Advertisement

ವಿಶ್ವಸಂಸ್ಥೆ ವರ್ಚ್ಯುವಲ್‌ ಸಭೆ : 75ನೇ ವಾರ್ಷಿಕ ಸಾಮಾನ್ಯ ಸಭೆಗೆ ಕೋವಿಡ್ ಕಾರ್ಮೋಡ

11:59 AM Jun 10, 2020 | mahesh |

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ 75ನೇ ವಾರ್ಷಿಕ ಸಾಮಾನ್ಯ ಸಭೆ ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಆದರೆ, ವಿಶ್ವಸಂಸ್ಥೆಯ ಈ ಮಹತ್ವದ ಸಭೆಯಲ್ಲಿ ಪಾಲ್ಗೊಳ್ಳಲು ವಿಶ್ವದ ನಾಯಕರು ನ್ಯೂಯಾರ್ಕ್‌ಗೆ ಪ್ರಯಾಣಿಸುತ್ತಿಲ್ಲ. ಅದಕ್ಕೆ ಕಾರಣ ಕೋವಿಡ್. ಆ ಹಿನ್ನೆಲೆಯಲ್ಲಿ 75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಗೆ ವಿಶ್ವ ನಾಯಕರು ತೆರಳುತ್ತಿಲ್ಲ.

Advertisement

ವಿಶ್ವಸಂಸ್ಥೆಯ ಮೈಲುಗಲ್ಲುಗಳಲ್ಲಿ ಒಂದಾಗಿರುವ ಈ 75ನೇ ವಾರ್ಷಿಕ ಸಾಮಾನ್ಯ ಸಭೆ ಸೆಪ್ಟಂಬರ್‌ 15ರಿಂದ ಆರಂಭವಾಗುವ ನಿರೀಕ್ಷೆ ಇದೆ. ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಈ ಬಾರಿಯ ಸಭೆಯನ್ನು ವೀಡಿಯೋ ಕಾನ್ಫರೆನ್ಸ್‌ (ವರ್ಚುವಲ್‌) ಮೂಲಕ ನಡೆಸಲಾಗುವುದು ಎಂದು “ಎಸ್‌ಡಿಜಿ ನಾಲೆಡ್ಜ್ ಹಬ್‌’ ವೆಬ್‌ಸೈಟ್‌ ತಿಳಿಸಿದೆ.

ಈ ಮಧ್ಯೆ, ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಟಿಜ್ಜನಿ ಮೊಹಮದ್‌ ಬಾಂಡೆ, “ವಿಶ್ವದ ನಾಯಕರು ನ್ಯೂಯಾರ್ಕ್‌ಗೆ ಬರುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಏಕೆಂದರೆ, ನಾಯಕರು ಒಬ್ಬರೇ ಆಗ ಮಿಸಲು ಸಾಧ್ಯವಿಲ್ಲ. ನಾಯಕರ ಬೆಂಗಾವಲು ಪಡೆ ಸೇರಿದಂತೆ ಉನ್ನತ ಅಧಿಕಾರಿಗಳ ತಂಡ ಆಗಮಿಸಿದರೆ, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದು ಕಷ್ಟ. ಅಲ್ಲದೆ, ಇಲ್ಲಿನ ಕೇಂದ್ರ ಕಚೇರಿಯಲ್ಲಿ ವಿಶ್ವದ ನಾಯಕರು ಮುಖಾಮುಖೀಯಾಗಿ ಚರ್ಚೆ ಅಸಾಧ್ಯ’ ಎಂದರು.

ಸಾಮಾನ್ಯ ಚರ್ಚೆಗಳ ದಿನಾಂಕ ಮುಂದೂಡುವ ಸಾಧ್ಯತೆ ಇಲ್ಲ. ಆದರೆ ಕಳೆದ 74 ವರ್ಷಗಳಲ್ಲಿ ನಡೆದಂತೆ ವಿಶ್ವದ ನಾಯಕರು ವೈಯಕ್ತಿಕವಾಗಿ ಚರ್ಚೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next