ವಾಷಿಂಗ್ಟನ್:ವೀಸಾ ನಿಯಮಕ್ಕೆ ಸಂಬಂಧಿಸಿ ಅಮೆರಿಕ ಸರ್ಕಾರ ಮಹತ್ವದ ಬದಲಾವಣೆ ಘೋಷಣೆ ಮಾಡಿದೆ. ಹೆತ್ತವರ ವೀಸಾ ಆಧಾರದಲ್ಲಿ ಅಮೆರಿಕಕ್ಕೆ ಬಂದವರಿಗೆ ದೀರ್ಘ ಕಾಲದ ವೀಸಾ ನೀಡುವ ನಿಟ್ಟಿನಲ್ಲಿ ಇರಬೇಕಾದ ವಯಸ್ಸಿನ ಮಿತಿಯನ್ನು 21ರ ಒಳಗೇ ಇರುವಂತೆ ಆದೇಶ ಮಾಡಿದೆ.
ವೀಸಾ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಮಕ್ಕಳಿಗೆ 21 ದಾಟಿದರೆ ಅಂಥವರಿಗೆ ಹೆತ್ತವರ ಜತೆಗೆ ಅಮೆರಿಕಕ್ಕೆ ವಲಸೆ ಪ್ರಕ್ರಿಯೆ ಪೂರ್ತಿಗೊಳಿಸಲು ಅರ್ಹತೆ ಸಿಗುವುದಿಲ್ಲ.
ವಯಸ್ಸಿನ ಮಿತಿಯನ್ನು 21ರ ಒಳಗೇ ಇರಿಸಿರುವಂತೆ ಮಾಡಿರುವುದರಿಂದ ವಿಶೇಷವಾಗಿ ಭಾರತ ಮೂಲದ ನಾಗರಿಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅನುಕೂಲವಾಗಲಿದೆ. ಅಮೆರಿಕ ಸರ್ಕಾರದ ಮಕ್ಕಳ ಹಕ್ಕುಗಳ ರಕ್ಷಣೆ ಕಾಯ್ದೆ (ಸಿಎಸ್‌ಪಿಎ) ಅನ್ವಯ ಈ ಬದಲಾವಣೆ ಮಾಡಲಾಗಿದೆ. ತಂದೆ ಹಾಗೂ ತಾಯಿ ಉದ್ಯೋಗದಲ್ಲಿ ಇದ್ದು, ಅವರಿಗೆ ಕೌಟುಂಬಿಕ ಅಥವಾ ಉದ್ಯೋಗ ಆಧಾರಿತ ವೀಸಾ ನೀಡಲಾಗುತ್ತದೆ.
ಹೊಸ ವ್ಯವಸ್ಥೆಯಲ್ಲಿ ಅಮೆರಿಕ ವಲಸೆ ಮತ್ತು ಪೌರತ್ವ ಸೇವೆಗಳ ವಿಭಾಗ ಅವಧಿ ಮೀರಿದವರಿಗೆ ಹೊಸತಾಗಿ ಪೌರತ್ವ ನೀಡುವುದರ ಬಗ್ಗೆ ಮನವಿಗಳನ್ನು ಸ್ವೀಕರಿಸಲಿದೆ. ಈ ಮೂಲಕ ತೊಂದರೆಗೆ ಈಡಾಗಿರುವವರ ನೆರವಿಗೆ ಬರಲಿದೆ ಎಂದು ಇಂಪ್ರೂವ್‌ದಡ್ರೀಮ್ ಡಾಟ್ ಆರ್ಗ್‌ನ (improvethedream.org)ದೀಪ್ ಪಟೇಲ್ ಹೇಳಿದ್ದಾರೆ.