿ ‘ರೇವೆನ್‌’, ಇಸ್ರೇಲ್‌ನ ಉತ್ಕೃಷ್ಟ ರಚನೆಯಾದ, ಗಂಟೆಗೆ 95 ಕಿ.ಮೀ.ವರೆಗೆ ಸಾಗಿ ಶತ್ರುಗಳ ಮೇಲೆ ದಾಳಿ ನಡೆಸಬಲ್ಲ ‘ಸ್ಪೈಕ್‌’ ಉಪಕರಣದ ಆಧುನಿಕ ಆವೃತ್ತಿಗಳನ್ನು ಖರೀದಿಸಲು ಚಿಂತನೆ ನಡೆಸಿದೆ.

ರವಿವಾರವಷ್ಟೇ 72 ಸಾವಿರ ಹೆಚ್ಚುವರಿ ಸಿಗ್‌ ಸುಯರ್‌ ರೈಫ‌ಲ್‌ಗ‌ಳನ್ನು ಅಮೆರಿಕದಿಂದ ಖರೀದಿಸಲು ತೀರ್ಮಾನಿಸಲಾಗಿತ್ತು.

ಭೂ ಸೇನೆಯನ್ನು ಮತ್ತಷ್ಟು ಬಲಶಾಲಿಯಾಗಿಸಲು ಪ್ರಯತ್ನ ಪಡುತ್ತಿರುವಾಗಲೇ ಭಾರತೀಯ ವಾಯುಪಡೆ, ಪ್ಯಾರಿಸ್‌ನಿಂದ ಐದು ರಫೇಲ್‌ ಮಲ್ಟಿ ರೋಲ್‌ ಫೈಟರ್‌ ಜೆಟ್‌ಗಳನ್ನು ಖರೀದಿಸಲು ಸಿದ್ಧತೆ ನಡೆಸಿದೆ. ಆ ಐದೂ ವಿಮಾನಗಳು ಇದೇ ತಿಂಗಳಲ್ಲಿ IAFಗೆ ಹಸ್ತಾಂತರವಾಗಲಿದ್ದು, ಅವುಗಳ ಜೊತೆಗೆ ತರಬೇತಿ ಹಂತದ ನಾಲ್ಕು ರಫೇಲ್‌ ಜೆಟ್‌ಗಳೂ ಭಾರತಕ್ಕೆ ಬರಲಿವೆ. ಐದು ಫೈಟರ್‌ ಜೆಟ್‌ಗಳನ್ನು ಅಂಬಾಲಾದಲ್ಲಿರುವ ವಾಯು ನೆಲೆಯಲ್ಲಿ ಇರಿಸಲಾಗುತ್ತದೆ.

ಇನ್ನು, ನೌಕಾಪಡೆಯು, ಸದ್ಯದಲ್ಲೇ ತನ್ನ ಪರಮಾಣು ಜಲಾಂತರ್ಗಾಮಿಯಾದ ಐಎನ್‌ಎಸ್‌ ಅರಿಘಾತ್‌ ಅನ್ನು ಸೇವೆಗೆ ಸ್ವಾಧೀನಪಡಿಸಿಕೊಳ್ಳಲು ಸಿದ್ಧತೆ ನಡೆಸಿದೆ.

Advertisement

ರೇವೆನ್‌ ವಿಶೇಷ: ಭೂ ಸೇನೆಗಾಗಿ ಅಮೆರಿಕದಿಂದ ತರಿಸಲಾಗುವ ಆರ್‌.ಕ್ಯು – 11 ಯುಎವಿ ಪರಿವೀಕ್ಷಣಾ ಸಾಧನವು, ನೆಲದಿಂದ 10 ಕಿ.ಮೀ. ಎತ್ತರದಲ್ಲಿ ಗಸ್ತು ತಿರುಗಬಲ್ಲದು. ಗಂಟೆಗೆ 95 ಕಿ.ಮೀ.ವರೆಗೆ ಸಾಗಬಲ್ಲದು. ಬರಿಗೈಯ್ಯಿಂದಲೇ ಉಡಾಯಿಸುವುದು, ರಿಮೋಟ್‌ ತಂತ್ರಜ್ಞಾನದ ಮೂಲಕ ನಿಯಂತ್ರಣಕ್ಕೊಳಪಡುವುದು ಇದರ ಮತ್ತೊಂದು ವಿಶೇಷ.

ಸ್ಪೈಕ್‌ ವಿಶೇಷ
ಲಡಾಖ್‌ನಲ್ಲಿ ಚೀನದೊಂದಿಗೆ ಮುಖಾಮುಖಿಯಾದ ಸಂದರ್ಭದಲ್ಲಿ, ಭಾರತ, ಇಸ್ರೇಲ್‌ನಿಂದ ತುರ್ತು ಖರೀದಿ ಪ್ರಕ್ರಿಯೆಯಡಿ ಸ್ಪೈಕ್‌ ಮಾರ್ಕ್‌-3 ಎಂಬ ಕ್ಷಿಪಣಿಗಳನ್ನು ಖರೀದಿಸಿತ್ತು. ಆಗ, ಅದೇ ದೇಶದಿಂದ 1 ಕಿ.ಮೀ. ದೂರದಲ್ಲಿರುವ ಶತ್ರು ಪಾಳಯವನ್ನು ಧ್ವಂಸಮಾಡಬಲ್ಲ ಕ್ಷಿಪಣಿಗಳನ್ನು ಖರೀದಿಸಲು ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next