Advertisement
ಪ್ರಸ್ತುತ (2024ರಲ್ಲಿ) ಭಾರತದ ಜನಸಂಖ್ಯೆ 145 ಕೋಟಿಗೇರಿದೆ. ಕಳೆದ ವರ್ಷವೇ ಭಾರತ ಚೀನವನ್ನು (141 ಕೋಟಿ) ಮೀರಿ ವಿಶ್ವದಲ್ಲೇ ಗರಿಷ್ಠ ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಏರಿಕೆ ಹೀಗೆಯೇ ಮುಂದುವರಿದರೆ 2060ರ ಹೊತ್ತಿಗೆ 169 ಕೋಟಿಗೆ ಮುಟ್ಟಲಿದೆ. ಬಳಿಕ ಶೇ.12ರಷ್ಟು ಜನಸಂಖ್ಯೆ ಕುಸಿದು 150 ಕೋಟಿ ಆಗಲಿದೆ ಎಂದು ವರದಿ ತಿಳಿಸಿದೆ.
ಜಗತ್ತಿನಾದ್ಯಂತ ಫಲವತ್ತತೆ ಪ್ರಮಾಣವು ನಿರೀಕ್ಷೆಗೂ ಕ್ಷಿಪ್ರವಾಗಿ ಇಳಿಕೆಯಾಗುತ್ತಿದೆ. ಹೀಗಾಗಿ ಈ ಶತಮಾನದ ಅಂತ್ಯದೊಳಗೆಯೇ ವಿಶ್ವಾದ್ಯಂತ ಜನಸಂಖ್ಯೆ ಪ್ರಮಾಣ ಕುಸಿತವಾಗಲಿದೆ ಎಂದು ವರದಿ ಅಂದಾಜಿಸಿದೆ. ಇಟಲಿ, ಜಪಾನ್, ರಷ್ಯಾ ಸೇರಿದಂತೆ 60ಕ್ಕೂ ಹೆಚ್ಚು ದೇಶಗಳಲ್ಲಿ ಈಗಾಗಲೇ ಜನಸಂಖ್ಯೆ ಉಚ್ಛಾ†ಯ ಸ್ಥಿತಿಗೆ ತಲುಪಿದೆ ಎಂದು ವರದಿ ಹೇಳಿದೆ. ಜಾಗತಿಕ ಫಲವತ್ತತೆ ಪ್ರಮಾಣ ಈಗ ಒಬ್ಬ ಮಹಿಳೆಗೆ 2.25 ಮಕ್ಕಳು.
Related Articles
63ಕ್ಕೂ ಹೆಚ್ಚು ದೇಶಗಳಲ್ಲಿ ಜನಸಂಖ್ಯೆಯ ಗಾತ್ರ ಉಚ್ಛಾ†ಯ ಸ್ಥಿತಿ ತಲುಪಿಯಾಗಿದೆ
1990ರಲ್ಲಿ ಒಬ್ಬ ಮಹಿಳೆ 3.3 ಮಕ್ಕಳಿಗೆ ಜನ್ಮ ನೀಡುತ್ತಿದ್ದಳು. ಈಗ ಜಾಗತಿಕ ಫಲ ವತ್ತತೆ ಪ್ರಮಾಣ 2.3ಗೆ ಇಳಿಕೆಯಾಗಿದೆ
2024ರಲ್ಲಿ 18 ವರ್ಷ ತುಂಬದ ಯುವತಿ ಯರಿಂದ 47 ಲಕ್ಷ ಶಿಶುಗಳಿಗೆ ಜನ್ಮ
15 ವರ್ಷ ತುಂಬದೇ ಇರುವ ಹೆಣ್ಣುಮಕ್ಕಳು 3.40 ಲಕ್ಷ ಶಿಶುಗಳಿಗೆ
ಜನ್ಮ ನೀಡಿದ್ದಾರೆ
ಕೊರೊನಾ ಸೋಂಕಿನ ಬಳಿಕ ಜಾಗತಿಕ ಜೀವಿತಾವಧಿ ಮತ್ತೆ ಏರಿಕೆಯಾಗುತ್ತಿದೆ
2080ರ ವೇಳೆಗೆ 65 ವರ್ಷ ದಾಟಿದ ಹಿರಿಯರ ಸಂಖ್ಯೆ 18 ವರ್ಷದೊಳಗಿನ ಮಕ್ಕಳಿಗಿಂತಲೂ ಹೆಚ್ಚಾಗಲಿದೆ
Advertisement