Advertisement

ಲಾಡೆನ್‌ ಪುತ್ರನಿಗೆ ವಿಶ್ವಸಂಸ್ಥೆ ನಿರ್ಬಂಧ

12:30 AM Mar 03, 2019 | Team Udayavani |

ಅಲ್‌ಖೈದಾ ಉಗ್ರ ಒಸಾಮಾ ಬಿನ್‌ ಲಾಡೆನ್‌ನ ಪುತ್ರ ಹಮ್ಜಾ ಬಿನ್‌ ಲಾಡೆನ್‌ನನ್ನು ವಿಶ್ವಸಂಸ್ಥೆ ಕಪ್ಪುಪಟ್ಟಿಗೆ ಸೇರಿಸಿದೆ. ಈತ ಪಾಕಿಸ್ಥಾನ-ಅಫ್ಘಾನಿಸ್ತಾನ ಗಡಿಯಲ್ಲಿದ್ದಾನೆ ಎಂದು ಭಾವಿಸಲಾಗಿದ್ದು, ಅಲ್‌ಖೈದಾ ಉಗ್ರ ಸಂಘಟನೆಗೆ ಈತ ಮುಖ್ಯಸ್ಥನಾಗುವ ಸಾಧ್ಯತೆಯಿದೆ ಎಂದಿದೆ. ಸದ್ಯ ಐಮನ್‌ ಅಲ್‌ ಜವಾಹಿರಿ ಅಲ್‌ಖೈದಾ ಉಗ್ರ ಸಂಘಟನೆಯ ಹೊಣೆ ಹೊತ್ತಿದ್ದಾನೆ. ಈತನಿಗೆ ಸೌದಿ ಅರೇಬಿಯಾ ನೀಡಿದ ಪೌರತ್ವವನ್ನು ಹಿಂಪಡೆದಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಈಗಾಗಲೇ ಒಟ್ಟು 1267 ಐಸಿಸ್‌ ಮತ್ತು ಅಲ್‌ಖೈದಾ ಉಗ್ರರನ್ನು ನಿಷೇಧಿತರ ಪಟ್ಟಿಗೆ ಸೇರಿಸಿದೆ. ಇತ್ತೀಚೆಗೆ ಈತ ಉಗ್ರ ದಾಳಿ ನಡೆಸುವಂತೆ ಅಲ್‌ಖೈದಾ ಸದಸ್ಯರಿಗೆ ಸೂಚನೆ ನೀಡಿದ್ದ. ವಿಶ್ವಸಂಸ್ಥೆ ನಿಷೇಧದಿಂದಾಗಿ ಈತ ವಿದೇಶಗಳಿಗೆ ಪ್ರಯಾಣ ಮಾಡುವಂತಿಲ್ಲ. ಅಷ್ಟೇ ಅಲ್ಲ, ಈತನ ಸ್ವತ್ತು ಕೂಡ ಜಪ್ತಿ ಮಾಡಲಾಗುತ್ತದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next